ದಾವಣಗೆರೆ (Davanagere): ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಯುವ ರೈತನ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಬೆಸ್ಕಾಂ ಇಲಾಖೆಯಿಂದ ಐದು ಲಕ್ಷ ರೂಪಾಯಿ ಮೌಲ್ಯದ ಪರಿಹಾರದ ಚೆಕ್ ವಿತರಿಸಿದರು.
ಬಿ.ಚಿತ್ತಾನಹಳ್ಳಿ ಗ್ರಾಮದ ಮಂಜಪ್ಪ ಅವರ ಮಗನಾದ ಬಸವರಾಜ್ (18 ವರ್ಷ) ಜಮೀನಿನಲ್ಲಿ ಕೃಷಿ ಪಂಪಸೆಟ್ ನಿಂದ ನೀರು ಹಾಯಿಸುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದರು.
ಸಚಿವರು ಮೃತರ ತಾಯಿ ಸೀತಮ್ಮ ಅವರಿಗೆ ಪರಿಹಾರದ ಚೆಕ್ ವಿತರಣೆ ಮಾಡಿ ಮೃತ ಯುವ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಜಮೀನುಗಳಲ್ಲಿ ಮುಂಜಾಗೃತಿ ವಹಿಸುವಂತೆ ಸಚಿವರು ರೈತರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಗ್ರಾಮಾಂತರ ಬ್ಲಾಕ್ ವಿಭಾಗದ ಅಧ್ಯಕ್ಷ ಮಾಗನಹಳ್ಳಿ ಪರಶುರಾಮ್, ಮುಖಂಡರಾದ ಅಂಗಡಿ ರಾಮಣ್ಣ, ಕೆಂಚಪ್ಪ, ಯುವ ಮುಖಂಡ ಪರಶುರಾಮ್, ಕಲ್ಪನಹಳ್ಳಿ ಕೆ.ಸಿ ನಾಗರಾಜ್, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರಾದ ಶಾಂತಮ್ಮ ಬಸವನಗೌಡಪ್ಪ, ಜೆ.ಸಿ.ಬಿ ಹನುಮಂತಪ್ಪ, ಹಳೇ ಬಾತಿ ಅಂಜಿನಪ್ಪ, ನಾಗರಕಟ್ಟೆ ಮಂಜು ಸೇರಿದಂತೆ ಬಿ. ಚಿತ್ತಾನಹಳ್ಳಿ ಗ್ರಾಮದ ಮುಖಂಡರುಗಳು, ಇತರರು ಇದ್ದರು.
Read also : Davanagere | ಕಲಾವಿದ ಎ.ಮಹಾಲಿಂಗಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ