ದಾವಣಗೆರೆ (Davanagere) : ಮಲ್ಲಿಕಾರ್ಜುನ ಕಡಕೋಳ ಅವರನ್ನು ದಾವಣಗೆರೆ ವೃತ್ತಿ ರಂಗಾಯಣ (Vritti Rangayana)ದ ನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ಎರಡು ವರ್ಷಕಾಲ ಖಾಲಿ ಇದ್ದ ಹುದ್ದೆಗೆ ನಿರ್ದೇಶಕರಾಗಿ ಕಡಕೋಳ ಮೂರು ವರ್ಷದ ಅವಧಿಗೆ ನೇಮಕವಾಗಿದ್ದಾರೆ.
ಈ ಹಿಂದೆ ಕರ್ನಾಟಕ ನಾಟಕ ಅಕಾಡೆಮಿ ಮತ್ತು ರಂಗ ಸಮಾಜದ ಸದಸ್ಯರಾಗಿ ಬಾ ಅತಿಥಿ, ರಂಗ ಸಮಾಗಮ, ತಿಂಗಳ ಬೆಳಕಲಿ ರಂಗದ ಮೆರಗು ಮೊದಲಾದ ಕಾರ್ಯಕ್ರಮಗಳ ಮೂಲಕ ಕಡಕೋಳ ಅವರು ರಂಗಾಸಕ್ತರು ಮತ್ತು ಸರಕಾರದ ಗಮನ ಸೆಳೆದಿದ್ದರು.
Read also : davanagere road accident : ಗೆಳೆಯನ ಜನುಮದಿನಕ್ಕೆ ತೆರಳಿದ್ದ ಯುವಕ ಅಪಘಾತದಲ್ಲಿ ಮೃತ
ದಾವಣಗೆರೆ ವೃತ್ತಿ ರಂಗಾಯಣ ಸ್ಥಾಪನೆಯಲ್ಲೂ ಅವರ ಪರಿಶ್ರಮ ಗಮನಾರ್ಹ. “ವೃತ್ತಿ ರಂಗಭೂಮಿ : ವರ್ತಮಾನದ ಸವಾಲುಗಳು” ವಿಷಯದ ಮೇಲೆ ಫೆಲೋಶಿಪ್ ಮಾಡಿದ್ದಾರೆ.