ದಾವಣಗೆರೆ (DAVANAGERE) : ಅಪ್ಸರಾ ಐಸ್ ಕ್ರೀಮ್ಸ್ 53ನೇ ವಾರ್ಷಿಕೋತ್ಸವದಂದು 78ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ಮುಸ್ಕಾನ್ ಎಂಬ ವಿಶಿಷ್ಟ ಉಪಕ್ರಮ ಪ್ರಾರಂಭಿಸುವುದಾಗಿ ತಿಳಿಸಿದೆ.
ವಿಶ್ವಾಸಾರ್ಹ ಬ್ರಾಂಡ್ ಅಪ್ಸರಾ ಐಸ್ ಕ್ರೀಮ್ಸ್, ಪ್ರಾರಂಭದಿಂದಲೂ ತಮ್ಮ ಗ್ರಾಹಕರಿಗೆ ಪ್ರೀಮಿಯಂ ಗುಣಮಟ್ಟದ ಐಸ್ ಕ್ರೀಂಗಳನ್ನು ಒದಗಿಸುತ್ತಾ ಬಂದಿದೆ. ಈಗ ತನ್ನ 53ನೇ ವಾರ್ಷಿಕೋತ್ಸವದ ಅಂಗವಾಗಿ, ಅಪ್ಸರಾ ಐಸ್ಕ್ರೀಮ್ಸ್ ಭಾರತದ 78ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲು ವಿಶಿಷ್ಟ ಉಪಕ್ರಮವನ್ನು ಪ್ರಾರಂಭಿಸಲಿದೆ.ಆ.15ರಂದು ಮುಂಬೈ ಮತ್ತು ಪುಣೆಯಲ್ಲಿ ಪ್ರಾರಂಭಿಸಲಾಗುವುದು ಮತ್ತು ಹಂತ ಹಂತವಾಗಿ ಇತರ ನಗರಗಳಲ್ಲಿ ಕೈಗೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಕಂಪನಿಯು 53,000 (ಐಸ್ ಕ್ರೀಮ್) ಗಳನ್ನು ವಿತರಣೆ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಇನ್ನು ಎನ್‌ಜಿಓಗಳು ಮತ್ತು ಲಯನ್ಸ್ ಕ್ಲಬ್, ಲಿಯೋ, ಲಯನ್ ಇಂಟರ್ನ್ಯಾಷನಲ್ ಲ್ಯಾಂಡ್, ಸ್ವದೇಸ್ ಫೌಂಡೇಶನ್ನಂತಹ ಪ್ರಮುಖ ಸಾಮಾಜಿಕ ಸಂಸ್ಥೆಗಳು ಸಹ ಭಾಗವಾಗಲಿವೆ.
ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ಐಸ್ ಕ್ರೀಂಗಳನ್ನು ಎನ್ಜಿಒ, ಅನಾಥಾಶ್ರಮ, ವೃದ್ಧಾಶ್ರಮ ಮತ್ತು ಸರ್ಕಾರಿ ಮತ್ತು ಸರ್ಕಾರೇತರ ವಲಯದ ವಿವಿಧ ಪ್ರತಿಷ್ಠಾನಗಳಿಗೆ ವಿತರಿಸಲಾಗುವುದು.
ಅಪ್ಸರಾ ಐಸ್ ಕ್ರೀಂನ ಸ್ಥಾಪಕ ಪಾಲುದಾರ ನೆಮ್ ಚಂದ್ ಶಾ ಮಾತನಾಡಿ, ಜನರ ಮುಖದಲ್ಲಿ ನಗು ತರುವುದು ಮತ್ತು ನಮ್ಮ 53ನೇ ವಾರ್ಷಿಕೋತ್ಸವ ಆಚರಿಸುವುದು ಮುಸ್ಕಾನ್ನ ಮುಖ್ಯ ಉದ್ದೇಶವಾಗಿದೆ. ಆ.15 ರಂದು 78ನೇ ಸ್ವಾತಂತ್ರ‍್ಯ ದಿನಾಚರಣೆಯಂದು ಬಿಡುಗಡೆ ಮಾಡಲಿದ್ದೇವೆ ಎಂದರು.
Read also : Davanagere JOB news : ಅಗ್ನಿಪಥ್ ಸೇನಾ ನೇಮಕಾತಿ : ದೈಹಿಕ ,ವೈದ್ಯಕೀಯ ಪರೀಕ್ಷೆ
ಅಪ್ಸರಾ ಐಸ್ ಕ್ರೀಂನ ವ್ಯವಸ್ಥಾಪಕ ಪಾಲುದಾರ ಕೆಯೂರ್ ಶಾ ಮಾತನಾಡಿ, ಸಮಾಜದ ವಿವಿಧ ಸ್ತರಗಳನ್ನು ತಲುಪುವುದು ನಮ್ಮ ಆದ್ಯತೆಯಾಗಿದೆ. 78ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ನಾವು ನಮ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ ಎಂಬುದು ಬಹಳ ಹೆಮ್ಮೆಯ ವಿಷಯವಾಗಿದೆ. ನಮ್ಮ ಎಲ್ಲಾ ಫ್ರ‍್ಯಾಂಚೈಸ್ ಪಾಲುದಾರರು ಮತ್ತು ಸಂಸ್ಥೆಗಳಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದರು.