ದಾವಣಗೆರೆ : ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಪ್ರೊ. ಬಿ.ಕೃಷ್ಣಪ್ಪ ) ಜಿಲ್ಲಾ ಸಮಿತಿಯ ದ.ಸಂ.ಸ 50 ನೇ ವರ್ಷಗಳ ಸಂಭ್ರಮೋತ್ಸವ ಜುಲೈ 10 ರಂದು ಡಾ.ಅಂಬೇಡ್ಕರ್ ಭವನ ಮಿಲ್ಲರ್ಸ್ ರಸ್ತೆ, ವಸಂತ ನಗರ ಬೆಂಗಳೂರು ನಲ್ಲಿ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕೆಂದು
ಎಂದು ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಕರೆ ನೀಡಿದ್ದಾರೆ.
ದಾವಣಗೆರೆಯ ಪ್ರವಾಸಿ ಮಂದಿರದಲ್ಲಿ ಕರ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ದಸಂಸ ಆರಂಭವಾಗಿ ಐವತ್ತು ವರ್ಷಗಳ ಸಂಭ್ರಮದಲ್ಲಿದ್ದೇವೆ. ಸಮಾಜದ ದೂರದೃಷ್ಠಿ, ಒಳಿತಿಗಾಗಿ ಪ್ರೋ.ಕೃಷ್ಣಪ್ಪನವರು ಒಡನಾಡಿಗಳೊಂದಿಗೆ ಪ್ರಾರಂಭಿಸಿದ ಮೂಲ ದಸಂಸ ಯ ಆಶಯಗಳನ್ನು ನಾವು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಕೃಷ್ಣಪ್ಪ ನವರು ಡಾ.ಅಂಬೇಡ್ಕರ್ ರವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟ ಎನ್ನುವ ಮೂಲಮಂತ್ರದೊಂದಿಗೆ ಸಾಮಾಜಿಕವಾಗಿ ಅನೇಕ ಹೋರಾಟಗಳನ್ನು ಸಂಘಟಿಸಲು ಕಾರಣರಾದರು ಅವರನ್ನು ನಾವು ಅನುಸರಿಸಬೇಕಿದೆ ಎಂದು ಕರೆ ನೀಡಿದರು.
ತಾಲ್ಲೂಕು ಹಾಗೂ ಜಿಲ್ಲಾ ಪದಾಧಿಕಾರಿಗಳು, ಸಾರ್ವಜನಿಕರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.
ಮಹಿಳಾ ಸಂಚಾಲಾಕಿ ವಿಜಯಲಕ್ಷ್ಮಿ , ದಾವಣಗೆರೆ ತಾಲ್ಲೂಕು ಸಂಚಾಲಕ ಹನುಮಂತಪ್ಪ ಅಣಜಿ, ಹರಿಹರ ತಾಲ್ಲೂಕು ಸಂಚಾಲಕ ಪಿ. ಜೆ. ಮಹಾಂತೇಶ್, ಜಗಳೂರು ತಾಲ್ಲೂಕು ಸಂಚಾಲಕ ಕುಬೆಂದ್ರಪ್ಪ, ನ್ಯಾಮತಿ ತಾಲ್ಲೂಕು ಸಂಚಾಲಕ ಚಂದ್ರಪ್ಪ, ಹೊನ್ನಾಳಿ ತಾಲ್ಲೂಕು ಸಂಚಾಲಕ ಪರಮೇಶ್ ಮತ್ತು ಜಿಲ್ಲಾ ಸಂಘಟನಾ ಸಂಚಾಲಕರಾದ ಪ್ರದೀಪ್. ಕೆ ಟಿ ಜೆ ನಗರ, ಮೆಳ್ಳೆಕಟ್ಟೆ ಪರುಶುರಾಮ್, ಕೊಡಗನೂರ್ ಲಕ್ಷ್ಮಣ,ಜಿಲ್ಲಾ ಖಜಾಂಚಿ ಮಂಜುನಾಥ್ ಆರ್ ತಾಲ್ಲೂಕು ಮಹಿಳಾ ಸಂಚಾಲಾಕಿ ಆರತಿ. ಎಸ್ ಮತ್ತು ತಾಲ್ಲೂಕ್ ಸಂಘಟನಾ ಸಂಚಾಲಕ ನಾಗರಾಜ್ ಬಿ ಚಿತ್ತಾನಹಳ್ಳಿ ಹಾಗೂ ಉಮಾ, ಭವಾನಿ ನಾಗರಾಜ್, ಹಾಗೂ ಇತರರು ಭಾಗವಹಿಸಿದ್ದರು.