ದಾವಣಗೆರೆ (Davangere district ) : ಸರ್ಕಾರದ ಅಸ್ಥಿರತೆಗಾಗಿ ಬಿಜೆಪಿ ಯತ್ನಿಸುತ್ತಿದ್ದು ಮುಖ್ಯಮಂತ್ರಿಗೆ ರಾಜ್ಯಪಾಲರು ನೋಟಿಸ್ ನೀಡಿರುವುದು ಸರ್ಕಾರ ಕೆಡುವುದಕ್ಕೆ ನಡೆಸಿದ ಹುನ್ನಾರೆಂದು ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ವಿನಾಯಕ B N ಅನುಮಾನ ವ್ಯಕ್ತಪಡಿಸಿದ್ದಾರೆ .
ಕಾನೂನು ಸಲಹೆ ಪಡೆಯದೆ ರಾಜ್ಯಪಾಲರು ಸುಖಾಸ್ ನೋಟಿಸ್ ನೀಡಿದ್ದಾರೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾದ ರಾಜ್ಯಪಾಲರು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ, ಪಶ್ಚಿಮ ಬಂಗಾಳ , ಕೇರಳ ತಮಿಳುನಾಡು ರಾಜ್ಯಗಳಲ್ಲೂ ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರ ಅಸ್ತಿರುಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಟೀಕಿಸಿದರು.
ಸರ್ಕಾರ ಕೆಡವಲು ಬಿಜೆಪಿ ಪ್ರಯತ್ನಿಸಿದರೆ ಈ ಕನ್ನಡಿಗರ ಸರ್ಕಾರದ ಉಳಿವಿಗಾಗಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ನ ಮೆಟ್ಟಿಲು ಹತ್ತಲು ಚಿಂತಿಸುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರ ಆಡಳಿತದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅನ್ಯ ಪಕ್ಷಗಳು ಸರ್ಕಾರ ರಚಿಸಿ ಆಡಳಿತ ನಡೆಸುವುದನ್ನು ಸಹಿಸುವುದಿಲ್ಲ ಹಾಗಾಗಿ ಏನಾದರೂ ಕುತಂತ್ರ ಮಾಡುತ್ತಿರುವುದೆಂದು ದೂರಿದರು.
ಬಿಜೆಪಿಯವರು ಕರ್ನಾಟಕ ರಾಜ್ಯ ಸರ್ಕಾರವನ್ನು ಕೆಡವಲು ಪ್ರಯತ್ನಿಸಿದರೆ ಕನ್ನಡಿಗರು ತಕ್ಕ ಉತ್ತರ ನೀಡುತ್ತಾರೆಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ