ದಾವಣಗೆರೆ .ಜೂ.15 : ಆಡಳಿತ ನ್ಯಾಯಧೀಕರಣದಲ್ಲಿ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ವೃತ್ತಿ ಕಾನೂನು ತರಬೇತಿ ನೀಡಲು ಕಾನೂನು ಪದವಿ ಹೊಂದಿದ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಜಿಲ್ಲೆಗೆ 8 ಗುರಿ ನಿಗಧಿಪಡಿಸಲಾಗಿದ್ದು ಇಲಾಖೆಯ ವೆಬ್ ಸೈಟ್ www.tw.kar.nic.in ಮೂಲಕ ಜೂ.18 ರಿಂದ 31 ರವರೆಗೆ ಅರ್ಜಿ ಸಲ್ಲಿಸಿ ಸಲ್ಲಿಸಿದ ಮೂಲ ಪ್ರತಿಯೊಂದಿಗೆ ಸಂಬಂಧಿಸಿದ ದಾಖಲೆಗಳನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ: 45, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿಗೆ ಸಲ್ಲಿಸಲು ತಿಳಿಸಲಾಗಿದೆ.