ದಾವಣಗೆರೆ ( Davangere district ) : ಖೊಟಾನೋಟು ಚಲಾವಣೆ ಮಾಡಿದ ಆರೋಪಿಗಳಿಗೆ 5 ವರ್ಷ ಸಾಧಾರಣ ಶಿಕ್ಷೆ ಮತ್ತು ತಲಾ 30,000/- ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಘಟನೆ ವಿವರ : 19-06-2019 ರಂದು ಹರಿಹರದ ತರಕಾರಿ ಮಾರ್ಕೇಟ್ನಲ್ಲಿ ತೆಂಗಿನಕಾಯಿ ಮಾರಾಟ ಮಾಡುವ ವೇಳೆ ನವಿಲೇಹಾಳ ಗ್ರಾಮದ ಹನುಮಂತಪ್ಪ , ಶಾಂತ ಇವರು ತೆಂಗಿನ ಕಾಯಿ ಖರೀದಿಸಿ ೨ ಸಾವಿರ ಮುಖ ಬೆಲೆಯ ನೋಟು ನೀಡಿದ್ದರು. ಅನುಮಾನ ಬಂದು ಐದು ನೂರು ಮುಖಬೆಲೆಯ ನೋಟು ನೀಡಿದರು.ಅದು ಸಹ ಖೋಟಾನೋಟು ಎಂದು ಗೊತ್ತಾಗಿದ್ದರಿಂದ ವ್ಯಾಪಾರಿ ಫÀಕೃಸಾಬ್ ಠಾಣೆಗೆ ದೂರು ದಾಖಲಿಸಿದ್ದರು.
ಈ ಪ್ರಕರಣ ದಾಖಲಿಸಿಕೊಂಡ ಹರಿಹರ ಪೊಲೀಸರು ಸಿಪಿಐ ಹೆಚ್ ಗುರುನಾಥ ತನಿಖೆ ನಡೆಸಿ ಕೃತ್ಯಕ್ಕೆ ಉಪಯೋಗಿಸಿದ ಕಲರ್ ಜೆರಾಕ್ಸ್ ಪ್ರಿಂಟರ್ ಮತ್ತು ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿ ದಾವಣಗೆರೆ ತಾಲೂಕಿನ ೬ನೇ ಕಲ್ಲು ಗ್ರಾಮದ ಹನುಮಂತಪ್ಪ, ಚನ್ನಗಿರಿ ತಾಲೂಕಿನ ನವಿಲೆಹಾಳು ಶಾಂತ ಇವರ ವಿರುದ್ದ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣಕುಮಾರ್ ಆರ್.ಎನ್ ಆರೋಪಿತರ ಮೇಲೆ ಆರೋಪ ಸಾಬೀತಾಗಿದ್ದರಿಂದ¢-31-07-2024 ಆರೋಪಿತರಿಗೆ 5 ವರ್ಷ ಸಾದಾರಣ ಶಿಕ್ಷೆ ಮತ್ತು ತಲಾ 30000 ರೂ ದಂಢ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಕೀಲರಾದ ಜಯ್ಯಪ್ಪ ರವರು ನ್ಯಾಯ ಮಂಡನೆ ಮಾಡಿದ್ದಾರೆ.
Read also : World Day Against Human Trafficking : ಮಾನವ ಕಳ್ಳ ಸಾಗಾಣಿಕೆ ತಡೆಗೆ ಎಲ್ಲಾ ಇಲಾಖೆಗಳಿಂದ ಕ್ರಮ : ಡಿಸಿ
ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ ತನಿಖಾಧಿಕಾರಿ ಐ. ಹೆಚ್ ಗುರುನಾಥ ಹಾಗೂ ಸಿಬ್ಬಂದಿಗಳನ್ನು ಸರ್ಕಾರಿ ವಕೀಲರಾದ ಜಯ್ಯಪ್ಪ ರವರನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ ಶ್ಲಾಘೀಸಿದ್ದಾರೆ.