Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ದಿನಮಾನ-ಪುಸ್ತಕ ವಿಮರ್ಶೆ|ಮನುಷ್ಯನ ಮಹಾಯಾನ:ಬಿ.ಶ್ರೀನಿವಾಸ
ಅಭಿಪ್ರಾಯ

ದಿನಮಾನ-ಪುಸ್ತಕ ವಿಮರ್ಶೆ|ಮನುಷ್ಯನ ಮಹಾಯಾನ:ಬಿ.ಶ್ರೀನಿವಾಸ

Dinamaana Kannada Newsಬಿ.ಶ್ರೀನಿವಾಸ
Last updated: January 30, 2026 3:30 am
Dinamaana Kannada News ಬಿ.ಶ್ರೀನಿವಾಸ
Share
ಬಿ.ಶ್ರೀನಿವಾಸ
SHARE
ಬಿ.ವಿ.ಕಕ್ಕಿಲ್ಲಾಯರ ಕೊನೆಯ ಪುಸ್ತಕ’ಮನುಷ್ಯನ ಮಹಾಯಾನ’2025 ರಲ್ಲಿ ಮತ್ತೆ ಮರುಮುದ್ರಣಗೊಂಡ ಮಹತ್ವದ ಕೃತಿ.
ಈ ಮನುಷ್ಯ ಸಮುದಾಯಗಳು ಒಂದು ಯುಗದಿಂದ ಮತ್ತೊಂದು ಯುಗಕ್ಕೆ ಒಮ್ಮೆಲೆ ಬದಲಾವಣೆಗೊಂಡವುಗಳಲ್ಲ. ನಿಧಾನವಾಗಿ ಸಾಧಿಸಲಾದ ಪ್ರಗತಿ.ಆಹಾರ ಸಂಗ್ರಹಣೆಯಿಂದ ಹಿಡಿದು ಆಹಾರ ಉತ್ಪಾದ ನೆಗೆ ಮನುಷ್ಯ ಸಮುದಾಯಗಳು ಪರಿವರ್ತನೆ ಸಾಧಿಸಿದ್ದು ಮೊತ್ತ ಮೊದಲ ಕ್ರಾಂತಿ.ಕ್ರಿಸ್ತಪೂರ್ವ 5000  ರಿಂದ ಕ್ರಿಸ್ತ ಶಕ 1000 ದ ತನಕ ಜರುಗಿದ ನಾಗರಿಕತೆಗಳ ಏಳುಬೀಳುಗಳನ್ನು ಈ ಪುಸ್ತಕದಲ್ಲಿ ಲೇಖಕರು ವಿವರವಾಗಿ ಗುರುತಿಸಿದ್ದಾರೆ.
ಪುರಾತತ್ವ ಶಾಸ್ತ್ರಜ್ಞರು ಸಂಶೋಧಿಸಿದ ಪ್ರಾಚೀನ ದಾಖಲೆಗಳಲ್ಲಿ ಮೆಸೆಪೊಟೇನಿಯಾದ ದೇವಾಲಯದ ಆದಾಯ ವೆಚ್ಚಗಳ ಲೆಕ್ಕಪತ್ರ ಹಿಂದಿರುವ ಕುತೂಹಲಕರ ಮಾಹಿತಿಯನ್ನು ಲೇಖಕರು ತಿಳಿಸುತ್ತಾರೆ .
ದೇವಾಲಯವು ಮೊತ್ತಮೊದಲ ಬ್ಯಾಂಕ್ ಆಗಿತ್ತು,ಅಲ್ಲಿನ ದೇವರು ಅಂದರೆ ಆ ಸುಪರ್ದಿಗೆ ಸೇರಿದ್ದ ಭೂಮಿಗೆ ಒಡೆಯನಾಗಿದ್ದ.ಪ್ರತಿಯೊಬ್ಬ ಶ್ರಮಿಕನೂ ದೇವರಿಗೆ ಸಲ್ಲಿಸಬೇಕಾದ ಧಾನ್ಯ ಎಷ್ಟೆಂದು ನಿಗದಿ ಯಾಗಿತ್ತು.  ದೇವರ ಭಂಡಾರದಿಂದ ಕೃಷಿಕರಿಗೆ ಸಾಲವಾಗಿ ಕೊಡಲಾಗಿದ್ದ ಬೀಜ ಹಾಗೂ ಉಳುಮೆಗೆ ನೀಡಿದ್ದ ಬಾಡಿಗೆ ಎತ್ತುಗಳ ಲೆಕ್ಕ ಮುಂತಾದುವು ಆ ದಾಖಲೆಗಳಲ್ಲಿ ದಾಖಲಾಗಿತ್ತು.
ಹೀಗೆ ದೇವರ ಭಂಡಾರದಿಂದ ಪಡೆದಿದ್ದನ್ನು ಸೂಕ್ತ ಸಮಯಕ್ಕೆ ಒಂದಿಷ್ಟು “ಕುಸುರಿ”ಸೇರಿಸಿ ಮರಳಿ ಕೊಡಬೇಕಾಗಿತ್ತು. ಹೀಗೆ ದೇವರು ಬಂಡವಾಳಗಾರನಾಗಿ, ಜಮೀನ್ದಾರನಾಗಿ, ದೇವಸ್ಥಾನವೇ ಆ ಊರಿನ ಅತಿ ದೊಡ್ಡ ಬ್ಯಾಂಕ್ ಆಗಿದ್ದ ವ್ಯವಸ್ಥೆಯ ಕುತೂಹಲಕರ ವಿಷಯಗಳನ್ನು ಲೇಖಕರು ತಿಳಿಸುತ್ತಾರೆ.

ಒಬ್ಬ ರಾಜನಿಗೆ ಏನಿದ್ದರೂ ಬೇಕು, ಎಷ್ಟಿದ್ದರೂ ಬೇಕು, ಅಂತನ್ನಿಸಿದಾಗ ದೇವರನ್ನು, ದೇವಸ್ಥಾನಗಳನ್ನು ದೋಚಲೆಂದೇ “ದೇವೋತ್ಪಾಟನ ಮಂತ್ರಿ”ಎಂಬುವರನ್ನು ನೇಮಿಸಿಕೊಂಡುದ್ದರ ಬಗ್ಗೆ ‘ರಾಜತರಂಗಿಣಿ’ಯನ್ನು ಉಲ್ಲೇಖಿಸುತ್ತಾರೆ.

ಈ ಕೃತಿಯ ‘ಹೊಸ ಧರ್ಮಗಳ ಮೇಲಾಟ’ಅಧ್ಯಾಯದಲ್ಲಿ, ಧರ್ಮಗಳಿಗೆ ಯುದ್ಧಗಳು ಏಕೆ ಬೇಕಾಗುತ್ತವೆ? ಯುದ್ಧಗಳಲ್ಲಿ “ಧರ್ಮಯುದ್ಧ”ಗಳು ಅಂತೇನಾದರೂ ಇರುತ್ತವೆಯೇ? ಎಲ್ಲಾ ಧರ್ಮಗಳು ಶಾಂತಿಯನ್ನು ಬೋಧಿಸುತ್ತವೆ.

Read also : ದಿನಮಾನ-ಪುಸ್ತಕ ವಿಮರ್ಶೆ|ಚಾರಿತ್ರಿಕ ಹೋರಾಟದ ಬೆಂಕಿಯ ಮಳೆ : ಬಿ.ಶ್ರೀನಿವಾಸ 

ದೇವರ ಮಕ್ಕಳೊಂದಿಗೆ ಹೊಡೆದಾಟ ಆಗುವುದನ್ನು ಯಾವ ದೇವರುಗಳು ತಾನೆ ಅಪೇಕ್ಷಿಸುತ್ತವೆ? ಯುದ್ಧಗಳು ನಿಜವಾಗಿ ಸಾಮ್ರಾಜ್ಯಗಳ ವಿಸ್ತರಣೆಗಾಗಿಯೇ ವಿನಃ ಧರ್ಮಗಳ ರಕ್ಷಣೆಗೆ ಅಲ್ಲ ಎಂಬುದನ್ನು ಹೇಳುತ್ತಲೇ, ಪರಮಾಣು ಬಾಂಬ್ ಭಯೋತ್ಪಾದನೆಯ ಈ ಕಾಲದ “ಯುದ್ಧ ಧರ್ಮ”ಗಳ ಮರ್ಮವನ್ನು ಅರ್ಥ ಮಾಡಿಕೊಳ್ಳುವಂತೆ, ಯಾವ ಮತಧರ್ಮಗಳೂ ಸಹ ಶ್ರಮಜೀವಿಗಳ ಹೊಟ್ಟೆಯನ್ನು ತುಂಬಿ ಸದಿರುವುದರಿಂದ ಅವುಗಳೂ ನಿಧಾನವಾಗಿ ಅವಸಾನ ಹೊಂದುತ್ತಿವೆ.ಅಂತಿಮವಾಗಿ ಮಾನವೀಯತೆಯೊಂದೇ ಪರಮ ಧರ್ಮವಾಗಿ ಮೆರೆಯುವತ್ತ ಮನುಷ್ಯನ ಮಹಾಯಾನ ಸಾಗುತ್ತಿದೆ ಎಂಬ ಆಶಯವನ್ನು ಲೇಖಕರು ವ್ಯಕ್ತಪಡಿಸುತ್ತಾರೆ.
ಭೂಮಿಯ ಉಗಮದಿಂದ, ಜೀವಿಗಳ ವಿಕಾಸ,ಮನುಷ್ಯನ ಬೆಳವಣಿಗೆಯ ಹಂತಹಂತಗಳ ಪಯಣವನ್ನು ಅತ್ಯಂತ ವೈಜ್ಞಾನಿಕವಾಗಿ ತೆರೆದಿಟ್ಟಿದ್ದಾರೆ.ಇಲ್ಲಿ ಕಲ್ಪನೆಗಳಿಲ್ಲ,ಹತ್ತು ಹಲವು ವಿಜ್ಞಾನಿಗಳ, ಇತಿಹಾಸ ಕಾರರ ಆಧಾರ ಸಹಿತವಾದ ದಾಖಲೆಗಳಾಗಿವೆ. ಶಿವರಾಮ ಕಾರಂತರ ‘ಈ ಜಗತ್ತು’ಬರೆಹಗಳ ನಂತರ ನಾನು ಓದಿದ ವಿಜ್ಞಾನ ಮತ್ತು ಪುರಾತತ್ವ ಇತಿಹಾಸಕ್ಕೆ ಸಂಬಂಧಿಸಿದ ಇಷ್ಟದ ಪುಸ್ತಕಗಳಲ್ಲಿ ಇದೂ ಒಂದು ಹೇಳ ಬಯಸುವೆ.

ವಿಮರ್ಶೆ : ಬಿ.ಶ್ರೀನಿವಾಸ
ಮನುಷ್ಯನ ಮಹಾಯಾನ
ಲೇ:ಬಿ.ವಿ.ಕಕ್ಕಿಲ್ಲಾಯ
ನವ ಕರ್ನಾಟಕ ಪ್ರಕಾಶನ

TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ-ಪುಸ್ತಕ ವಿಮರ್ಶೆದಿನಮಾನ.ಕಾಂ
Share This Article
Twitter Email Copy Link Print
Previous Article POEM ಗಾಂಧಿ ಸ್ಮೃತಿ|ರಚನೆ:ಮಂಜುನಾಥ.ಜಿ
Next Article Davanagere ಫೆ.8,9 ಮಹರ್ಷಿ ವಾಲ್ಮೀಕಿ ಜಾತ್ರೆ|ಯಶಸ್ವಿಗೆ ಅಧಿಕಾರಿಗಳು ಕ್ರಮವಹಿಸಿ:ಬಸವನಗೌಡ ದದ್ದಲ್
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Crop Insurance Scheme | ಫಸಲ್ ಬಿಮಾ ಯೋಜನೆಗೆ ಒಳಪಡಲು ರೈತರಿಗೆ ಆಹ್ವಾನ

ದಾವಣಗೆರೆ :  ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಗೆ…

By Dinamaana Kannada News

ನಗರ ಪ್ರದೇಶಕ್ಕೂ ವ್ಯಾಪಿಸಿದ ಕುರಿ ಕಾಳಗ : ಶಾಸಕ ಕೆ.ಎಸ್.ಬಸವಂತಪ್ಪ

ದಾವಣಗೆರೆ (Davanagere): ಕುರಿ ಕಾಳಗವೂ ಒಂದು ಕ್ರೀಡೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕುರಿ ಕಾಳಗ ಸ್ಪರ್ಧೆ ಆಯೋಜಿಸಲಾಗುತ್ತಿತ್ತು. ಆದರೆ ಈಗ…

By Dinamaana Kannada News

ದಾವಣಗೆರೆ|ಮಧ್ಯಸ್ಥಿಕೆ ಮತ್ತು ರಾಜಿಯಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ:ನ್ಯಾ.ವೇಲಾ ಡಿಕೆ

ದಾವಣಗೆರೆ ಆ.23: ಮಧ್ಯಸ್ಥಗಾರಿಕೆ ಮತ್ತು ರಾಜಿ ಸಂಧಾನದಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯವೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಶಿಕ್ಷಣದ ಜೊತೆಗೆ ವ್ಯವಸಾಯಕ್ಕೆ ಆದ್ಯತೆ ನೀಡಿ: ಶಾಸಕ ಬಿ.ದೇವೇಂದ್ರಪ್ಪ

By Dinamaana Kannada News
Davanagere lok raide
ತಾಜಾ ಸುದ್ದಿ

ಬೆಸ್ಕಾಂ ಎಇಇಗೆ ಲೋಕಾಯುಕ್ತ ಬಿಸಿ: ಶಿವಮೊಗ್ಗ, ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ

By Dinamaana Kannada News
Davanagere
ತಾಜಾ ಸುದ್ದಿ

ಕನ್ನಡ ಭಾಷೆಯಲ್ಲಿ ನಾಮಫಲಕ ಕಡ್ಡಾಯ : ಪಾಲಿಕೆ ಆಯುಕ್ತೆ ರೇಣುಕಾ

By Dinamaana Kannada News
Job fair
ತಾಜಾ ಸುದ್ದಿ

ಮಾಜಿ ಸೈನಿಕರಿಗೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?