ದಾವಣಗೆರೆ: (Davanagere Crime News) ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿ ಗಂಡನನ್ನು ಕೊಲೆ ಮಾಡಿದ ಆರೋಪಿತರನ್ನು ಹದಡಿ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ, ಮೃತನ ಹೆಂಡತಿ ಬೀಬೀ ಆಯೇಷಾ ಬಂಧಿತರು. ದಿನಾಂಕ 11.03.2023 ರಂದು ಆಯೇಷಾ ಬೀಬೀ ಗಂಡನಾದ ಇಲಿಯಾಜ್ ಅಹ್ಮದ್ ಕಾಣಿಯಾಗಿದ್ದಾರೆ ಎಂದು ಬಸವಾಪಟ್ಟಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದಾಗ ಮಂಜುನಾಥ, ಮೃತನ ಹೆಂಡತಿ ಬೀಬೀ ಆಯೇಷಾ ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿತರಿಬ್ಬರೂ ಅಕ್ರಮ ಸಂಬಂಧಕ್ಕೆ ಧಕ್ಕೆಯಾಗಬಾರದು ಎನ್ನುವ ಉದ್ದೇಶದಿಂದ ಇಲಿಯಾಜನನ್ನು ದಿನಾಂಕ: 23.02.2023 ರಂದು ಬೈಕಿನಲ್ಲಿ ಕರೆದುಕೊಂಡು ಸಾಗರಪೇಟೆ ಕ್ಯಾಂಪನಲ್ಲಿದ್ದ ಮುಕುಂದ ಡಾಬದಲ್ಲಿ ಮದ್ಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ಕುಡಿಸಿ ನಂತರ ಭದ್ರಾ ಚಾನಲ್‌ನಲ್ಲಿ ಬಲವಂತವಾಗಿ ಈಜಾಡುವಂತೆ ಮಾಡಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕಕರಾದ ವಿಜಯಕುಮಾರ ಎಂ.ಸಂತೋಷ್ ಮತ್ತು ಮಂಜುನಾಥ ಜಿ , ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ, ಸಂತೆಬೆನ್ನೂರು ವೃತ್ತ ಕಛೇರಿಯ ಸಿಪಿಐ ಲಿಂಗನಗೌಡ ನೆಗಳೂರು ರವರ ನೇತೃತ್ವದಲ್ಲಿ ಪಿಎಸ್‌ಐ ಭಾರತಿ ಬಸವಾಪಟ್ಟಣ ಠಾಣೆ ಸಿಬ್ಬಂದಿಗಳಾದ ರುದ್ರೇಶ್, ಸತೀಶ್, ರವೀಂದ್ರ, ಅಣ್ಣೇಶಿ, ಪ್ರಕಾಶ್, ಅರುಣ್ ಕುಮಾರ್, ಪರಶುರಾಮ್, ತಿಪ್ಪೇಶ ಓಲೆಕಾರ್, ತಿಮ್ಮರಾಜು, ರವಿ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ಶಾಂತರಾಜ್ ತಂಡವನ್ನು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಕೊಲೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಬೇದಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘೀಸಿದ್ದಾರೆ.