ದಾವಣಗೆರೆ (Davanagere) : ತನ್ನವರನ್ನು ಪ್ರೀತಿಸಿ ಪರ ಧರ್ಮವನ್ನು ಗೌರಸಿ ಮಾದರಿ ಬದುಕು ಬದುಕಿದ ಪ್ರವಾದಿ ಮುಹಮ್ಮದ್ ಪೈಗಂಬರರ ಬದುಕು ಎಲ್ಲರಿಗೂ ಪ್ರೇರಕವಾಗಲಿ ಬಾಲಯೋಗಿ ಶ್ರೀ ಜಗದೀಶ್ವರ ಮಹಾಸ್ವಾಮಿಗಳು ಹೇಳಿದರು.
ಹರಿಹರ ಜಮಾ ಅತೆ ಇಸ್ಲಾಮಿ ಹಿಂದ್, ಜೈ ಕರುನಾಡು ಸಂಘ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ, ರಾಬಿತ – ಏ- ಮಿಲ್ಲತ್ ಕಮಿಟಿ ವತಿಯಿಂದ ಆಯೋಜಿಸಿದ್ದ ”ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ’ ಸಿರಾತ್ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತಪೋವನದ ಶಶಿಕುಮಾರ್ ಮೆಹರ್ವಾಡೆ ಮಾತನಾಡಿ, ಸುಳ್ಳನ್ನು ಸತ್ಯವೆಂದು ಬಿಂಬಿಸುತ್ತಿರುವ ಇಂದಿನ ಸಾಮಾಜಿ ಮಾಧ್ಯಮಗಳ ಯುಗದಲ್ಲಿ ನಾವೆಲ್ಲರೂ ನಮ್ಮ ನಮ್ಮ ಧರ್ಮವನ್ನು ಪಾಲಿಸುತ್ತ ಇನ್ನೊಬ್ಬರ ಧರ್ಮ ಮತ್ತು ನಂಬಿಕೆಗಳ ಕುರಿತು ಒಳ್ಳೆಯ ಭಾವನೆ ಮೂಡಿಸಿಕೊಂಡು ಬದುಕಲು ಕಲಿಯಬೇಕಾಗಿದೆ. ನಾವೆಲ್ಲರೂ ಪ್ರವಾದಿಗಳ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದರು.
ಹರಿಹರ ಚರ್ಚ್‌ನ ಧರ್ಮಗುರು ಫಾ. ಜಾರ್ಜ್ ಕೆ ಎ ಮಾತನಾಡಿ, ಸ್ನೇಹ ಮತ್ತು ಸದ್ಗುಣಗಳಿಂದ ಮನುಷ್ಯನನ್ನು ಗೆಲ್ಲಬಹುದು ವಿನಾಹ ಬಲ ಮತ್ತು ಶಕ್ತಿಯಿಂದ ಅಲ್ಲ ಎನ್ನುವುದು ಪ್ರವಾದಿ ಮುಹಮ್ಮದ್ ಅವರ ಸಂದೇಶವಾಗಿತ್ತು, ನಮ್ಮಲ್ಲಿ ಒಳ್ಳೆಯ ಹೃದಯ ಮತ್ತು ಉತ್ತಮ ಯೋಚನೆಗಳಿದ್ದಾಗ ಮಾತ್ರ ನಮ್ಮ ಸಮಾಜ ಉತ್ತಮವಾಗಿರಲು ಸಾಧ್ಯ ಎಂದರು.
ಮಾನವ ಬಂಧುತ್ವ ವೇದಿಕೆಯ ಅಧ್ಯಕ್ಷ ಎ.ಬಿ ರಾಮಚಂದ್ರಪ್ಪ ಮಾತನಾಡಿ, ನಮ್ಮಲ್ಲಿನ ಬೇಧಭಾವಗಲು ದೂರವಾಗಬೇಕಾದರೆ ಪ್ರವಾದಿ ಮುಹಮ್ಮದ್ ರನ್ನು ಅನುಸರಿಸುವ ಅವಶ್ಯಕತೆ ಇದೆ ಎಂದರು.
Read also : LG Havanur | ಹಿಂದುಳಿದ ವರ್ಗಗಳ ಆಯೋಗದ ವರದಿ ರೂಪುಗೊಂಡ ಬಗೆ
ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಅವರು ಮಾತನಾಡಿ, ಎಲ್ಲ ರೀತಿಯ ಕೆಡುಕುಗಳು ವಿಜ್ರಂಭಿಸುತ್ತಿದ್ದ ಕಾಲದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರು ತಮ್ಮ ಸಂದೇಶಗಳ ಮೂಲಕ ಕೆಡುಕು ಮುಕ್ತ ಸಮಾಜವನ್ನು ನಿರ್ಮಿಸಿದರು, ಅವರ ಸಂದೇಶ ಸರ್ವಕಾಲಕ್ಕೂ ಅನ್ವಯಿಸುವಂತಹದ್ದು ಇಂದು ಕೂಡ ಸಮಾಜದಲ್ಲಿ ಆರನೇ ಶತಮಾನದಲ್ಲಿದ್ದ ಎಲ್ಲ ಕೆಡುಕುಗಳು ರಾರಾಜಿಸುತ್ತಿವೆ. ಪ್ರವಾದಿ ಮುಹಮ್ಮದ್ ರ ಸಂದೇಶಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳೋಣ ಎಂದು ಹೇಳಿದರು.
Follow Us On facebook: Dinamaana Facebook
ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಖಯುಮ್ ಜಿ, ಕಾರ್ಮಿಕ ಮುಖಂಡ ಎಚ್ ಕೆ ಕೊಟ್ರಪ್ಪ, ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಎಚ್ ಮಲ್ಲೇಶ್, ಜೈ ಕರುನಾಡ ರಕ್ಷಣಾ ಸಂಘ ರಾಜ್ಯಧ್ಯಕ್ಷ ಶ್ರೀನಿವಾಸ್ ಕೊಡ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ (ಶಿವರಾಮೇಗೌಡ ಬಣ) ಇಲಿಯಾಸ್ ಅಹ್ಮದ್, ಝಮಾತೆ ಇಸ್ಲಾಮಿ ಹಿಂದ್ ಸದಸ್ಯ ಗುಲಾಬ್ ನಬಿ, ರಾಬಿತ – ಏ- ಮಿಲ್ಲತ್ ಕಮಿಟಿಯ ಉಪಾಧ್ಯಕ್ಷ ಮಹಮ್ಮದ್ ಇಕ್ಬಾಲ್ ಮಖಂದರ್, ಕರ್ನಾಟಕ ಜಾಗೃತಿ ವೇದಿಕೆಯ ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ ಕವಿತಾ ಪೇಟೆಮಠ, ರಘುಪತಿ, ರಾಜಶೇಖರ್, ಮಂಜುನಾಥಗೌಡ, ಕೊಟ್ರೇಶಪ್ಪ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ರಿಯಾಜ ಅಹಮದ್ ಕಾರ್ಯಕ್ರಮ ನಿರೂಪಿಸಿದರು,