ದಾವಣಗೆರೆ (Davanagere) : 14.110 ಟನ್ ಕಬ್ಬಿಣ ಖರೀದಿಸಿ ಅದರ ಬಾಬ್ತು 7,82,304 ರೂ.ಗಳನ್ನು ನೀಡದೆ ವಂಚಿರುವ ಘಟನೆ ನಗರದಲ್ಲಿ ನಡೆದಿದೆ.
ಗೋಕಾಕ್‌ನ ಸತೀಶ್ ಶುಗರ್ ಪ್ರೈ. ಲಿ. ಕಂಪನಿಯಲ್ಲಿ ಮಾರ್ಕೆಟಿಂಗ್ ಆಫೀಸರ್ ಆಗಿ ಕೆಲಸ ಮಾಡುತ್ತಿರುವ ಶಿವಮೊಗ್ಗದ ವಿವೇಕ್ ಕುಮಾರ್ ಅವರಿಗೆ ಹಳೆ ಕುಂದುವಾಡದ ನಾಗರಾಜ ಎಂಬ ವ್ಯಕ್ತಿ ಕರೆ ಮಾಡಿ, ನನಗೆ ಎರಡು ಸೈಟ್ ಗಳಿಗೆ ಬಳಕೆ ಮಾಡಲು 25 ಟನ್ ಕಬ್ಬಿಣ ಬೇಕೆಂದು ಕೇಳಿದ್ದು, ನಂತರ ಹಣ ಕೊಡುವುದಾಗಿ ತಿಳಿಸಿದ್ದರಿಂದ ವಿವೇಕ್ ಕುಮಾರ್ ಅವರು ಗೋಕಾಕ್‌ನ ಸತೀಶ್ ಶುಗರ್ ಕಂಪನಿಯಿಂದ 25 ಟನ್ ಕಬ್ಬಿಣವನ್ನು ಲಾರಿಯಲ್ಲಿ ಕಳುಹಿಸಿ ಹಣ ಪಾವತಿ ಮಾಡುವವರೆಗೂ ಕಬ್ಬಿಣವನ್ನು ಅನ್‌ಲೋಡ್ ಮಾಡದಂತೆ ಲಾರಿ ಚಾಲಕನಿಗೆ ತಿಳಿಸಿದ್ದಾರೆ.
ಆದರೆ ಹಳೇ ಕುಂದುವಾಡ ನಾಗರಾಜ್ ಹಣ ಪಾವತಿ ಮಾಡಿರುವುದಾಗಿ ಲಾರಿ ಚಾಲಕನಿಗೆ ದಾಖಲೆ ತೋರಿಸಿ, ಒಂದು ಸೈಟ್‌ನಲ್ಲಿ 14.110 ಟನ್ ಕಬ್ಬಿಣವನ್ನು ಇಳಿಸಿಕೊಂಡಿದ್ದರಿಂದ ವಿವೇಕ್ ಸ್ಥಳಕ್ಕೆ ಬಂದು ನೋಡಿದ್ದಾರೆ. ಆದರೆ ಸ್ಥಳದಲ್ಲಿ ಕಬ್ಬಿಣ ಇರಲಿಲ್ಲ, ಅವರು ಹಣವನ್ನೂ ಪಾವತಿ ಮಾಡಿರಲಿಲ್ಲ.
Read also : Davangere Crime News : ಟಿಪ್ಪರ್ ಲಾರಿ (Tipper lorry) ಪಲ್ಟಿ : ಚಾಲಕ ಸಾವು
ಆದ್ದರಿಂದ ತಪ್ಪು ಸ್ಥಳದ ಮಾಹಿತಿ ನೀಡಿ 7,82,304 ರೂ ಬೆಲೆಯ 14.110 ಟನ್ ಕಬ್ಬಿಣ ತೆಗೆದುಕೊಂಡು ಹೋಗಿ ಹಳೇ ಕುಂದುವಾಡ ನಾಗರಾಜ್ ಎಂಬ ವ್ಯಕ್ತಿ ಮೋಸ ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ವಿವೇಕ್ ಕುಮಾರ್ ಅವರು ದೂರು ನೀಡಿದ್ದಾರೆ.