ದಾವಣಗೆರೆ : ಸರ್ಕಾರ ಅನೇಕ ಮಹಾನಿಯ ಜಯಂತಿಯನ್ನು ಆಚರಿಸುತ್ತಿದ್ದು ಸಮಾಜದ ಒಳತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಸೇವೆ ಹಾಗೂ ತ್ಯಾಗ ಮಾಡಿದವರು ಮಾತ್ರ ಜನಮಾನಸದಲ್ಲಿ ಉಳಿಯಲು ಸಾಧ್ಯವೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಹಡಪದ ಸಮಾಜ ಆಶ್ರಯದಲ್ಲಿ ಜಿಲ್ಲಾಡಳಿತ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬುದ್ದ, ಬಸವಾದಿ ಶರಣರು ಹಾಗೂ ಅಂಬೇಡ್ಕರ್ ಸೇರಿದಂತೆ ಅನೇಕ ಮಹಾನಿಯರು ಜನಮಾಸನದಲ್ಲಿ ಉಳಿದಿದ್ದಾರೆ. ಅವರು ಕಾಯಕವೇ ಕೈಲಾಸ ಎಂದು ಜನರ ಸೇವೆ ಮಾಡಿದ್ದರಿಂದ ಗೌರವ ಸದಾಕಾಲ ಇರುತ್ತದೆ. ಹಡಪದ ಅಪ್ಪಣ್ಣನವರು ಬಸವಣ್ಣನವರ ಬಲಗೈ ಬಂಟನೆAದೇ ಹೆಸರು ಪಡೆದಿದ್ದರು. ಅವರ ನಿಸ್ವಾರ್ಥ ಸೇವೆ, ತ್ಯಾಗದಿಂದ ಇಂದು ಎಲ್ಲರ ಮಧ್ಯೆ ಇದ್ದಾರೆ, ಇಂತಹ ವ್ಯಕ್ತಿಗಳನ್ನು ಮಾತ್ರ ನೆನೆಯಲು ಸಾಧ್ಯ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುರೇಶ್ ಬಿ. ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಂತ್, ಶ್ರೀಬಸವರಾಜೇಂದ್ರ ಶರಣರು, ಶಿವ ಶರಣ ಹಡಪದ ಸಮಾಜದ ಮುಖಂಡರು ಹಾಗೂ ಇನ್ನಿತರರು ಉಪಸ್ಥಿತರಿರುವರು.