ದಾವಣಗೆರೆ (Davangere District) : ವಿರಕ್ತಮಠದ ಎಸ್ ಜೆ ಎಂ ಶಾಲೆಯಲ್ಲಿ ಮಕ್ಕಳಿಗಾಗಿ ಎಸ್. ಜೆ.ಎಂ. ಸಂತೆ ಎಂಬ ವಿಶೇಷ ಕಾರ್ಯಕ್ರಮವನ್ನು ಡಾ.ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು.
ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಸಂತೆಯ ಪರಿಚಯವನ್ನು ಮಾಡಿಕೊಡುವ ಉದ್ದೇಶದಿಂದ ಈ ಸಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅವರ ಶಾಲಾ ಪಾಠಗಳಲ್ಲಿ ತೂಕದ ಬಗ್ಗೆ ಪಾಠಗಳಿರುತ್ತವೆ ಅದನ್ನು ಪ್ರಾಯೋಗಿಕವಾಗಿ ಅವರಿಗೆ ಮನದಟ್ಟು ಮಾಡಿಕೊಡಲು ಈ ಮಕ್ಕಳ ಸಂತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರು ಏರ್ಪಡಿಸಿದ್ದಾರೆ.
Read also : Davangere University | ಮುಂದೂಡಿದ್ದ ಪರೀಕ್ಷೆ ಆ.24 ರಂದು : ಕುಲಸಚಿವ ಪ್ರೊ.ಸಿ.ಕೆ.ರಮೇಶ್
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಮಕ್ಕಳಿಗೆ ಪರಿಚಯಿಸುವ ಕೆಲಸವನ್ನು ಶಿಕ್ಷಕರು ಮತ್ತು ಪೋಷಕರು ಮಾಡಬೇಕು ಆಗ ಮಾತ್ರ ಸರ್ವಾಂಗೀಣವಾದ ಮಾಹಿತಿಯು ಮಕ್ಕಳಿಗೆ ದೊರಕುತ್ತದೆ. ಇಂತಹ ಮಾದರಿ ಪ್ರಯೋಗಗಳನ್ನು ನಮ್ಮ ವಿರಕ್ತಮಠದ ಎಸ್ ಜೆ ಎಂ .ಸ್ಕೂಲ್ ಮಾಡುತ್ತಿದೆ ದಾವಣಗೆರೆ ಹಳೆಯ ಭಾಗದಲ್ಲಿ ಕಡಿಮೆ ಶುಲ್ಕದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ವಿರಕ್ತಮಠ ನೀಡುತ್ತಿದೆ ಎಂದರು
ಮುಖ್ಯೋಪಾಧ್ಯಾಯ ರೋಷನ್ ಜಮೀರ್ , ಶಿಕ್ಷಕರಾದ ಫಾರೂಖ್ , ಜಗದೀಶ್ , ಸಿದ್ದಲಿಂಗಸ್ವಾಮಿ , ಪ್ರದೀಪ್ , ಇತರರು ಇದ್ದರು.