ದಾವಣಗೆರೆ.ಆ.೧ (Davangere district ) : ಹಣಕಾಸಿನ ವಿಚಾರದಲ್ಲಿ ವ್ಯಕ್ತಿಯೋರ್ವನನ್ನು ಚಾಕುವಿನಿಂದ ತಿವಿದು ಕೊಲೆಗೆ ಯತ್ನಿಸಿದ ಆರೋಪಿಗೆ 5 ವರ್ಷ ಸಾದಾ ಸಜೆ ಮತ್ತು ದಂಡ ವಿಧಿಸಿ 1 ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ (District Sessions Court Davanagere) ತೀರ್ಪು ನೀಡಿದೆ.
ಮಂಜುನಾಥ ಅಲಿಯಾಸ್ ಮಳಿಯಾಳಿ ಮಂಜ( 48) ಶಿಕ್ಷೆಗೆ ಗುರಿಯಾದ ಆರೋಪಿ. ಕಳೆದ 2018 ನೇ ಇಸವಿಯಲ್ಲಿ ಸೋಮನಾಥ ಅವರಿಗೆ ಹಣದ ವಿಚಾರವಾಗಿ ಶಾಮನೂರು ದಾವತ್ ಡಾಬಾ ಬಳಿ ಕರೆಯಿಸಿಕೊಂಡು ಮಂಜುನಾಥ್ ಮತ್ತು ಇತರೆ ೪ ಜನ ಸೇರಿಕೊಂಡು ಗಲಾಟೆ ಮಾಡಿ ಚಾಕುವಿನಿಂದ ಇರಿದಿದ್ದರು.
ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಹಲ್ಲೆಗೊಳಗಾಗಿದ್ದ ಸೋಮನಾಥ ಅವರ ಸಹೋದರ ಅಭಿನಂದನ್ ದೂರು ನೀಡಿದ್ದರು.
READ ALSO : DAVANAGERE GM University : ಪಾಠದ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ: ತೇಜಸ್ವಿ ಕಟ್ಟಿಮನಿ
ಪಿಎಸ್‌ಐ ಸಿದ್ದೇಗೌಡ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯ ನವರು ಆಪಾಧಿತ ಮಂಜುನಾಥನಿಗೆ 5 ವರ್ಷ ಸಾದಾ ಸಜೆ ಮತ್ತು 51 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದರು.