ದಾವಣಗೆರೆ (Davanagere) : ಇನ್ಸ್ಟ್ರಾಗ್ರಾಂ ಖಾತೆಯಲ್ಲಿ ಜಾಹೀರಾತು ಮೇಲೆ ಕ್ಲಿಕ್ ಮಾಡಿ ದಾವಣಗೆರೆ ವ್ಯಕ್ತಿಯೊಬ್ಬರು 11.32 ಲಕ್ಷ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ದಾವಣಗೆರೆ ವ್ಯಕ್ತಿಯೊಬ್ಬರು ಇನ್ಸ್ಟ್ರಾಗ್ರಾಂ ನೋಡುತ್ತಿರುವ ವೇಳೆ ಒಂದು ವಿಡಿಯೋ ಬಂದಿದ್ದು ಅದರಲ್ಲಿನ ಜಾಹೀರಾತು ಮೇಲೆ ಕ್ಲಿಕ್ ಮಾಡಿದ್ದಾರೆ. ಈ ವೇಳೆ ಸೈಬರ್ ವಂಚಕರು Multiplus Clubn VIP 66 ಗ್ರೂಪಿಗೆ ಸೇರ್ಪಡೆ ಮಾಡಿದ್ದಾರೆ.
ಷೇರು ವ್ಯವಹಾರದಲ್ಲಿ ಹಣ ತೊಡಗಿಸಿ ಹಣ ಗಳಿಸುವ ಮಾಹಿತಿ ಕೊಟ್ಟು MTPS Application ಅನ್ನು google play store ಮುಖಾಂತರ Install ಮಾಡುವಂತೆ ಹೇಳಿದ್ದಾರೆ.
ಇನ್ ಸ್ಟಾಲ್ ಮಾಡಿದ ನಂತರ Multiplus Club A106 ರ ಗ್ರೂಪಿಗೆ ಸೇರಿಸಿಕೊಂಡು ನಂತರ ಪಿರ್ಯಾದಿದಾರರಿಂದ ಹಂತ ಹಂತವಾಗಿ ನಂತರ ಒಟ್ಟು 11,32,000/- ರೂ ಹಣವನ್ನು ತೊಡಗಿಸಿಕೊಂಡು 1,000/- ರೂ ಲಾಬಾಂಶದ ಹಣವನ್ನು ಪಿರ್ಯಾದಿದಾರರ ಖಾತೆಗೆ ಜಮಾ ಮಾಡಿದ್ದಾರೆ.
ಅಲ್ಲದೇ 11,31,000/- ರೂ ಹೂಡಿಕೆ ಮಾಡಿದ ಹಣಕ್ಕೆ ನನ್ನ ಖಾತೆಯಲ್ಲಿ 55,78,384.74 ರೂ ಪೈಸೆ ತೋರಿಸಿದ್ದು ಅದನ್ನು ವಿತ್ ಡ್ರಾ ಮಾಡಲು ಹೋದಾಗ ಶೇಕಡಾ 20% ರಷ್ಟು ಪ್ರಾಫಿಟ್ ಟ್ಯಾಕ್ಸ್ ಅನ್ನು ಜಮಾ ಮಾಡುವಂತೆ ಹೇಳಿದ್ದಾರೆ. ಇದರಿಂದ ಅನುಮಾನಗೊಂಡು ಪಿರ್ಯಾದಿದಾರರು ಯಾರೋ ಸೈಬರ್ ವಂಚಕರು ಆನ್ ಲೈನ್ ಮೂಲಕ ತನಗೆ ಮೋಸ ಮಾಡುತ್ತಿರುವ ಬಗ್ಗೆ ಅನುಮಾನಗೊಂಡು ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆನ್ ಲೈನ್ ಮೂಲಕ ಷೇರು ಮಾರ್ಕೆಟ್ ಗೆ ಹೂಡಿಕೆ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು, ವಂಚನೆ ಸುದ್ದಿ, ಸಂದೇಶಗಳನ್ನು ನಂಬಬಾರದು ಎಂದು ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಮನವಿ ಮಾಡಿದೆ.