ದಾವಣಗೆರೆ (Davanagere) : ಆಟೋದಲ್ಲಿ ಬಿಟ್ಟು ಹೋಗಿದ್ದ ಅಭರಣವನ್ನು ಮರಳಿ ದೂರುದಾರರಿಗೆ ಅಜಾದನಗರ ಪೊಲೀಸರು ಹಸ್ತಾಂತರ ಮಾಡಿದ್ದಾರೆ.
ಘಟನೆ ವಿವರ : ನಗರದ ರೈಲ್ವೆ ಸ್ಟೇಶನ್ ಮುಂಭಾಗದ ಆಟೋ ನಿಲ್ದಾಣದಲ್ಲಿ ಆಟೋ ರಿಕ್ಷಾ ಬಾಡಿಗೆ ಮಾಡಿಕೊಂಡು ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿ ಲೇ ಔಟ್ ಬಳಿ ಆಟೋ ರಿಕ್ಷಾ ಇಳಿದು ಮನೆಗೆ ಹೋಗಿ ನೋಡಿದಾಗ ಚಿನ್ನದ ಆಭರಣಗಳು ಇದ್ದ ಬ್ಯಾಗನ್ನು ಆಟೋದಲ್ಲಿ ಬಿಟ್ಟಿರುವುದು ಗಮನಕ್ಕೆ ಬಂದ ಕೂಡಲೇ ದೂರುದಾರರಾದ ನಜ್ಮಾ ಆಜಾದ್ ನಗರ ಠಾಣೆಯಲ್ಲಿ ಮಾಹಿತಿ ನೀಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಆಜಾದ್ ನಗರ ಪೊಲೀಸರು ಆಟೋರಿಕ್ಷಾ ಮತ್ತು ಚಾಲಕನನ್ನು ಪತ್ತೆ ಮಾಡಿ ಆಟೋದಲ್ಲಿದ್ದ ಬ್ಯಾಗ್ ನಲ್ಲಿದ್ದ ೧೫ ಗ್ರಾಂ ತೂಕದ ಬಂಗಾರದ ಕಿವಿ ಒಲೆ, ಸ್ಕೂಲ್ ಮಕ್ಕಳ ಬಟ್ಟೆ, ಆಧಾರ್ ಕಾರ್ಡ ಹಾಗೂ ಇತರೆ ದಾಖಲೆಗಳನ್ನು ಆಟೋ ಚಾಲಕನ ಉಪಸ್ಥಿತಿಯಲ್ಲಿ ದೂರುದಾರರಿಗೆ ಹಸ್ತಾಂತರಿಸಿದರು.
ನಗರದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶದಲ್ಲಿ ಅಜಾದನಗರ ಸಿಪಿಐ ಅಶ್ವಿನ್ ಕುಮಾರ್ ಆರ್ ಜಿ, ಸಿಬ್ಬಂದಿಗಳಾದ ಮಂಜುನಾಥ ನಾಯ್ಕ್, ನರೇಶ್ ಎ.ಪಿ., ಗುಗ್ಗರಿ ಲೋಕೇಶ್, ಖಾಜಾ ಹುಸೇನ್, ಕೃಷ್ಣ, ಎನ್, ವೆಂಕಟೇಶ್ ಜಿ ಆರ್ ಒಳಗೊಂಡ ತಂಡವು ೧ಲಕ್ಷ ರೂ ಮೌಲ್ಯದ ಆಭರಣಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂತಿರುಗಿಸಿದ್ದಾರೆ. ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಹಾಗೂ ಆಟೋ ಚಾಲಕನಿಗೆ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.
Read Also : ದಾವಣಗೆರೆಯಲ್ಲಿ ಸ್ವಚ್ಛತಾ ಕಾರ್ಯ ಪರಿಶೀಲಿಸಿದ ಮೇಯರ್ ಚಮನ್ ಸಾಬ್