ದಾವಣಗೆರೆ (Davangere District) : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಛಾಯಾಗ್ರಾಹಕರು ಆಧುನಿಕ ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ (MP Dr. Prabha Mallikarjun) ಸಲಹೆ ನೀಡಿದರು.
ಜಿಲ್ಲಾ ಫೋಟೋಗ್ರಾಫರ್ಸ್-ವೀಡಿಯೋಗ್ರಾಫರ್ಸ್ ಸಂಘ ಹಾಗೂ ಫೋಟೋಗ್ರಾಫರ್ಸ್ ಯೂತ್ ವೆಲ್ಫೇರ್ ಅಸೋಸಿಯೇಷನ್ ಸಹಯೋಗದಲ್ಲಿ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನ (Bapuji Bank Community Bhawan) ದಲ್ಲಿ ಏರ್ಪಡಿಸಿದ್ದ ದೇವನಗರಿ ಪ್ರೋ ಇಮೇಜ್-2024 ಹಾಗೂ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಕ್ಷಣಗಳನ್ನು ಸುಂದರವಾಗಿ ಸೆರೆ ಹಿಡಿಯುವ ಛಾಯಾಗ್ರಾಹಕರು ನಮಗೆ ಒಳ್ಳೆಯ ನೆನಪುಗಳನ್ನು ಸೃಷ್ಟಿಸಿಕೊಡುತ್ತಾರೆ. ಇದರಿಂದ ನಮ್ಮ ಇತಿಹಾಸ ಬೇರುಗಳು ಭದ್ರವಾಗಿ ಉಳಿಯಲು ಛಾಯಾಗ್ರಹಣವು ಸಹಕಾರಿಯಾಗಿದೆ ಎಂದರು.
ಶುಭ ಸಮಾರಂಭಗಳು ಸದಾ ನಮ್ಮ ಕಣ ಮುಂದೆ ಕಾಯುವಂತೆ ಮಾಡುವುದು ಛಾಯಾಗ್ರಾಹಕರ ಶಕ್ತಿಯಾಗಿದೆ. ನ್ಯಾಷನಲ್ ಜಿಯಾಗ್ರಫಿ ಪುಸ್ತಕದಲ್ಲಿ ಪ್ರದರ್ಶಿಸಲಾಗುವ ಭೂಮಂಡಲದಲ್ಲಿನ ಪ್ರಕೃತಿ, ಮರುಭೂಮಿ, ಧ್ರುವ ಪ್ರದೇಶ, ಸಮುದ್ರ ಎಲ್ಲದರ ಫೋಟೋಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಲಿವೆ ಎಂದು ಹೇಳಿದರು.
ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ವಿಜಯ್ ಜಾಧವ್, ಫೋಟೋಗ್ರಾಫರ್ಸ್ ಯೂತ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ. ಅಗಡಿ, ಶಿವಮೊಗ್ಗ ಜಿಲ್ಲಾ ಸಂಘದ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್, ಹಾವೇರಿ ಜಿಲ್ಲಾ ಸಂಘದ ಅಧ್ಯಕ್ಷ ರಾಜೇಂದ್ರ ರಿತ್ತಿ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಸಯ್ಯದ್ ರಹಮತ್ ಉಲ್ಲಾ, ಗದಗ ಜಿಲ್ಲಾಧ್ಯಕ್ಷ ಪವನ್ ಕೆ. ಮೆಹರವಾಡೆ, ವಿಜಯನಗರ ಜಿಲ್ಲೆ ಪ್ರಭಾರ ಅಧ್ಯಕ್ಷ ಕೆ. ರಾಮಣ್ಣ, ಕೊಪ್ಪಳ ಜಿಲ್ಲಾ ಸಂಘದ ಅಧ್ಯಕ್ಷ ವಿಜಯಕುಮಾರ್ ವಸ್ತ್ರದ್ ಮತ್ತಿತರರು ಉಪಸ್ಥಿತರಿದ್ದರು.