ದಾವಣಗೆರೆ : ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿಸಲು ಏಪ್ರಿಲ್ 2024 ರಿಂದ ಪ್ರಾರಂಭವಾಗಿದ್ದು ಸಕಾಲದಲ್ಲಿ ಪಾವತಿಸಿದವರಿಗೆ ಆಸ್ತಿ ತೆರಿಗೆಯ ಮೇಲೆ ಶೇ.5 ರಷ್ಟು ರಿಯಾಯತಿ ನೀಡುವ ಸೌಲಭ್ಯವನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ. ಸ್ವತ್ತಿಗೆ ಸಂಬಂಧಿಸಿದ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸಿ ಶೇ.5 ರ ರಿಯಾಯಿತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಆಸ್ತಿ ತೆರಿಗೆ ಪಾವತಿಸಿಕೊಳ್ಳುವ ಸ್ಥಳ: ವಲಯ ಕಚೇರಿ-1, ಮಹಾನಗರಪಾಲಿಕೆ, ರಾಜೀವಗಾಂಧಿ ಬಡಾವಣೆ, ಬೂದಾಳ್ ರಸ್ತೆ ದಾವಣಗೆರೆ. ವಲಯ ಕಚೇರಿ-2, ಮಹಾನಗರಪಾಲಿಕೆ, ಲೋಕಿಕೆರೆ ರಸ್ತೆ, ಟಿವಿ ಸ್ಟೇಷನ್ ಎದುರು ದಾವಣಗೆರೆ, ವಲಯ ಕಚೇರಿ-3, ಮಹಾನಗರಪಾಲಿಕೆ, ಆಶ್ರಯ ಆಸ್ಪತ್ರೆ ಪಕ್ಕ ದಾವಣಗೆರೆ, ಸಾರ್ವಜನಿಕರು ವೆಬ್ ಸೈಟ್ಲಿಂ http://davanagerecitycorp.org ಉಪಯೋಗಿಸಿಕೊಂಡು ಮತ್ತು ಗೂಗಲ್ ಪೇ, ಪೋನ್ ಪೇ, ನಗದು, ಚೆಕ್ ಮುಖಾಂತರವೂ ಸಹ ಆಸ್ತಿ ತೆರಿಗೆ ಪಾವತಿಸಬಹುದೆಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.