ದಾವಣಗೆರೆ (Davanagere): ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಅವರು ನೂತನ ಆ್ಯಂಬುಲೆನ್ಸ್ ವಾಹನವನ್ನು ಜಿಲ್ಲಾಸ್ಪತ್ರೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ತಮ್ಮ ಗೃಹ ಕಚೇರಿಯ ಆವರಣದಲ್ಲಿ ಕೊಟ್ಯಾಕ್ ಮಹೇಂದ್ರ ಬ್ಯಾಂಕಿನಿಂದ ರೂ.39 ಲಕ್ಷ ರೂಪಾಯಿ ವೆಚ್ಚದ ನೂತನ ಆ್ಯಂಬುಲೆನ್ಸ್ ವಾಹನವನ್ನು ಜಿಲ್ಲಾಸ್ಪತ್ರೆಯ ಸಾರ್ವಜನಿಕರ ಸೇವೆಗೆ ನೀಡಲಾಗಿದ್ದು, ಅದರ ಹಸ್ತಾಂತರ ಕಾರ್ಯವನ್ನು ನಡೆಸಲಾಯಿತು.
ನೂತನ ವಾಹನವನ್ನು ಶಾಸಕರು ಹಸ್ತಾಂತರಿಸಿ ಆ್ಯಂಬುಲೆನ್ಸ್ ವಾಹನವನ್ನು ಕೊಟ್ಯಾಕ್ ಮಹೇಂದ್ರ ಬ್ಯಾಂಕಿನವರು ಕೊಡುಗೆಯಾಗಿ ನೀಡಿದ್ದರಿಂದ ರೋಗಿಗಳಿಗೆ ಮತ್ತಷ್ಟು ಉಪಕರವಾಗಿದ್ದು, ಜಿಲ್ಲಾಸ್ಪತ್ರೆಯವರು ಇದರ ಸದುಪಯೋಗ ಪಡೆಯುವಂತೆ ಶುಭ ಹಾರೈಸಿ ಸೂಚಿಸಿದರು.
ದೂಡ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಕೊಟ್ಯಾಕ್ ಮಹೇಂದ್ರ ಬ್ಯಾಂಕಿನ ಹಿರಿಯ ಉಪಾಧ್ಯಕ್ಷ ಕಾರ್ತಿಕ್.ಸಿ, ದಕ್ಷಿಣ ಕ್ಷೇತ್ರದ ರಿಜಿನಲ್ ಮ್ಯಾನೇಜರ್ ಹನುಮಂತ್. ಎಂ, ಸಿಎಸ್.ಆರ್ ಅಧಿಕಾರಿ ಶಿನೋಜ್.ಟಿ, ಡಿವಿಪಿ ಅಧಿಕಾರಿ ಗಿರೀಶ್ ಕುಮಾರ್ ಡಿ.ವಿ, ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಸಿಬ್ಬಂದಿವರ್ಗದವರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಇತರರು ಉಪಸ್ಥಿತರಿದ್ದರು.
Read also : Davanagere | ಕಲಿಕೆ ರೂಢಿಸಿಕೊಂಡರೆ ಗುಣಮಟ್ಟದ ಶಿಕ್ಷಣ : ಪ್ರೊ.ಹಳ್ಯಾಳ