ಚನ್ನಗಿರಿ: ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಸವಾಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಹಿರಿಯೂರು ತಾಲೂಕಿನ ನಾಗೇನಹಳ್ಳಿ ಗ್ರಾಮದ ಕದರಪ್ಪ (35) ಬಂಧಿತ ಆರೋಪಿ.
ಚನ್ನಗಿರಿ ತಾಲೂಕಿನ ಗುಡ್ಡದ ಕೊಮಾರನಹಳ್ಳಿ ಗ್ರಾಮದ ಹಾಲಮ್ಮ ಎಂಬುವರ ಅಡಕೆ ತೋಟದಲ್ಲಿ ಕುರಿ ಕಾಯಲು ಕದರಪ್ಪ ಜನವರಿ ತಿಂಗಳಲ್ಲಿ ಆಗಮಿಸಿದ್ದ. ತನ್ನ ಹೆಂಡತಿಯ ಶೀಲ ಶಂಕಿಸಿ, ರಾತ್ರಿ ಮಲಗಿದಾಗ ಪತ್ನಿ ಸಾಕಮ್ಮನ ತಲೆಮೇಲೆ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ. ಮೃತ ಸಾಕಮ್ಮ ಪುತ್ರ ದಾಯನಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.
ಆರೋಪಿ ಚಿತ್ರದುರ್ಗ ಜಿಲ್ಲೆಯ ನಾಗೇನಹಳ್ಳಿ ಗ್ರಾಮದವನಾಗಿದ್ದು, ಈತ ಬೆಂಗಳೂರಿನಲ್ಲಿರುವ ಖಚಿತ ಮಾಹಿತಿ ಮೇರೆಗೆ ಚನ್ನಗಿರಿ ಡಿವೈಎಸ್ಪಿ ರಾಜಪ್ಪ ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ, ಸಂತೆಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಬಸವಾಪಟ್ಟಣ ಪೊಲೀಸ್ ಸಿಬ್ಬಂದಿ ಕೊಲೆ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕದರಪ್ಪನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.