ದಾವಣಗೆರೆ, ಸೆ 24 (Davanagere) : ಶಿಕ್ಷಕರು ಶಾಲೆ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಅನುಕೂಲವಾಗುವಂತೆ ಮೌಲ್ಯಾಧಾರಿತ ಶಿಕ್ಷಣ ಬೋಧಿಸಬೇಕು ಎಂದು ರೋಟರಿ ಜಿಲ್ಲೆ 3160 ಎಲ್ಲಾ ಸಾಕ್ಷರತಾ ಅಭಿಯಾನದ ಜಿಲ್ಲಾ ಸಮಾಲೋಚಕರಾದ ರೋಟೋರಿಯನ್ ವಿಶ್ವಜಿತ್ ಕೆ ಜಾದವ್ ತಿಳಿಸಿದರು.
ದಾವಣಗೆರೆ ವಿದ್ಯಾನಗರ ರೋಟರಿ ಕ್ಲಬ್ ನಲ್ಲಿ ಆಯೋಜಿಸಿದ್ದ ಶಿಕ್ಷಕರ, ಅಭಿಯಂತರರ ಹಾಗೂ ರಾಷ್ಟ್ರ ನಿರ್ಮಾಣ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂಜಿನಿಯರ್ಸ್ ಗಳು ಸರ್ ಎಂ ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಅವರ ದೈನಂದಿನ ಕೆಲಸ ಕಾರ್ಯಗಳಲ್ಲಿ ಅಳವಡಿಸಿಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ತುಂಬಾ ಅವಶ್ಯಕತೆ ಇದೆ ಎಂದರು.
Read also : Davanagere | ಹಾಜರಿ ಹಾಕಿ ಹೋದ ಕಾರ್ಯಕರ್ತೆ ಶಾಸಕರು ಎರಡು ತಾಸು ಕಾದರೂ ಬರಲೇ ಇಲ್ಲ!
ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ರಾಷ್ಟ್ರ ನಿರ್ಮಾಣ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶ್ರೀಮತಿ ಸುಜಾತ ಎಚ್ ಎನ್ ರಾಮಗೊಂಡನಹಳ್ಳಿ, ಪಾರ್ವತಮ್ಮ ಎಸ್ ಕುರ್ಕಿ,ಉಮಾದೇವಿ ಪಿ ಪಿ ಹೊಸ ಬೆಳವನೂರು ಹಾಗೂ ಸುಧಾ ಯು ಡಿ , ನಿವೃತ್ತ ಎಂಜಿನಿಯರ್ ಬಸವರಾಜ್ ಎಸ್ ಬಿ, ರೋ.ಕಲ್ಲಪ್ಪ ಎಚ್ ಕೆ, ನಿವೃತ್ತ ಪ್ರಾಂಶುಪಾಲ ರೋ. ಪರಮೇಶ್ವರಪ್ಪ ಎಸ್ ಹಾಗೂ ಅನ್ಮೋಲ್ ಶಾಲೆಯ ಗಣಕಯಂತ್ರ ಶಿಕ್ಷಕ ಶಿವಕುಮಾರ್ ಎಮ್ ಪಿ ರವರನ್ನು ಸಹ ಸನ್ಮಾನಿಸಲಾಯಿತು.
ಅಧ್ಯಕ್ಷತೆ ರೋಟರಿ ಅಧ್ಯಕ್ಷ ಮಳವಳ್ಳಿ ಎಸ್ ಎನ್ ವಹಿಸಿದ್ದರು. ಇನ್ನರ್ ವೀಲ್ ಅಧ್ಯಕ್ಷರಾದ ಪ್ರೇಮ ಮಹೇಶ್ವರಪ್ಪ, ರೋಟರಿ ಉಪರಾಜ್ಯಪಾಲ ಬಿಲ್ಲಳ್ಳಿ ಎಂ ಎನ್, ರೋಟರಿ ಹಾಗೂ ಇನ್ನರ್ವಿಲ್ ಕಾರ್ಯದರ್ಶಿ ಆಂಜನೇಯ ಮೂರ್ತಿ ಹಾಗೂ ಭಾಗ್ಯ ವೀರಣ್ಣ ಉಪಸ್ಥಿತರಿದ್ದರು.
ರೋ. ಚಂದ್ರ ಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋ.ಚಂದ್ರಪ್ಪ ಕಾರ್ಯಕ್ರಮ ನಿರ್ವಹಿಸಿದರು.