ದಾವಣಗೆರೆ (Davanagere) ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ವಿದ್ಯಾರ್ಥಿ ಶುಲ್ಕ ಮರುಪಾವತಿ ಯೋಜನೆಯಡಿ ವಿಕಲಚೇತನ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಭರ್ತಿ ಮಾಡಿದ ಅರ್ಜಿಯೊಂದಿಗೆ ವಿಕಲಚೇತನರ ಗುರುತಿನ ಚೀಟಿ, ಯು.ಡಿ.ಐ.ಡಿ. ಕಾರ್ಡ್, ಭಾವಚಿತ್ರ, ಹಿಂದಿನ ವರ್ಷ ತೇರ್ಗಡೆಯಾಗಿರುವ ದೃಢೀಕೃತ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿ, ಶುಲ್ಕ ಮರುಪಾವತಿ ಅರ್ಜಿಯೊಂದಿಗೆ ಕಡ್ಡಾಯವಾಗಿ ಶುಲ್ಕ ಭರಿಸಿರುವ ಮೂಲ ರಶೀದಿ ಹಾಗೂ ಅರ್ಜಿ ಹಿಂಬದಿಯಲ್ಲಿ ಕಡ್ಡಾಯವಾಗಿ ಶಾಲಾ, ಕಾಲೇಜುಗಳ ದೃಢೀಕರಣದೊಂದಿಗೆ ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು ಸೆಪ್ಟೆಂಬರ್ 19 ಕೊನೆಯದಿನವಾಗಿರುತ್ತದೆ.
Read also : Davangere Crime| ಸ್ವಾಮೀಜಿ ಶಿಷ್ಯರೆಂದು ಜನರಿಗೆ ವಂಚನೆ : ಐವರ ಬಂಧನ
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ|| ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.