ದಾವಣಗೆರೆ (Davangere Distric) : ಶೋಷಿತ ಸಮುದಾಯಗಳಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ತೇಜೋವಧೆ ಮಾಡಲು ಬಿಜೆಪಿ-ಜೆಡಿಎಸ್ ರಾಜ್ಯಪಾಲರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಜಿಲ್ಲಾ ಮಾಧ್ಯಮ ವಕ್ತಾರ ವಿನಾಯಕ ಬಿ.ಎನ್. ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿಗಳಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಏಳಿಗೆ ಸಹಿಸಲಾರದೆ ಮೈತ್ರಿ ಪಕ್ಷಗಳು, ಷಡ್ಯಂತ್ರ ರೂಪಿಸಿವೆ. ರಾಜ್ಯಪಾಲರ ಮುಖಾಂತರ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಪಿತೂರಿ ನಡೆಯುತ್ತಿದೆ.
Read also : Davanagere : ಟ್ರಾಕ್ಟ್ರಗಳಿಗೆ ಕೇಜ್ ವ್ಹೀಲ್ ಹಾಕಿ ರಸ್ತೆಗೆ ಇಳಿದರೆ ಕ್ರಮ : ಜೆ.ಸಂಜೀವ್ ಕುಮಾರ್
ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ ಶಾಶ್ವತವಾಗಿ ಹಿಂದುಳಿದ ವರ್ಗದವರನ್ನು ಅಧಿಕಾರದಿಂದ ದೂರಇಡಬಹುದು ಎಂಬುದು ಇವರ ಉದ್ದೇಶ, ಒಂದು ವೇಳೆ ರಾಜ್ಯಪಾಲರು ಸಿದ್ದರಾಮಯ್ಯರ ವಿರುದ್ಧ ನಿಂತಲ್ಲಿ ಸಿದ್ದರಾಮಯ್ಯರ ಪರ ಇಡೀ ಅಹಿಂದ ವರ್ಗ ಬಂಡೆಯಂತೆ ನಿಂತಿದೆ. ಕುತಂತ್ರ ನಿಲ್ಲಿಸದಿದ್ದಲ್ಲಿ ಅಹಿಂದ ವರ್ಗ ಮತ್ತು ಶೋಷಿತ ವರ್ಗಗಳು ಹೋರಾಟ ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.