ಹರಿಹರ (Harihara): ಹರಿಹರದ ಗುರುಭವನದಲ್ಲಿ ಈಚೆಗೆ ದಾವಣಗೆರೆ ಜಿಲ್ಲಾ ಸ್ಕ್ವಾಯ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯ ಮಟ್ಟದ ಸ್ಕ್ವಾಯ ಮಾರ್ಷಲ್ ಆರ್ಟ್ ಚಾಂಪಿಯನ್ ಸ್ಪರ್ಧೆಯಲ್ಲಿ ದಾವಣಗೆರೆ ತಂಡ ಉತ್ತಮ ಪ್ರದರ್ಶನ ನೀಡಿ ಡಿ.7 ರಂದು ಹರಿಯಾಣದ ಪಂಚಕುಲಾದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿಜೇತರು: ಅಂಡರ್-11 ಬಾಲಕರ ವಿಭಾಗದಲ್ಲಿ ಮೊಹಮ್ಮದ್ ಜೈನ್, ಮೊಹಮ್ಮದ್ ಸಾಗರ್, ಅಮಾನ್ ಎಂ.ಎ., ಅನೀಶ್ ಕುಮಾರ್ ಎ.ಎ. ಚಿನ್ನದ ಪದಕ, ಮೊಹಮ್ಮದ್ ಅಫ್ನಾನ್ ಬೆಳ್ಳಿ, ಮೊಹಮ್ಮದ್ ಅಫ್ನಾನ್ ಕಂಚಿನ ಪದಕ ಹಾಗೂ ಅಂಡರ್-11 ಬಾಲಕಿಯರ ವಿಭಾಗದಲ್ಲಿ ಮಾಹೀನ್ ಚಿನ್ನ, ಫಾತಿಮಾ ಕೌಸರ್ ಬೆಳ್ಳಿ ಪದಕ ಪಡೆದಿದ್ದಾರೆ.
ಅಂಡರ್-14 ಬಾಲಕರ ವಿಭಾಗದಲ್ಲಿ ಸೈಯದ್ ಆಯಾನ್, ವಿನಯ್ ಎಂ.ಎ. ಚಿನ್ನದ ಪದಕ, ಅಂಡರ್-14 ಬಾಲಕಿಯರ ವಿಭಾಗದಲ್ಲಿ ಮದೀಹಾ ತಾಜ್ ಮತ್ತು ಸಾಕ್ಷಿ ಎಚ್.ಎಚ್. ಚಿನ್ನ ಹಾಗೂ ವೈಷ್ಣವಿ ಬೆಳ್ಳಿ ಪದಕ ಪಡೆದಿದ್ದಾರೆ. ಅಂಡರ್-18 ಬಾಲಕಿಯರ ವಿಭಾಗದಲ್ಲಿ ಹುಸ್ನಾ ಪಾರಿ ಮತ್ತು ಫಕೀಹಾ ಕೌನೈನ್ ಚಿನ್ನದ ಪದಕ ಪಡೆದಿದ್ದಾರೆ.
ಅಸೋಸಿಯೇಷನ್‌ನ ರಾಜ್ಯ ಘಟಕದ ಅಧ್ಯಕ್ಷ ಗಿರೀಶ್, ಪ್ರಧಾನ ಕಾರ್ಯದರ್ಶಿ ಆಯೇಷಾ ಫರೀನ್, ಸಂಸ್ಥಾಪಕ ರವಿ ಕುಮಾರ್, ಜಂಟಿ ಕಾರ್ಯದರ್ಶಿ ಮೊಹಮ್ಮದ್ ಅಲಿ, ಹಾಗೂ ದಾವಣಗೆರೆ ಸ್ಕ್ವಾಯ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸೈಯದ್ ಶೋಯೆಬ್ ವಿಜೇತರಿಗೆ ಅಭಿನಂದಿಸಿದ್ದಾರೆ.
Read also : Davanagere | ಪ್ರತಿಯೊಬ್ಬರಿಗೂ ಕಾನೂನು ಅರಿವು ಅವಶ್ಯ : ನ್ಯಾ. ಶ್ರೀರಾಮ್ ಹೆಗಡೆ