Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ದಿನಮಾನ-ಪುಸ್ತಕ ವಿಮರ್ಶೆ|ಚಾರಿತ್ರಿಕ ಹೋರಾಟದ ಬೆಂಕಿಯ ಮಳೆ : ಬಿ.ಶ್ರೀನಿವಾಸ 
ಅಭಿಪ್ರಾಯ

ದಿನಮಾನ-ಪುಸ್ತಕ ವಿಮರ್ಶೆ|ಚಾರಿತ್ರಿಕ ಹೋರಾಟದ ಬೆಂಕಿಯ ಮಳೆ : ಬಿ.ಶ್ರೀನಿವಾಸ 

ಬಿ.ಶ್ರೀನಿವಾಸ
Last updated: January 28, 2026 3:16 am
ಬಿ.ಶ್ರೀನಿವಾಸ
Share
B.Srineevas davanagere
SHARE
ಎಪ್ಪತ್ತರ ದಶಕದ ಕೊನೆಯ ಭಾಗದಲ್ಲಿ ಕರ್ನಾಟಕದ ರಾಜಕಾರಣ,ಸಾಮಾಜಿಕ ಚಳವಳಿಗಳು ,  ಮಾರ್ಕಸ್‌ ವಾದಿ  ವಿದ್ಯಾರ್ಥಿ ಚಳವಳಿಗಳ ಮಳೆಗಾಲವೇ ಇತ್ತೆನ್ನಬಹುದು. ಈ ಚಳವಳಿಯ ಪ್ರಾಡಕ್ಟ್ ಗಳೋ ಎಂಬಂತೆ ನೂರಾರು ದಲಿತ ಬರೆಹಗಾರರು, ಮೇಲ್ವರ್ಗಗಳ ಹಲವಾರು ಬರಹಗಾರರು ಪ್ರಗತಿಪರವಾಗಿ ಆಲೋಚಿಸಲು ಕಾರಣವಾಯಿತು.
ಅನಕ್ಷರಸ್ಥರೂ ಕೂಡ ಪದಕಟ್ಟಿ ಹಾಡು ಕಟ್ಟಿ ಹಾಡ ತೊಡಗಿದರು. ಅದೇ ತಾನೆ ಅಕ್ಷರಗಳಿಗೆ ತೆರೆದುಕೊಳ್ಳುತ್ತಿದ್ದ ಯುವ ಸಮುದಾಯವೂ ಹೊಟ್ಟೆಯೊಳಗಿನ ಹಸಿವು, ಅವಮಾನ,ಶೋಷಣೆ ಮತ್ತು ಸಂಕಟ ಗಳನ್ನೆಲ್ಲಾ ಹಾಡಾಗಿ ಹಾಡ ತೊಡಗಿದರು.
ಈ ಹೋರಾಟದ ಹಾಡುಗಳು ಮನುಷ್ಯ ಪ್ರಜ್ಞೆಯನ್ನೇ ಕಳೆದುಕೊಂಡಂತಿದ್ದ ಸಮಾಜವೊಂದರ ಎಚ್ಚರಿಕೆಯ ಕಥಾನಕವನ್ನು ಹೇಳಲಿಕ್ಕೆ ಆರಂಭಿಸಿದವು ಎನ್ನಬಹುದು.
ಇಂಥ ಸಂಕ್ರಮಣ ಕಾಲಘಟ್ಟದಲ್ಲಿ ಹುಟ್ಟಿದ ಅರಿವು ಕೂಡ ಒಂದು ಹೊಸ ಜ್ಞಾನ ಮಾರ್ಗದ ಉದಯಕ್ಕೆ ಕಾರಣವಾಗಿ, ಕನ್ನಡ ಸಾಹಿತ್ಯ ಕೂಡ ವೈವಿಧ್ಯತೆಯಿಂದ ಅರಿವನ್ನು ವಿಸ್ತರಿಸಿ ಕೊಂಡಿದ್ದಂತೂ ಸತ್ಯ.
ಇಂಥ ಅಪರೂಪದ ಹೋರಾಟದ ಹಾಡುಗಳನ್ನು, ಹಾಡುಗಾರರನ್ನು ಹುಡುಕಿ, ಒಂದು ಕಡೆ ಕಲೆಹಾಕಿ “ಬೆಂಕಿಯ ಮಳೆ”ಯನ್ನು ಪುಸ್ತಕರೂಪದಲ್ಲಿ ಹಿಡಿದಿಟ್ಟು, ನಮ್ಮ ನಡುವಿನ ಹೋರಾಟಗಾರ, ದಿಟ್ಟ ದನಿಯ ಸಾಹಿತಿ ಡಾ.ಬಿ.ಎಂ. ಪುಟ್ಟಯ್ಯ ಅನುಭವ ಪ್ರಕಾಶನದ ಮೂಲಕ ಕನ್ನಡದ ಅರಿವಿನ ಜಗತ್ತನ್ನು ಮತ್ತಷ್ಟು ವಿಸ್ತರಿಸಿದ್ದಾರೆ.

ಮುನ್ನೂರಕ್ಕೂ ಹೆಚ್ಚು ಹಾಡುಗಳಿರುವ ಈ ಪುಸ್ತಕದಲ್ಲಿ

ಸಿದ್ಧಲಿಂಗಯ್ಯನವರ
ದೊಡ್ಡಗೌಡರ ಬಾಗಿಲೀಗೆ ನಮ್ಮ ಮೂಳೆಯ ತ್ವಾರಣ
ನಮ್ಮ ಜನಗಳ ಕಾಲುಕಯ್ಯಿ ಕಂಬ ಅವರ ಹಟ್ಟಿಗೆ…..

ಕೋಟಿಗಾನಹಳ್ಳಿ ರಾಮಯ್ಯರ 
ನಮ್ಮೂರ ಗುಡಿಯನ್ನು ಕಟ್ಟಿದೋರು ಯಾರಣ್ಣಾ
ಕಟ್ಟೀದ ನಮ್ಮನೆಲ್ಲಾ ಹೊಲೆ ಮಾದಿಗರೆನ್ನುತ್ತಾರೆ

ಡಾ.ಮಲ್ಲಿಕಾ ಘಂಟಿಯವರ..
ಮೊಲೆಯಿಂದ ಹರಿದು ಬಂದಿಹ ಹಾಲು
ಹಾಲಲ್ಲ ಮಗುವೆ ಅದು
ನನ್ನೆದೆಯ ನಂಜು
ಅಂದುಕೊಂಡು ಬೆಳೆಯಬೇಕಿಂದು ನೀ ನಂಜುಂಡನಾಗಿ
ನನ್ನೆದೆಯ ಬೆಂಕಿಗೆ ತಂಪೆರೆಯಲು.

ಜಂಬಣ್ಣ ಅಮರಚಿಂತರ 
ಯಾರಯ್ಯಾ ಯಾರಿವರು?ಕಣ್ಣಿಗಂತೂ ಕಾಣರು ಪೆಟ್ರೋಮ್ಯಾಕ್ಸ್ ಹೊತ್ತವರು ಬೆಳಕಿನಡಿಯ ಕತ್ತಲಲ್ಲಿ ಕತ್ತಲೆಯ ಹುದಲಲ್ಲಿ ಹೊತ್ತು ಹೋಗುತ್ತಿರುವವರು

ಚೆನ್ನಣ್ಣ ವಾಲೀಕಾರರ 
ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ

ಆರ್.ಮಾನಸಯ್ಯರ 
ಶ್ಯಾರಿಗಂಜಿಗಾಗಿ ಸೇರು ಬೆವರು ಸುರಿಸುತ್ತಾ
ಊರೂರು ತಿರುಗುವವರ್ಯಾರಯ್ಯ…
ಈ ನಾಡು ಕಟ್ಟಿದವರು ನಾವೆಲ್ಲಿಗ್ಹೋಗಬೇಕು
ಕೂಲಿಯವರು ನಾವು ಕೇಳಯ್ಯ…

ಡಾ.ಬಿ.ಎಂ.ಪುಟ್ಟಯ್ಯನವರ
ಅಕ್ಕ ಲಲಿತಕ್ಕ ಅಕ್ಕ ಲಲಿತಕ್ಕಾ ನಮ್ಮನ್ನೆಲ್ಲ ಬಿಟ್ಟು ಹೊರಟೋದೆಯಕ್ಕ ಅಕ್ಕಿ ಲಲಿತಕ್ಕಾ ಹುಟ್ಟಿದ್ದು ಬಡತನ,ಬೆಳೆದಿದ್ದು ಬಡತನ ಹೋರಾಟವೊಂದೆ ನಿನ್ನ ಸಿರಿತನವಕ್ಕ ತೋಟದಲ್ಲಿ ದುಡಿದಿ ಶೋಷಣೆಯ ಕಂಡಿ ಇದರ ನಾಶಕ್ಕೆ ಹೋರಾಟ ಕಂಡಿ ….

ಹೀಗೆ ನೂರಾರು ಪ್ರತಿಮೆಗಳು,ಬದುಕಿನ ರೂಪಕಗಳು ಲೋಕವೇ ಕನ್ನಡ ಜಗತ್ತಿಗೆ ತೆರೆದುಕೊಂಡಿತು.ಬರೀ ಹಾಡುಗಳಷ್ಟೇ ಅಲ್ಲ,ಹಾಡುಗಳಲ್ಲಿನ ಪ್ರತಿರೋಧದ ಕಾವು,ಬೆಂಕಿಯಾಗಿ ಮಳೆ ಸುರಿಸತೊಡಗಿತು.
ಹೋರಾಟದ ಹಾಡುಗಳು ವಿಮೋಚನೆಯ ಅಸ್ತ್ರಗಳಂತೆ ಕಂಡಿವೆ.ಕೇಳುಗರಿಗಂತೂ ತಮ್ಮದೇ ಲೋಕದ ಸುತ್ತಾ ಎಂಥಾ ಕ್ರೌರ್ಯವಿದೆಯಲ್ಲ! ಎಂದು ಬೆಚ್ಚಿಬೀಳಿಸುವ,ಹೊಸ ಕನಸಿಗಾಗಿ ಹಾತೊರೆಯುವಂತೆ ಹಾಡುಗಳಿವೆ.ಈಗ ಯಾರಾದರೂ ಹಾಡಲು ಶುರುಮಾಡಿದರೆ ಹಲಗೆಯ ಸದ್ದೂ ಕೇಳಿಸಬಲ್ಲದು.
Read also : ದಿನಮಾನ-ಪುಸ್ತಕ ವಿಮರ್ಶೆ|ಮಾತಿಲ್ಲದವರ ಮರುದನಿಯಾಗಿ….ಮೂಕನಾಯಕ
2025 ರಲ್ಲಿ ಬಿಡುಗಡೆಯಾದ ಬೆಂಕಿಯ ಮಳೆ ಕನ್ನಡದ ಮಟ್ಟಿಗಿದು ಚರಿತ್ರಾರ್ಹ ದಾಖಲೆ. ಡಾ.ಬಿ.ಎಂ.ಪುಟ್ಟಯ್ಯನವರಿಗೆ ಕನ್ನಡಿಗರು ಕೃತಜ್ಞರಾಗಿರಬೇಕಾಗುತ್ತದೆ.
ಬಿ.ಶ್ರೀನಿವಾಸ 
TAGGED:Davanagere NewsDiary-Book Review|Historical struggle fire rain: B. Srinivasadinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ-ಪುಸ್ತಕ ವಿಮರ್ಶೆದಿನಮಾನ.ಕಾಂ
Share This Article
Twitter Email Copy Link Print
Previous Article Davanagere crime news ದಾವಣಗೆರೆ:ಕೌಟುಂಬಿಕ ಮನಸ್ತಾಪ ಅಳಿಯ –ಮಾವ ಆತ್ಮಹತ್ಯೆ
Next Article Davanagere ರಾಷ್ಟ್ರೀಯ ರಸ್ತೆ ಸುರಕ್ಷತಾ:ಬೈಕ್ ಜಾಥಕ್ಕೆ ಚಾಲನೆ ನೀಡಿದ ಎಸ್ಪಿ ಉಮಾ ಪ್ರಶಾಂತ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | 32 ಪ್ರಕರಣದಲ್ಲಿ 60 ಸಂತ್ರಸ್ಥರಿಗೆ ರೂ.50.45 ಲಕ್ಷ ಪರಿಹಾರ : ಡಿಸಿ

ದಾವಣಗೆರೆ(Davanagere) :  ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದರ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ 2025 ರ ಜನವರಿಯಿಂದ ಜೂನ್ 25…

By Dinamaana Kannada News

ಶಿಕ್ಷಣ ಇಲಾಖೆಯಲ್ಲಿ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ ಜೂನ್.10 :  ಶಾಲಾ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ಸಮನ್ವಯ ಶಿಕ್ಷಣ ಚಟುವಟಿಕೆಯ ದಾವಣಗೆರೆ ಜಿಲ್ಲಾ…

By Dinamaana Kannada News

ದಾವಣಗೆರೆ ನೂತನ ಜಿಲ್ಲಾಧಿಕಾರಿಯಾಗಿ ಡಾ; ಗಂಗಾಧರಸ್ವಾಮಿ ಜಿ.ಎಂ ಅಧಿಕಾರ ಸ್ವೀಕಾರ

ದಾವಣಗೆರೆ ಜು.06  :  ದಾವಣಗೆರೆ ನೂತನ ಜಿಲ್ಲಾಧಿಕಾರಿಯಾಗಿ ಡಾ: ಗಂಗಾಧರಸ್ವಾಮಿ ಜಿ.ಎಂ. ಇವರು ಶನಿವಾರ ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ;…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಶಿಕ್ಷಣದ ಜೊತೆಗೆ ವ್ಯವಸಾಯಕ್ಕೆ ಆದ್ಯತೆ ನೀಡಿ: ಶಾಸಕ ಬಿ.ದೇವೇಂದ್ರಪ್ಪ

By Dinamaana Kannada News
Davanagere lok raide
ತಾಜಾ ಸುದ್ದಿ

ಬೆಸ್ಕಾಂ ಎಇಇಗೆ ಲೋಕಾಯುಕ್ತ ಬಿಸಿ: ಶಿವಮೊಗ್ಗ, ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ

By Dinamaana Kannada News
Davanagere
ತಾಜಾ ಸುದ್ದಿ

ಕನ್ನಡ ಭಾಷೆಯಲ್ಲಿ ನಾಮಫಲಕ ಕಡ್ಡಾಯ : ಪಾಲಿಕೆ ಆಯುಕ್ತೆ ರೇಣುಕಾ

By Dinamaana Kannada News
Job fair
ತಾಜಾ ಸುದ್ದಿ

ಮಾಜಿ ಸೈನಿಕರಿಗೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?