ದಾವಣಗೆರೆ ಡಿ. 30 : ನಗರದ ಟಿ.ವಿ ಸ್ಟೇಷನ್ ಕುಡಿಯುವ ನೀರು ಘಟಕವನ್ನು ತಾತ್ಕಾಲಿಕವಾಗಿ ಹತ್ತು ದಿನಗಳ ಕಾಲ ನಿಲುಗಡೆಗೊಳಿಸುತ್ತಿದ್ದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಕೆ.ಯು.ಐ.ಡಿ.ಎಫ್.ಸಿ ಇಲಾಖೆಯಿಂದ ಜಲಸಿರಿ ಯೋಜನೆಯಡಿ ಟಿ.ವಿ ಸ್ಟೇಷನ್ ಕುಡಿಯುವ ನೀರು. ಪುನಃಶ್ಚೇತನ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಡಿ. 30 ರಿಂದ ಜ. 9, 2026 ರವರೆಗೆ ಎಸ್.ಪಿ.ಬಿ ಕಾಲೋನಿ, ಕೆ.ಎಸ್.ಆರ್.ಟಿ.ಸಿ ಡಿಪೋ ಮತ್ತು ಎನ್.ಸಿ.ಸಿ ಘಟಕದ ಸುತ್ತಮುತ್ತ ಕೆ.ಬಿ.ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ, ಜಯನಗರ, ಸರಸ್ವತಿ ನಗರ, ಶಕ್ತಿ ನಗರ, ಸುಬ್ರಮಣ್ಯ ನಗರ, ಶ್ರೀನಿವಾಸ ನಗರ, ಲೋಕಿಕೆರೆ ಮುಖ್ಯ ರಸ್ತೆ, ಕೈಗಾರಿಕಾ ಪ್ರದೇಶ, ಕೆ.ಟಿ.ಜೆ ನಗರ, ಜಯದೇವ ಸರ್ಕಲ್, ಡಿ.ಸಿ.ಎಂ ‘ಎ’ ‘ಆ’ ಮತ್ತು ‘ಸಿ’ ಬ್ಲಾಕ್, ಪಿ.ಬಿ.59 ರಸ್ತೆ ರಿಲಯನ್ಸ್ ಬಜಾರ್ ಸುತ್ತ, ನಿಟುವಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ವ್ಯತ್ಯಯವಾಗಲಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
Read also : ಸಂವಿಧಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವಹೇಳನ:ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ


