ದಾವಣಗೆರೆ.ಅ.3 (Davanagere news ): ವರದಕ್ಷಿಣೆ ಕಿರುಕುಳ ನೀಡಿ ಹೆಂಡತಿ ಸಾವಿಗೆ ಕಾರಣನಾಗಿದ್ದ ಆರೋಪಿ ಪತಿಗೆ 7 ವರ್ಷ ಸಜೆ 25 ಸಾವಿರ ರೂ ದಂಡ ವಿಧಿಸಿ 01 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಚನ್ನಗಿರಿ ತಾಲ್ಲೂಕಿನ ಮಾನಮಟ್ಟಿ ಗ್ರಾಮದ ಯೋಗೇಶ್ ಶಿಕ್ಷೆಗೆ ಗುರಿಯಾದ ಆರೋಪಿ. 2018 ರಲ್ಲಿ ಅದೇ ಗ್ರಾಮದ ಸಮಿತ್ರ ಅಲಿಯಾಸ್ ಭಾಗ್ಯ ಯುವತಿಯನ್ನು ಯೋಗೇಶ್ ಪ್ರೀತಿಸಿ ಮದುವೆಯಾಗಿದ್ದ. ಆದರೆ ಸಂಬಂಧಿಕರಿಗೆ ಮದುವೆ ಇಷ್ಟವಿಲ್ಲದ ಕಾರಣದಿಂದ ವರದಕ್ಷಿಣೆ ತರುವಂತೆ ಭಾಗ್ಯಳಿಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರು.
ಇದರಿಂದ ನೊಂದ ಭಾಗ್ಯ 2019 ರ ಫೆಬ್ರವರಿ 2 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಮೃತಳ ತಂದೆ ಹನುಮಂತ ಭೋವಿ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖಾಧಿಕಾರಿ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಅಧೀಕ್ಷಕ ಚಿಕ್ಕಸ್ವಾಮಿ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಿದ್ದರು. ಸಲ್ಲಿಸಿರುತ್ತಾರೆ.
ವಾದ-ವಿವಾದ ಆಲಿಸಿದ 01 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಯೋಗೇಶನಿಗೆ 7 ವರ್ಷ ಕಠಿಣ ಸಜೆ 25 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
Read also : ದಸರಾ ಉತ್ಸವಕ್ಕೆ ಚಾಲನೆ ನೀಡಿದ ಎಸ್.ಎಸ್ ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ದಂಡದ ಮೊತ್ತದ ಹಣದಲ್ಲಿ 20 ಸಾವಿರ ಹಣವನ್ನು ಪ್ರಕರಣದ ಸಂತ್ರಸ್ಥೆ ಕುಟುಂಬದವರಿಗೆ ನೀಡುವಂತೆ ಹಾಗೂ ಉಳಿದ 5,000/-ರೂ ಮೊತ್ತ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದ್ದಾರೆ.
ಸಂತ್ರಸ್ಥ ಕುಟುಂಬದ ಪರವಾಗಿ ಸರ್ಕಾರಿ ವಕೀಲರಾದ ಕೆ.ಎಸ್ ಸತೀಶ್‍ಕುಮಾರ್ ವಾದ ಮಂಡಿಸಿದ್ದರು.