ದಾವಣಗೆರೆ (Davanagere): ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ 12 ವರ್ಷದಕ್ರಿಕೆಟ್, ಟೂರ್ನ ಮೆಂಟ್‍ನಲ್ಲಿ ಬೆಂಗಳೂರಿನ ಕೆಓಸಿ ‘ಎ’ ಮಾಡ್ರನ್‍ಟೀಮ್ ಪ್ರತಿನಿಧಿಸುತ್ತಿರುವ ದಾವಣಗೆರೆಯ ಯುವ ದಾಂಡಿಗ ಕೇಶವ್ ಟಿ ಅವರು 103 ರನ್‍ಗಳನ್ನು ತಂದುಕೊಟ್ಟಿದ್ದಾರೆ.
64 ಬಾಲುಗಳಿಗೆ 11 ಬೌಂಡರಿಗಳು 4 ಸಿಕ್ಸುಗಳು ಬಾರಿಸಿದ್ದಾರೆ. ಈ ಬಾಲಕನ ಆಟ ದಿಗ್ಗಜ ಕ್ರಿಕೆಟಿಗರ ಗಮನ ಸೆಳೆದಿದೆ. ದಾವಣಗೆರೆ ಕ್ರಿಕೆಟ್‍ಕ್ಲಬ್‍ನಲ್ಲಿ ತರಬೇತಿ ಪಡೆಯುತ್ತಿರುವ ಕೇಶವ್ ಟಿ ಅವರು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲೂ ಸಹ 99 ರನ್‍ಗಳನ್ನು ತಂದುಕೊಟ್ಟರು.
ಕೇಶವ್ ಟಿ ಅವರನ್ನು ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದರಾದ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು, ದಾವಣಗೆರೆ ಕ್ರೀಡಾ ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ ಮತ್ತು ಶಿವಗಂಗಾ ಶ್ರೀನಿವಾಸ್, ಕೆಎಸ್‍ಸಿಎ ತುಮಕೂರು ವಲಯದ ಸಂಚಾಲಕ ಶಶಿಧರ್, ವೈಬಿಸಿಸಿಯ ರಾಘವೇಂದ್ರ, ವರದಿಗಾರರ ಕೂಟದ ಅಧ್ಯಕ್ಷ ಬಡದಾಳ್ ನಾಗರಾಜ್, ಗೋಪಾಲಕೃಷ್ಣ, ಶಾಮನೂರು ಶಿವಶಂಕರಪ್ಪನವರ ಆಪ್ತ ಸಹಾಯಕ ಎಸ್. ರವಿಕುಮಾರ್, ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ತಿಮ್ಮೆಶ್, ಬಾಲರಾಜ್, ಧ್ರುವ, ಮನೋಜ್, ರಮೇಶ್ ಮತ್ತು ಇನ್ನಿತರ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
Read also : Youth Fund Scheme | ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ