ದಾವಣಗೆರೆ (Davanagere) : ಪೋನ್ ಪೇ ಕಸ್ಟಮರ್ ಕೇರ್ ಎಂದು ಹೇಳಿ ಅಪ್ಲಿಕೇಷನ್ ಡೌನ್ಲೌಡ್ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ರೂ.5,00,000/-ರೂ ಮತ್ತು ರೂ.1,61,000/-ರೂ ಹಣ ಕಳೆದುಕೊಂಡಿದ್ದಾರೆ.
ಸೆ.6 ರಂದು ಶಿವಣ್ಣ ಅವರ ಮೊಬೈಲಿಗೆ 98 ಸಾವಿರ ಪೋನ್ ಪೇ ಮಾಡಿದಾಗ ಹಣ ವರ್ಗಾವಣೆ ಫೇಲ್ ಆಗಿದೆ. ಈ ಸಮಯದಲ್ಲಿ ಮೊಬೈಲಿಗೆ ಮೇಸಜ್ ಬಂದಿದ್ದು, ಗೂಗಲ್‍ನಲ್ಲಿ ಕಸ್ಟಮರ್ ಕೇರ್ ಹುಡುಕಿ ಕಸ್ಟಮರ್ ಕೇರ್ 9034874685 ಕರೆ ಮಾಡಿದಾಗ ಸಂಜೆಯೊಳಗೆ ಹಣ ಸಂದಾಯವಾಗಲಿದೆ ಎಂದು ಹೇಳಿ ಕರೆ ಕಟ್ ಮಾಡಿದ್ದಾರೆ.
ಸಂಜೆಗೆ ಬ್ಯಾಂಕಿಗೆ ರೂ.98,000/-ರೂ ಹಣ ಜಮ ಆಗಿದೆ. ಸೆ. 8 ರಂದು ಅಪರಿಚಿತರು 8293230369 ನಂಬರ್ ನಿಂದ ಕರೆ ಮಾಡಿ ಹಿಂದಿ ಭಾಷೆಯಲ್ಲಿ ನಾವು ಪೋನ್‍ಪೇ ಕಸ್ಟಮರ್ ಕೇರ್ ಅಂತ ಹೇಳಿ ಸಮಸ್ಯೆ ಬಗೆಹರಿದಿರುವ ಬಗ್ಗೆ ಕೇಳಿದ್ದಾರೆ. ಹಣ ವಾಪಸ್ಸು ಬಂದಿರುವ ಬಗ್ಗೆ ಹೇಳಿದಾಗ ನಮ್ಮ ಸೇವೆಗೆ ನಿಮ್ಮ ರೀವಿವ್ ಕೊಡಬೇಕು. ಈ ಸಂಬಂಧ ವಾಟ್ಸ್‍ಪ್‍ಗೆ ಲಿಂಕ್ ಕಳುಹಿಸಿ ಲಿಂಕ್ ಒಪನ್ ಮಾಡಿದಾಗ ಅಪ್ಲಿಕೇಷನ್ ಡೌನ್‍ಲೌಡ್ ಆಗಿದೆ. ನಂತರ ಓಪನ್ ಮಾಡಿ ರಿವೀವ್ ಕೊಟ್ಟ ತಕ್ಷಣ ಬ್ಯಾಂಕ್ ನಿಂದ ರೂ.5,00,000/-ರೂ ಮತ್ತು ರೂ.1,61,000/-ರೂ ಹಣ ಡಿಬಿಟ್ ಆಗಿದೆ.
Read also : Davanagere | ಶೇ 100 ರಷ್ಟು ಸಾಕ್ಷರತೆ ಸಾಧಿಸಲು ಎಲ್ಲರೂ ಶ್ರಮಿಸಿ : ಸುರೇಶ್ ಬಿ.ಇಟ್ನಾಳ್
ಸೈಬರ್ ವಂಚಕರು ಆನ್ ಲೈನ್ ಮೂಲಕ ಯಾವುದೋ ಒಂದು ಅಪ್ಲಿಕೇಷನ್ ಡೌನ್‍ಲೌಡ್ ಮಾಡಿಸಿ ಮೋಸ ಮಾಡಿದ್ದಾರೆಂದು ದೂರು ನೀಡಿದ್ದಾರೆ. ದಾವಣಗೆರೆ ಸಿ.ಇ.ಎನ್ ಅಪರಾಧ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರು ಆನ್ ಲೈನ್ ಮೂಲಕ ರೀವಿವ್ ಲಿಂಕ್, ಅಪ್ಲೀಕೇಷನ್ ಡೌನ್‍ಲೌಡ್ ಬಗ್ಗೆ ಜಾಗೃತರಾಗಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.