ದಾವಣಗೆರೆ (Davangere) : ವಿವಿಧ ಗ್ರಾಮಗಳಲ್ಲಿ ಜಮೀನುಗಳಲ್ಲಿ ಮೋಟಾರು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ 2.55 ಲಕ್ಷ ಮೌಲ್ಯದ ಮೋಟರ್ ಗಳು ಹಾಗೂ ಕೃತ್ಯಕ್ಕೆ ಬಳಸಿದ 02 ವಾಹನಗಳು ವಶ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಸ್ಮಾಯಿಲ್ ಜಬೀವುಲ್ಲಾ, ಮಹಮ್ಮದ್ ಸಲೀಂ, ಮುಬಾರಕ್, ಅಮೀರ್, ರಾಜಭಕ್ಷಿ, ಇಮ್ರಾನ್ ಉಲ್ಲಾ, ಶೇಖ್ ಹುಸೇನ್ ಬಂಧಿತ ಆರೋಪಿಗಳು.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಆವರಗೊಳ್ಳ, ಎಲೆ ಬೇತೂರು, ಅಗಸನಕಟ್ಟೆ ಗ್ರಾಮಗಳಲ್ಲಿ ರೈತರ ಜಮೀನುಗಳಲ್ಲಿ ಹಾಗೂ ಮನೆಯ ಬಳಿ ಇದ್ದ ಮೋಟರ್ ಗಳು ಕಳ್ಳತನವಾಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿತರ ಪತ್ತೆಗಾಗಿ ದಾವಣಗೆರೆ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯ್ ಕುಮಾರ್ ಸಂತೋಷ್, ಮಂಜುನಾಥ, ಡಿವೈಎಸ್ಪಿ ಬಸವರಾಜ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿ.ಐ ಕಿರಣ್ ಕುಮಾರ್ ಇ.ವೈ ನೇತೃತ್ವದಲ್ಲಿ ಪಿಎಸ್ಐ ಜೋವಿತ್ ರಾಜ್ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣಗಳಲ್ಲಿನ ಆರೋಪಿತರ ಮತ್ತು ಮಾಲು ಪತ್ತೆ ಬಗ್ಗೆ ಕಾರ್ಯಾಚರಣೆ ನಡೆಸಿ ಕೃತ್ಯವೆಸಗಿದ ಆರೋಪಿತರನ್ನು ದಸ್ತಗಿರಿ ಮಾಡಿ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿತನ ಪತ್ತೆ ಕಾರ್ಯ ಮುಂದುವರೆದಿದೆ.
ಆರೋಪಿತರನ್ನು ಮತ್ತು ಸ್ವತ್ತನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಮೇಲ್ಕಂಡ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಾದ ನಾಗಭೂಷಣ, ಮಹಮ್ಮದ್ ಯೂಸೂಫ್, ವೀರೇಶ್, ಹನುಮಂತ ರವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ.
Read also : ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತ ಹೆಚ್ಚಳ : ಚಿತ್ರನಟ ಮಂಡ್ಯ ರಮೇಶ್