ದಾವಣಗೆರೆ: ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ (Davangere chigateri hospital) ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕೇರ್ ಕಂಪ್ಯಾನಿಯನ್ ಪ್ರೋಗ್ರಾಂ ಅಡಿಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. ಲಕ್ಷಾಂತರ ಮಹಿಳೆಯರಲ್ಲಿ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿ ಆರೈಕೆ ಒಡನಾಡಿ ಪ್ರಶಂಸನಾ ಪತ್ರಕ್ಕೆ ಭಾಜನವಾಗಿದೆ.
ಆಧುನೀಕತೆ ಬೆಳೆದರೂ ಕೂಡ ನಮ್ಮಲ್ಲಿ ಇನ್ನೂ ಮೂಢ ನಂಬಿಕೆಗಳು ಜೀವಂತವಾಗಿವೆ. ಅಂಥ ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಕೇರ್ ಕಂಪ್ಯಾನಿಯನ್ ಪ್ರೋಗ್ರಾಂ ಆರಂಭಿಸಲಾಗಿದೆ. ಪ್ರಸವಪೂರ್ವ, ಪ್ರಸವನಂತರ ತಾಯಂದಿರು ಮತ್ತು ಮಕ್ಕಳನ್ನು ಕುಟುಂಬಸ್ಥರು ಹೇಗೆ ನೋಡಿಕೊಳ್ಳಬೇಕೆಂದು ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಶುಶ್ರೂಷಕಿಯರು ಮಾಡುತ್ತಿದ್ದಾರೆ. ಅವರ ಈ ಸೇವೆ ಗುರುತಿಸಿ ಆರೈಕೆ ಒಡನಾಡಿ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.
ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿದ ದಾವಣಗೆರೆ ಚಿಗಟೇರಿ ಆಸ್ಪತ್ರೆ (Davangere chigateri hospital)
ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕೇರ್ ಕಂಪ್ಯಾನಿಯನ್ ಪ್ರೋಗ್ರಾಂ ಅಡಿ 2017 ರಿಂದ ಇಲ್ಲಿಯವರೆಗೆ 2,47,672 ಜನ ತಾಯಂದಿರು ಹಾಗೂ ಆರೈಕೆದಾರರಿಗೆ ಸ್ಪೂರ್ತಿ ನೀಡಿದೆ. ಕುಟುಂಬಗಳ ಆರೋಗ್ಯ ಫಲಿತಾಂಶ ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನುಇಲ್ಲಿನ ಶುಶ್ರೂಷಕಿಯರು ಹಾಗೂ ಆಪ್ತ ಸಮಾಲೋಚಕರು ಮಾಡುತ್ತಿದ್ದಾರೆ.
2014 ರಲ್ಲಿ ಆರಂಭವಾದ ಕೇರ್ ಕಂಪ್ಯಾನಿಯನ್ ಪ್ರೋಗ್ರಾಂ ಶುರುವಾಗಿದ್ದು, ವಿಶೇಷವಾಗಿ ಗರ್ಭಿಣಿಯ ಪೋಷಕರಿಗೆ ಹಾಗೂ ಕುಟುಂಬಸ್ಥರಿಗೆ ಪ್ರಸವಪೂರ್ವ, ಪ್ರಸವನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಾಗೂ ಮುಢನಂಬಿಕೆ ಹೋಗಲಾಡಿಸಿ ಅವರಿಗೆ ತಿಳುವಳಿಕೆ ನೀಡುವ ಜೊತೆಗೆ ಮಕ್ಕಳ ಆರೈಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಶುಶ್ರೂಷಕಿಯರು ಹಾಗೂ ಸಮಾಲೋಚಕರು ಮಾಡಿದ್ದಾರೆ.
ಅತಿ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಅವರು ಮಾಡಿದ್ದು, ಇದೀಗ ಆರು ಜನ ಶುಶ್ರೂಷಕಿಯರು ಹಾಗೂ ಎರಡು ಜನ ಆಪ್ತ ಸಮಾಲೋಚಕರಿಗೆ ಆರೈಕೆ ಒಡನಾಡಿ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದ್ದು ಸಂತೋಷ ತಂದಿದೆ ಡಿಎಚ್ಒ ಡಾ.ಷಣ್ಮುಖಪ್ಪ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೇರ್ ಕಂಪ್ಯಾನಿಯನ್ ಪ್ರೋಗ್ರಾಂ (Davangere chigateri hospital) ಅಡಿಯಲ್ಲಿ ಹೆರಿಗೆ ನಂತರ ತಾಯಿ ಹಾಗೂ ಮಕ್ಕಳನ್ನು ಗಂಡ, ಪೋಷಕರು ಹೇಗೆ ನೋಡಿಕೊಳ್ಳಬೇಕೆಂದು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ನಮ್ಮಲ್ಲಿ ಮೂಢ ನಂಬಿಕೆ ಆಳವಾಗಿ ಬೇರುರಿದ ಕಾಲದಲ್ಲಿ ಈ ಕಾರ್ಯಕ್ರಮ ಜಾರಿಗೆ ಬಂದಿದ್ದು, ಮೂಢ ನಂಬಿಕೆ ತೊಡೆದು ಹಾಕುವ ಕೆಲಸ ಯಶಸ್ವಿಯಾಗುತ್ತಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಿಕ ಡಾ.ನಾಗೇಂದ್ರ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೇರ್ ಕಂಪ್ಯಾನಿಯನ್ ಪ್ರೋಗ್ರಾಂ ಅಡಿಯಲ್ಲಿ ಆಸ್ಪತ್ರೆಯ ಶುಶ್ರೂಷಕಿಯರು ಹಾಗೂ ಆಪ್ತ ಸಮಾಲೋಚಕರ ಉತ್ತಮ ಸೇವೆ ಗುರಿತಿಸಿ ಇದೀಗ ಆರೈಕೆ ಒಡನಾಡಿ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದು ಸಿಬ್ಬಂದಿಗಳಲ್ಲಿ ಉಮ್ಮಸ್ಸು ಮತ್ತಷ್ಟು ಹೆಚ್ಚಿಸಿದೆ.
–ಡಾ.ನಾಗೇಂದ್ರ, ಜಿಲ್ಲಾ ಶಸ್ತ್ರ ಚಿಕಿತ್ಸಿಕ, ದಾವಣಗೆರೆ.