ದಾವಣಗೆರೆ (Davanagere) : ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ವಿಜಯದಶಮಿ ಹಾಗೂ ದಸರಾ ಪ್ರಯುಕ್ತ ಪೌರ ಕಾರ್ಮಿಕರಿಗೆ ಪಾಲಿಕೆ ಸದಸ್ಯ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಉಡುಗೊರೆ ನೀಡಿ ಗೌರವಿಸಲಾಯಿತು.
ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಪೌರಕಾರ್ಮಿಕರು ಮಳೆ, ಗಾಳಿ, ಚಳಿ ಎನ್ನದೇ ನಗರದ ಸ್ವಚ್ಛತೆಗೆ ಶ್ರಮಿಸುತ್ತಾರೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವ ಜೊತೆಗೆ ನಗರ ಸ್ವಚ್ಛತೆಯಾಗಿರಲು ಅವರೇ ಕಾರಣ. ಅವರಿಗೆ ಗೌರವಿಸಬೇಕೆಂಬ ಸದುದ್ದೇಶದಿಂದ ಉಚಿತವಾಗಿ ಉಡುಗೊರೆ ನೀಡಿ ಅಭಿನಂದಿಸಲಾಗುತ್ತದೆ. ಕಳೆದ ವರ್ಷವೂ ಪೌರಕಾರ್ಮಿಕರಿಗೆ ಸನ್ಮಾನಿಸಲಾಗಿತ್ತು. ಈ ವರ್ಷವೂ ಈ ಪರಂಪರೆ ಮುಂದುವರಿದಿದೆ ಎಂದು ತಿಳಿಸಿದರು.
ಪೌರ ಕಾರ್ಮಿಕರ ಶ್ರಮದಿಂದಲೇ 38 ನೇ ವಾರ್ಡ್ ಎಂ ಸಿ ಸಿ ಬಿ ಬ್ಲಾಕ್ ಇಷ್ಟೊಂದು ಸ್ವಚ್ಛವಾಗಿರಲು ಕಾರಣ. ತಮಗೆ ವಹಿಸಿದ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ. ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸ್ವಚ್ಛತೆ ವಿಚಾರದಲ್ಲಿ ಜನರ ಸಮಸ್ಯೆಗೆ ಕೂಡಲೇ ಸ್ಪಂದಿಸುತ್ತಾರೆ. ಪೌರಕಾರ್ಮಿಕರ ಕಾರ್ಯಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಬೇಕು ಎಂದು ಹೇಳಿದರು.
ಪೌರಕಾರ್ಮಿಕರು ಮಾತನಾಡಿ, ಪ್ರತಿವರ್ಷವೂ ನಮ್ಮನ್ನು ಗುರುತಿಸಿ, ಉಡುಗೊರೆ ನೀಡುವ ಜೊತೆ ಅಭಿನಂದನೆ ಸಲ್ಲಿಸುತ್ತಿರುವ ಗಡಿಗುಡಾಳ್ ಮಂಜುನಾಥ್ ರ ಕಾರ್ಯವೈಖರಿಗೆ ಧನ್ಯವಾದ ಎಂದು ತಿಳಿಸಿದರು.
Read also : Davanagere | ಈಶ್ವರಮ್ಮ ಶಾಲೆಗೆ ರಾಜ್ಯ ಮಟ್ಟದ ಶಿಕ್ಷಣ ಚೈತನ್ಯ ಪ್ರಶಸ್ತಿ
ಈ ವೇಳೆ ಕಾಂಗ್ರೆಸ್ ಮುಖಂಡರಾದ ಕಾಂಗ್ರೆಸ್ ಮುಖಂಡರು, ವಾರ್ಡ್ ನ ಪ್ರಮುಖರು, ಹಿರಿಯರು ಹಾಜರಿದ್ದರು.