ದಾವಣಗೆರೆ (Davanagere) : ವ್ಯಸನಮುಕ್ತ ಜೀವನ ಪ್ರತಿಯೊಬ್ಬರಿಗೂ ಅವಶ್ಯಕ ಎಂದು ಪಾಲಿಕೆ ಸದಸ್ಯ ಅಜಯಕುಮಾರ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆವತಿಯಿಂದ ಹಮ್ಮಿಕೊಂಡಿದ್ದ 1885 ಮದ್ಯವರ್ಜನಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದುಶ್ಚಟಗಳ ಸೇವನೆಯಿಂದ ಕುಟುಂಬದ ನೆಮ್ಮದಿ ಹಾಳಾಗುತ್ತದೆ, ಕುಟುಂಬದವರ ಮಧ್ಯ ಭಿನ್ನಾಭಿಪ್ರಾಯ ಉಂಟಾಗುತ್ತದೆ ಅದ್ದರಿಂದ ಪ್ರತಿಯೊಬ್ಬರು ವ್ಯಸನಮುಕ್ತ ಜೀವನ ನಡೆಸುವಂತೆ ಕರೆ ನೀಡಿದರು.
ಸಮಾಜ ನಮಗಾಗಿ ಗಾಳಿ, ನೀರು, ಆಹಾರ ನೆಮ್ಮದಿಯ ಬದುಕು ನೀಡಿದೆ.ಆದರೆ, ಸಮಾಜಕ್ಕಾಗಿ ನಾವೇನು ನೀಡಲಿಲ್ಲ, ಹುಟ್ಟು ಖಚಿತ, ಸಾವು ನಿಶ್ಚಿತ ಹುಟ್ಟು ಸಾವಿನ ಮಧ್ಯ ನಾವೇ ಹೇಗೆ ಬದುಕುತ್ತೇವೆ ಎಂಬುದು ಬಹುಮುಖ್ಯ. ಸುಂದರ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯು ಮಾರ್ಗದರ್ಶನ ನೀಡುತ್ತಿದೆ. ಸುಂದರ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿರುವ ಕ್ಷೇತ್ರದ ಡಾ|| ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರವಾದದ್ದು ಎಂದರು.
ಅತೀ ಕಡಿಮೆ ಬಡ್ಡಿದರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಮುಖಾಂತರ ಸಾಲದ ವ್ಯವಸ್ಥೆಯನ್ನು ಕಲ್ಪಿಸಿ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದುವಂತೆ ಸೇವೆ ಸಲ್ಲಿಸುತ್ತಿದ್ದಾರೆ, ಮದ್ಯವರ್ಜನಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಜೀವನಕ್ಕೆ ಕಾಲಿಡುತ್ತಿರುವ 63 ಶಿಬಿರಾರ್ಥಿಗಳು ಜೀವನದಲ್ಲಿ ಇಂದಿನಿಂದ ಹೊಸಗುರಿಯನ್ನು ಇಟ್ಟುಕೊಂಡು ಕುಟುಂಬವನ್ನು ಹಾಗೂ ಕುಟುಂಬದವರ ಜೀವನವನ್ನು ಅಭಿವೃದ್ಧಿಪಡಿಸುವಲ್ಲಿ ಶ್ರಮಿಸುವಂತೆ ಕರೆಕೊಟ್ಟರು
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಹೊನ್ನಾಳಿ ಬಾಬಣ್ಣ ಮಾತನಾಡಿ, ಜನಜಾಗೃತಿ ಕಾರ್ಯಕ್ರಮವು ಧರ್ಮಸ್ಥಳಗ್ರಾಮಭಿವೃದ್ಧಿ ಯೋಜನೆಯ ಒಂದು ಭಾಗವಾಗಿದ್ದು ಇದು ಮನ ಹಾಗೂ ಮನೆಗಳನ್ನು ಪರಿವರ್ತನೆ ಮಾಡುವಂತಹ ಕಾರ್ಯಕ್ರಮವಾಗಿದೆ. ಮದ್ಯವರ್ಜನಾ ಶಿಬಿರದಂತಹ ಕಾರ್ಯಕ್ರಮಗಳಿಂದ ಕುಟುಂಬದ ಅಭಿವೃದ್ಧಿಗೆ ಸಹಕರಿಯಾಗಿದ್ದು ಇದರಲ್ಲಿ ಭಾಗವಹಿಸಿ ವ್ಯಸನ ಮುಕ್ತ ಜೀವನಕ್ಕಾಗಿ ಕಾಲಿಟ್ಟಿರುವವರು ಮುಂದಿನ ಶಿಬಿರಗಳಿಗೆ ಇತರರನ್ನು ಪ್ರೇರೆಪಿಸುವಂತೆ ತಿಳಿಸಿದರು.
1885 ನೇ ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ|| ಪ್ರಭು ಎಂಸಿ ಮಾತನಾಡಿ, ಆರೋಗ್ಯ ಎಂದರೆ ದೈಹಿಕವಾಗಿ, ಶಾರೀರಿಕವಾಗಿ, ಮಾನಸಿಕವಾಗಿ ಕೌಟುಂಬಿಕವಾಗಿ ಉತ್ತಮ ರೀತಿಯಲ್ಲಿದ್ದರೆ ಉತ್ತಮ ಆರೋಗ್ಯ ನಿರ್ವಹಣೆ ಮಾಡಬಹುದು, ಮದ್ಯವರ್ಜನಾ ಶಿಬಿರವು ಮನಪರಿವರ್ತನೆ ಶಿಬಿರವಾಗಿದ್ದು ಪಾಲ್ಗೊಂಡಿರುವ ಎಲ್ಲಾ ಶಿಬಿರಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಜೀವನ ನಡೆಸುವಂತೆ ಸಲಹೆ ನೀಡಿದರು.
ಮಧ್ಯವ್ಯಸನಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಯಾವುದೇ ಮದ್ದು ಮಾತ್ರೆ ಇಲ್ಲದೆ ಕೇವಲ ಮನಪರಿವರ್ತನೆ ಮುಖಾಂತರನವ ಜೀವನಕ್ಕೆ ಕಾಲಿರಿಸುತ್ತಿರುವ 63 ಮಂದಿಶಿಬಿರಾರ್ಥಿಗಳಿಗೆ ಕುಟುಂಬದಿನದಲ್ಲಿ ಮದ್ಯವರ್ಜನಾಶಿಬಿರದ ಪ್ರಯೋಜನ, ಪೂಜ್ಯಹೆಗ್ಗಡೆಯವರ ಆಶಯ, ಜನಜಾಗೃತಿಸಮಿತಿ ನಿರ್ವಹಿಸುವ ಕೆಲಸಕಾರ್ಯಗಳ ಬಗ್ಗೆ ಮಾತನಾಡಿ 63 ಶಿಬಿರಾರ್ಥಿಗಳಿಗೆ ನವ ಜೀವನಕ್ಕೆ ಆಹ್ವಾನವನ್ನು ಜನಜಾಗೃತಿ ಯೋಜನಾಧಿಕಾರಿ ನಾಗರಾಜ್ಕುಲಾಲ್ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಶ್ರೀನಿವಾಸ್ ಬಿ, ಸಾಗರ್ ಜರೇಕಟ್ಟೆ, ತಿಪ್ಪಣ್ಣ, ಬಸವರಾಜ್, ಶಿವಪ್ರಸಾದ್, ರುದ್ರಪ್ಪ, ದಿವಾಕರ್, ಯೋಜನೆಯ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ನವ ಜೀವನ ಸದಸ್ಯರು, ಸ್ಥಳೀಯ ಸದಸ್ಯರು ಉಪಸ್ಥಿತರಿದ್ದರು.
Read also : Davanagere | ಅತ್ಯಾಚಾರ ಪ್ರಕರಣ : ಆರೋಪಿಗೆ 03 ವರ್ಷ ಕಾರಾಗೃಹ ಶಿಕ್ಷೆ