ದಾವಣಗೆರೆ ಮಾ.13; ಸಮಾಜದ ಸಮುದಾಯಗಳು ಆಚರಿಸುವ ಹಬ್ಬಗಳ ವೇಳೆ ಅನ್ಯ ಧರ್ಮದ ಬಗ್ಗೆ ತಾತ್ಸಾರ ಮಾಡದೆ, ಶಾಂತಿಯುತವಾಗಿ ಆಚರಿಸಿದಾಗ ಮಾತ್ರ ಸಹಭಾಳ್ವೆ ಸಾಧ್ಯವಾಗಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಗುರುವಾರ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಜೂನ್ 17 ರಂದು ನಡೆಯಲಿರುವ ಬಕ್ರೀದ್ ಹಬ್ಬದ ಪ್ರಯುಕ್ತ ನಾಗರಿಕ ಸೌಹಾರ್ಧ ಸಭೆಯನ್ನು ನಡೆಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.
ಹಬ್ಬಗಳನ್ನು ಸಂತೋಷದಿಂದ ಸಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಈ ವೇಳೆ ಯಾವುದೇ ಪ್ರಚೋದನೆ ಸಲ್ಲದು, ಅದು ಸಾಮಾಜಿಕ ಮಧ್ಯಮವಾಗಲಿ, ಇತರೆ ಸ್ಥಳವಾಗಲಿ, ಶಾಂತಿ ಕಾಪಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲ್ಲಿ ಪ್ರಚೋದನೆ ನೀಡುವ ಪೋಸ್ಟ್ ಹಾಕುವುದಾಗಲಿ ಅಥವಾ ಫೇಕ್ ನ್ಯೂಸ್ ಮಾಡುವುದಾಗಲಿ ಅಥವಾ ಇನ್ಯಾವುದೇ ಅಚಾತುರ್ಯ ಘಟನೆಗಳನ್ನಾಗಲಿ ಮಾಡಿದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು.
ಮದ್ಯಪಾನ ಸೇವಿಸಿ ವಾಹನಗಳನ್ನು ಚಾಲನೆ ಮಾಡುವುದು, ಇದು ಯಾವುದು ಕೂಡ ನಡೆಯಬಾರದು. ಇಂತಹ ಘಟನೆಗಳು ಕಂಡು ಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಬಕ್ರೀದ್ ಹಬ್ಬದ ಸಂಭ್ರಮಾಚರಣೆ ವೇಳೆ ರಸ್ತೆಗಳಲ್ಲಿ ವೀಲಿಂಗ್ ಮಾಡುವುದು .ಕರ್ಕಶವಾಗಿ ಶಬ್ದಹೊರಡಿಸುವ ಬೈಕ್ ಗಳನ್ನು ಓಡಿಸಿ ಇದರಿಂದ ಶಾಂತಿ ಭಂಗ ತರುವವರ ವಿರುದ್ದ ಪೋಲಿಸ್ ರು ಕಣ್ಗಾವಲಿಟ್ಟಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ದ ನಿರ್ಧಾಕ್ಷ್ಯಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿ ಎಲ್ಲರೂ ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿ ಸಮಾಜದ ಹಿರಿಯರು ಯುವಕರುಗಳಿಗೆ ಬುದ್ದಿಮಾತು ಹೇಳುವ ಮೂಲಕ ಅವರನ್ನು ಸರಿದಾರಿಯಲ್ಲಿ ನಡೆಸುವಂತಾಗಬೇಕೆಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ ಸಂತೋಷ , ಮಂಜುನಾಥ್ ಉಪಸ್ಥಿತರಿದ್ದರು.