ಹರಿಹರ (Davangere) : ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹಾಗೂ ದೇಶದಲ್ಲಿ ಮೊದಲ ಭಾರಿಗೆ ಭೂ ಸುಧಾರಣೆ ಕಾಯ್ದೆ ಜಾರಿ ಮೂಲಕ ಉಳುವವನೆ ಭೂ ಒಡೆಯ ಕಾನೂನು ಜಾರಿಗೆ ತಂದವರು ಮಾಜಿ ಮುಖ್ಯಮಂತ್ರಿ ಡಿ ದೇವರಾಜು ಅರಸು ಅವರು ಎಂದು ಅವರ ಪೌರಯುಕ್ತ ಸುಬ್ರಹ್ಮಣ್ಯ ಶೆಟ್ಟಿ. ಪಿ ಹೇಳಿದರು.
ನಗರದ ಶ್ರೀಮತಿ ಗಿರಿಯಮ್ಮ ಆರ್ ಕಾಂತಪ್ಪ ಶ್ರೇಷ್ಟಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ,ನಗರಸಭೆ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ 109 ನೇ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಡಿ ದೇವರಾಜು ಅರಸು ಅವರು ಪಾಳೇಗಾರಿಕೆ ಇದ್ದ ಸಂದರ್ಭದಲ್ಲಿ ಬಡಜನರ, ದೀನ ದಲಿತ ಶ್ರೇಯೋಭಿವೃದ್ದಿಗಾಗಿ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ ಭೂಮಿಯಲ್ಲಿ ʼಉಳುವವನೆ ಒಡೆಯʼ ಎನ್ನುವ ಕಾಯ್ದೆ ಜಾರಿಯಿಂದ ಜಿಲ್ಲೆಯಲ್ಲಿ ಸಾಕಷ್ಟು ಜನರು ಅರಸು ಅವರ ನಿರ್ಣಯಕ್ಕೆ ಸ್ವಾಗತಿಸಿ ಭೂಮಿಯನ್ನು ಬಿಟ್ಟು ಕೊಟ್ಟರು. ಮಲ ಹೊರುವ ಪದ್ದತಿ ನಿರ್ಮೂಲನೆ ಮಾಡಿ ಪೌರ ಕಾರ್ಮಿಕರೆಂದು ಕರೆಯಲು ಹೇಳಿದರು ಎಂದರು.
ವಸತಿ ಯೋಜನೆಯನ್ನು ಜಾರಿಗೆ ತಂದು ಸಾಕಷ್ಟು ಬಡ ಜನರಿಗೆ ಅನುಕೂಲ ಮಾಡಿಕೊಟ್ಟರು, ಇದೀಗ ಸಾಕಷ್ಟು ಜನರು ನಾನು ವಸತಿಯನ್ನು ತಂದಿದ್ದೇನೆಂದು ಹೇಳುತ್ತಿದ್ದಾರೆ. ವಸತಿ ಯೋಜನೆ ಅರಸು ಅವರ ಯೋಜನೆಯಾಗಿದೆ” ಎಂದು ತಿಳಿಸಿದರು.
Read also : Davangere news | ಖಬರಸ್ತಾನಕ್ಕೆ ವಾಟರ್ ಪ್ರೂಫ್ ಟೆಂಟ್ ಉಡುಗೊರೆ
ಉಪನ್ಯಾಸ ನೀಡಿದ ಮುಖ್ಯೋಪಾಧ್ಯಾಯರಾದ ಬಿ.ಬಿ ರೇವಣ್ಣ ನಾಯ್ಕ್, “ಡಿ ದೇವರಾಜ ಅರಸು ಅವರು ರಾಜ್ಯದ ಚರಿತ್ರೆ ಸೃಷ್ಟಿಗೆ ಮೊದಲಿಗರಾಗಿದ್ದರು. ರಾಜಕಾರಣ ಮಾಡದೇ ರಾಜ್ಯದ ಅಭಿವೃದ್ಧಿ ಮತ್ತು ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡಿದರು ಎಂದರು.
ತಹಶೀಲ್ದಾರ ಗುರುಬಸವರಾಜ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಪಂಚಾಯತ ಇ.ಒ ಸುಮಲತಾ ಎಸ್.ಪಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆಸ್ಮಾಭಾನು, ಅಹಿಂದ ಸಂಘದ ಅದ್ಯಕ್ಷ ಕೊಟ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯಮಹಾಂತೇಶ, ಎ.ಕೆ ಭೂಮೇಶ್, ತಾಲೂಕು ಆರೋಗ್ಯ ಅಧಿಕಾರಿ ಉಮ್ಮಣ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾರನಗೌಡ, ಕಾರ್ಮಿಕ ನಿರೀಕ್ಷಕಿ ಕವಿತಾ, ಪಂಚಾಯತ್‌ರಾಜ್ ಇಲಾಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಗಿರೀಶ್, ಬಿ.ಸಿಎಂ ವ್ಯವಸ್ಥಾಪಕ ಹೆಚ್.ಬಿ ಪಾಟೀಲ, ನಿಲಯಪಾಲಕರಾದ ಕುಮಾರ, ಸುಮಲತಾ, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.