ದಾವಣಗೆರೆ (Davangere District) : ಗೋಕಾಕ್ ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ನಗರದ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕು ಕಳ್ಳಿಗುಡ್ಡೆ ಗ್ರಾಮದ ಸಂತೋಷ್ ಲಕ್ಷö್ಮಣ್ ಹಿರೆಡ್ಡಿ(೩೨ ವರ್ಷ) ಆತ್ಮಹತ್ಯೆಗೆ ಶರಣಾದ ಮೆಕಾನಿಕಲ್ ಇಂಜಿನಿಯರ್.
ಇವರು ಕಳೆದ ಆ.೬ರಂದು ರಾತ್ರಿ ನಗರದ ದರ್ಶನ್ ಲಾಡ್ಜ್ ನಲ್ಲಿ ರೂಮ್ ಬಾಡಿಗೆ ಪಡೆದು ಉಳಿದುಕೊಂಡಿದ್ದರು. ಬೆಡ್ ಶೀಟ್ ನಿಂದ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದು, ಬೆಡ್ ಶೀಟ್ ಜಾರಿ ಕೆಳಗಡೆ ಬಿದ್ದು ತಲೆಗೆ ಪೆಟ್ಟಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾರೆ.
Read also : DAVANAGERE CRIME NEWS : ಅಕ್ರಮವಾಗಿ ಮಾರಾಟ:10 ಲಕ್ಷ ಮೌಲ್ಯದ ಗಾಂಜಾ ವಶ, ಮೂವರು ಬಂಧನ
ನಾಲ್ಕು ದಿನಗಳ ನಂತರ ಇದು ಲಾಡ್ಜ್ ನವರ ಗಮನಕ್ಕೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.