ಹರಿಹರ (Davanagere) : ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಧೂಳೇಹೊಳೆ ಗ್ರಾಮದ ದುರ್ಗಾಬಿಂಕಾ ದೇವಿ, ಗುಂಡಿ ಬಸವೇಶ್ವರ, ಚೌಡೇಶ್ವರಿ ದೇವಿ, ರಾಮೇಶ್ವರ ಹಾಗೂ ಕಲ್ಲೇಶ್ವರ ದೇವರುಗಳಿಗೆ ಹಾಲು ತುಪ್ಪದ ನೈವೇದ್ಯ ಕಾರ್ಯಕ್ರಮ ಬಹು ವಿಜ್ರಂಭಣೆಯಿಂದ ನಡೆಯಿತು.
ದಿ 20 ರಂದು ಸಂಜೆ 6 ಗಂಟೆಯಿಂದ 10 ಗಂಟೆಯವರೆಗೆ ಅಣ್ಣಪ್ಪ ಅಜ್ಜೇರ ಸಿರಿಗನ್ನಡ ರಾಷ್ಟ್ರಿಯ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಕಲಾ ರತ್ನ ಪುರಸ್ಕೃತರ ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ರಾತ್ರಿ 10 ರಿಂದ ಬೆಳಗಿನ ಜಾವದವರೆಗೆ
ದಾವಣಗೆರೆ ಜಿಲ್ಲೆ ಕೋಲ್ಕುಂಟೆ ಶ್ರೀ ವೀರಾಂಜನೇಯ ಭಜನಾ ಸಂಘ ಹಾಗೂ ಹರಿಹರ ತಾಲೂಕಿನ ಗಂಗನರಸಿ ಶ್ರೀ ದುರ್ಗಾಂಭಿಕಾ ಭಜನಾ ಸಂಘದ ಸದಸ್ಯರು ಬೆಳಗಿನ ಜಾವದ ವರೆಗೆ ಭಜನಾ ಕಾರ್ಯ ನೆರವೇರಿಸಿದರು.
ದಿ 21 ರಂದು ಬೆಳಿಗ್ಗೆ 5 ಗಂಟೆ ಸಮಯ ಭ್ರಾಹ್ಮಿ ಮುಹೂರ್ತದಲ್ಲಿ ಶ್ರೀ ದೇವಿಗೆ ತುಂಗ ಭದ್ರಾ ನದಿಯಲ್ಲಿ 101 ಪೂಜೆ ಸಲ್ಲಿಸಿ, ಸಕಲ ವ್ಯಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ, ಹಾಲು, ತುಪ್ಪ, ನೈವೇದ್ಯ ದೊಂದಿಗೆ ಪಡ್ಲಿಗೆಗಳ ತುಮಬಿಸುವ ಹಾಗೂ ಅನ್ನಸಂತರ್ಪಣೆ ಕಾರ್ಯ ನಡೆಯಿತು.
ಧೂಳೆಹೊಳಿ ಗ್ರಾಮದ ಸದಾಶಿವಯ್ಯ ಸ್ವಾಮಿಗಳು ಶಾಸ್ತ್ರೋತ್ತವಾಗಿ ಪೂಜಾ ಕಾರ್ಯವನ್ನು ನಡೆಸಿಕೊಟ್ಟರು. ದೇವರುಗಳ ದರ್ಶನಕ್ಕಾಗಿ ಇಂಗಳಗೊಂದಿ, ಹುಲಗಿನಹೊಳೆ, ಎಳೆಹೊಳೆ, ಹೊಳೆಸಿರಿಗೆರಿ, ಕಮಲಾಪುರ, ನಂದಿಗಾವಿ, ಹೊಸಳ್ಳಿ, ಬಿಳಸನೂರು ಸೆರಿದಂತೆ ಮುಂತಾದ ಗ್ರಾಮಗಳ ಬಕ್ತರು ಆಗಮಿಸಿದ್ದರು. ಹಿರಿಯ ಗೊರವಯ್ಯ ತಿಪ್ಪೇಶಪ್ಪ ಎ ಸೆರಿದಂತೆ ಅನೇಕರು ತಮ್ಮ ಸೇವೆ ಸಲ್ಲಿಸಿದರು.
ದೂಳೆಹೊಳೆ ಗ್ರಾಮದ ಮುಖಂಡರು, ಗ್ರಾಮ ಪಂಚಾಯತಿ ಸದಸ್ಯರಾದ ಶಿಲ್ಪಾ ಹೆಚ್ ಬನ್ನಿಕೊಡ, ಮಹಿಳಾ ಸಂಘಗಳ ಸದಸ್ಯರು, ದುರ್ಗಾಂಭಿಕಾ ಕಮಿಟಿಯ ಗೌರವಾಧ್ಯಕ್ಷ ಕೆ.ತಿಪ್ಪೇರುದ್ರಪ್ಪ, ಅಧ್ಯಕ್ಷ ಪರಶುರಾಮಪ್ಪ ಅಜ್ಜೇರ, ಕಾರ್ಯದರ್ಶಿ ಕೆ.ನಿಂಗಪ್ಪ ಮೂಕನವರ, ಖಜಾಂಚಿ ಮಂಜಪ್ಪ ಅಜ್ಜೇರ, ಎಂ.ಬಸವರಾಜಪ್ಪ, ಎಂ. ಚಂದ್ರಪ್ಪ, ಉಚ್ಚೆಂಗೆಪ್ಪ ಬಿ, ಪೀರವರ ಬಸಪ್ಪ, ಪೂಜಾರ ನೀಲಪ್ಪ, ಮಲ್ಲಪ್ಪ ಕೆ, ಮಂಜಪ್ಪ, ರಾಜಪ್ಪ ಎ, ಮಂಜಪ್ಪ ಎ, ಜಿ ಅಣ್ಣಪ್ಪ, ಪಿ ರಾಜಪ್ಪ, ಎಂ ರೇವಣಪ್ಪ, ಕೆ.ಕಟ್ಟೆಪ್ಪ, ಎನ್ ನಾಗರಾಜ, ಎ ಮುತ್ತಪ್ಪ, ಎಂ ಅಣ್ಣಪ್ಪ ಸೇರಿದಂತೆ ಗ್ರಾಮದ ಹಿರಿಯರು ಮುಖಂಡರು, ಯುವಕರು ಉತ್ಸಾಹದಿಂದ ಭಾಗವಹಿಸಿದ್ದರು.