ದಾವಣಗೆರೆ : ಒರಿಸ್ಸಾದಿಂದ ಬೆಂಗಳೂರಿಗೆ ಹೋಗುವ ರೈಲಿನಲ್ಲಿ 34 ಲಕ್ಷ ಮೌಲ್ಯದ ಗಾಂಜಾ ಪತ್ತೆಯಾಗಿದೆ. ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳು ನಾಪತ್ತೆಯಾಗಿದ್ದಾರೆ.
ಒಂದು ಬೋಗಿಯಲ್ಲಿ ಗಾಂಜಾ ಇಟ್ಟು ಇನ್ನೊಂದು ಬೋಗಿಯಲ್ಲಿ ಇದ್ದ ಅರೋಪಿಗಳು ಪೊಲೀಸರು ಹುಡುಕಾಟ ಆರಂಭಿಸುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ.
ಚಿತ್ರದುರ್ಗದ ಬಳಿ ರೈಲು ಬೋಗಿಯಲ್ಲಿ ತಲಾ 17 ಕೆಜಿ ಎರಡು ಬ್ಯಾಗ್ ನಲ್ಲಿ 34 ಕೆಜಿ ಗಾಂಜಾ ಪತ್ತೆಯಾಗಿದ್ದು, ಪ್ರಕರಣದಾಖಲಿಸಿಕೊಂಡಿರುವ ದಾವಣಗೆರೆ ರೇಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.