ದಾವಣಗೆರೆ ಜುಲೈ.10 : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಿಗೆ 6 ನೇ ತರಗತಿಗೆ ಶೇ 10 ರಷ್ಟು ಮೀಸಲಿರಿಸಿ ವಿಶೇಷ ವರ್ಗಗಳ ಅಡಿಯಲ್ಲಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಸಪಾಯಿ ಕರ್ಮಚಾರಿ, ಗುರುತಿಸಲ್ಪಟ್ಟ ಮ್ಯಾನುಯಲ್ ಸ್ಕ್ಯಾವೆಂಜೆರ್ಗಳ ಮಕ್ಕಳು ಮತ್ತು ಮೊಮ್ಮಕ್ಕಳು, ಪೌರ ಕಾರ್ಮಿಕ, ಚಿತಾಗಾರದ ಕಾರ್ಮಿಕರ ಮಕ್ಕಳು, ಸ್ಮಶಾನ ಕಾರ್ಮಿಕರ ಮಕ್ಕಳು, ಬಾಲ ಕಾರ್ಮಿಕರು, ಜೀತ ವಿಮುಕ್ತ ಕಾರ್ಮಿಕರ ಮಕ್ಕಳು, ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು,ಶೇ. 25 ಗಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮಕ್ಕಳು, ಹೆಚ್.ಐ.ವಿ ಗೆ ತುತ್ತಾದ ಪೋಷಕರ ಮಕ್ಕಳು, ಏಕ ಪೋಷಕರನ್ನು ಮಾತ್ರ ಹೊಂದಿರುವ ಅಥವಾ ಅನಾಥ ಮಕ್ಕಳು, ಗುರುತಿಸಿರುವ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ, ಅತೀ ಸೂಕ್ಷ್ಮ ಸಮುದಾಯದ, ಸೈನಿಕರು ಮತ್ತು ಮಾಜಿ ಸೈನಿಕರು, ಸರ್ಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು ಪ್ರವೇಶ ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ 22 ವಸತಿ ಶಾಲೆಗಳಿದ್ದು ಈ ವಸತಿ ಶಾಲೆಗಳಿಗೆ ಆನ್ಲೈನ್ ಮೂಲಕ http://cetonline.karnataka.goc.in/kreis24d ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು.
ವಿಶೇಷ ವರ್ಗದ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಲ್ಲಿ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ದೃಢೀಕರಿಸಿ ಕಚೇರಿಗೆ ಅಥವಾ ಹತ್ತಿರದ ವಸತಿ ಶಾಲೆ(ಪ.ಜಾತಿ,ಪ.ಪಂ,ಹಿ.ವರ್ಗ) ಪ್ರಾಂಶುಪಾಲರನ್ನು ಸಂಪರ್ಕಿಸಿ ಪ್ರವೇಶ ಪಡೆಯಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ತಿಳಿಸಿದ್ದಾರೆ.