ದಾವಣಗೆರೆ (Davanagere) : ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದಡಿ ಬಡ ಕುಟುಂಬದಲ್ಲಿನ ವೃದ್ದರ ಜೀವನ ಅಧಾರಕ್ಕಾಗಿ ರಾಷ್ಟ್ರೀಯ ವೃದ್ದಾಪ್ಯ ಪಿಂಚಣಿ ಯೋಜನೆ, ರಾಷ್ಟ್ರೀಯ ಕುಟುಂಬ ಸೌಲಭ್ಯ, ರಾಷ್ಟ್ರೀಯ ಮಾತೃತ್ವ ಸೌಲಭ್ಯಗಳ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮಾ.ಕರೆಣ್ಣವರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ದಾವಣಗೆರೆ ಜಿಲ್ಲಾ ಹಿರಿಯ ನಾಗರೀಕರ ಸಂಘ ಹಾಗೂ ಹಿರಿಯ ನಾಗರೀಕರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದ ಎಂಸಿಸಿ ಬಿ ಬ್ಲಾಕಿನಲ್ಲಿರುವ ಬಾಪೂಜಿ ಶಾಲೆಯ ಮೈದಾನದಲ್ಲಿ ಭಾನುವಾರ ವಿಶ್ವ ಹಿರಿಯ ನಾಗರೀಕರ ದಿನಾಚಣೆ 2024ರ ಪ್ರಯುಕ್ತ ನಡೆದ ಹಿರಿಯ ನಾಗರೀಕರಿಗಾರಿ ಕ್ರೀಡಾ ಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ಉದ್ಘಾಟನೆ ನರವೇರಿಸಿ ಮಾತನಾಡಿದರು.
ದೇಶದಲ್ಲಿ ವೃದ್ದರ ಸಂಖ್ಯೆ ಹೆಚ್ಚುತ್ತಿದೆ. ಅವರ ರಕ್ಷಣೆ ಸರ್ಕಾರ ಮತ್ತು ಸಾಮಾಜಿಕ ಸಂಘಟನೆಗಳ ಜವಾವ್ದಾರಿಯಾಗಿದೆ. ಅವರ ಅನುಭವ ಶಕ್ತಿ , ಸಾಮಥ್ರ್ಯಗಳನ್ನು ಸಮಾಜ ಸದ್ಬಳಕೆ ಮಾಡಿಕೊಳ್ಳಬೇಕು. ಹಿರಿಯ ನಾಗರೀಕರ ಕಾಯಿದೆ 2007 ಮತ್ತು ವೃದ್ದರ ಪಾಲನೆ ಪೋಷಣೆ ಕುರಿತ ಯೋಜನೆಗಳು ಜಾರಿಯಲ್ಲಿ ಇದ್ದರೂ ಸಹ ನಿರ್ಲಕ್ಷಿತ ವೃದ್ದರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಷಾಧನೀಯ ಎಂದರು.
ನಿವೃತ್ತ ಪೊಲೀಸ್ ಅಧೀಕ್ಷಕ ರವಿ ನಾರಾಯಣ್ ಮಾತನಾಡಿ, ಹಿರಿಯ ನಾಗರೀಕರ ಬಗ್ಗೆ ಸಮಾಜದಲ್ಲಿ ಗೌರವಾದರಗಳು ಕಡಿಮೆ ಆಗುತ್ತಿದ್ದು, ಅವರ ಅನುಭವದ ಸೇವಯನ್ನು ಪರಿಗಣಿಸುತ್ತಿಲ್ಲ. ಅಲ್ಲದೇ ಹಿರಿಯ ನಾಗರೀಕರಿಗಾಗಿ ಇರುವ ಸೌಲಭ್ಯಗಳನ್ನು ಇತ್ತೀಚೆಗೆ ಸರ್ಕಾರಗಳು ಮೊಟಕು ಮಾಡಲಾಗುತ್ತಿದೆ. ಹಿರಿಯ ನಾಗರೀಕರಿಗಾಗಿ ರೈಲ್ವೆ ಪ್ರಯಾಣದಲ್ಲಿ ರಿಯಾಯಿತಿ ಕಡಿಮೆ, ವೃದ್ದರು ತಮ್ಮ ಜೀವನಾಸರೆಗಾಗಿ ಬ್ಯಾಂಕುಗಳಲ್ಲಿ ಇಟ್ಟಿರುವ ಠೇವಣಿ ಮೇಲಿನ ಬಡ್ಡಿಯನ್ನು ಕಡಿತ ಮಾಡಿರುವುದು ಖಂಡನೀಯ ಎಂದರು.
Read also : Davanagere news | ವಸತಿ ರಹಿತರಿಗೆ ನಿವೇಶನ ಹಂಚಿಕೆಗೆ ಒತ್ತಾಯ
ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್‍ಕುಮಾರ್ ಮಾತನಾಡಿ, ಕರ್ನಾಟಕದಲ್ಲಿ 58 ಲಕ್ಷ ಜನ ಹಿರಿಯ ನಾಗರೀಕರಿದ್ದಾರೆ. ಸಮಾಜದಲ್ಲಿನ ಅನ್ಯಾಯ, ಶೋಷಣೆ, ಭ್ರಷ್ಠಾಚಾರಗಳ ವಿರುದ್ದ ಹಿರಿಯ ನಾಗರೀಕರು ಸಂಘಟಿತರಾಗಿ ಧ್ವನಿ ಎತ್ತಬೇಕಾಗಿದೆ. ಸಮಾಜವು ಮತ್ತು ಇಂದಿನ ಯುವ ಜನತೆ ಹಿರಿಯ ನಾಗರೀಕರಿಗೆ ಗೌರವ, ರಕ್ಷಣೆ ನೀಡಬೇಕಾಗಿದ್ದು, ಅವರ ಘನತೆಯುತ ಬದುಕಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಹಿರಿಯರು ತಮ್ಮ ಪರವಾಗಿ ಇರುವ ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳಬಾರದು. ಅನಿವಾರ್ಯ ಸಂದರ್ಭದಲ್ಲಿ ಕಾನೂನಿನ ಮೊರೆ ಹೋಗಬೇಕೆಂದು ತಿಳಿಸಿದರು.
ಅಧ್ಯಕ್ಷತೆ ದಾವಣಗೆರೆ ಜಿಲ್ಲಾ ಹಿರಿಯ ನಾಗರೀಕರ ಸಂಘದ ಗೌರವ ಕಾರ್ಯದರ್ಶಿ ಎಸ್.ಗುರುಮೂರ್ತಿ, ದಾವಣಗೆರೆ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಜಿ.ಭರತ್‍ರಾಜ್, ಜಿಲ್ಲಾ ವಿಕಲಚೇತನರ, ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಕೆ.ಕೆ.ಪ್ರಕಾಶ್ ಇದ್ದರು.