ದಾವಣಗೆರ (Davanagere) ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಫೆ. 1 ಮತ್ತು 2 ರಂದು ನಡೆಸಲು ನಿರ್ಧರಿಸಲಾಗಿದ್ದು, ಈ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರ ನ್ನಾಗಿ ನಗರದ ಲೇಖಕ, ವಿಶ್ರಾಂತ ಪ್ರಾಧ್ಯಾಪಕರೂ ಆದ ಡಾ.ಗಂಗಾಧರಯ್ಯ ಹಿರೇಮಠ ಇವರನ್ನು ಸಾಹಿತ್ಯ ಪರಿಷತ್ ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಪರಿಷತ್ತಿನ ಆಯ್ಕೆಯನ್ನು ಗೌರವಿಸಿ, ವಿನಮ್ರವಾಗಿ ನನಗೆ ಈ ಸ್ಥಾನ ಬೇಡ.ನನಗಿಂತ ಹಿರಿಯರು, ಅನುಭವಿಗಳು ಹಾಗೂ ಸಾಹಿತಿಗಳು ಇದ್ದಾರೆ.ಹೀಗಿರುವಾಗ ಈ ಗೌರವ ಸ್ಥಾನವನ್ನು ನಾನು ಅಲಂಕರಿಸುವ ಇಚ್ಚೆ ನನಗಿಲ್ಲ.ನಾನು ಇನ್ನು ಸಾಹಿತ್ಯಕವಾಗಿ ಬಹಳ ಕೆಲಸ ಮಾಡಬೇಕಾಗಿದೆ. ದಯವಿಟ್ಟು ಅನ್ಯತಾ ಭಾವಿಸಬೇಡಿ ಎಂದು ಜಿಲ್ಲಾ ಕಸಾಪ ಅಧ್ಯಕ್ಷರಿಗೆ, ತಾಲ್ಲೂಕು ಕಸಾಪ ಅಧ್ಯಕ್ಷರಿಗೆ ಹಾಗೂ ಸಾಹಿತಿಗಳಿಗೆ ವಿನಂತಿಸಿದ್ದಾರೆ.
ಡಾ.ಗಂಗಾಧರಯ್ಯ ಹಿರೇಮಠ ಅವರ 30ಕ್ಕೂ ಹೆಚ್ಚು ಪುಸ್ತಕಗಳ ಪ್ರಕಟಣೆ ಹಾಗೂ 200 ಕ್ಕೂ ಹೆಚ್ಚು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇಂತವರು ಈ ಗೌರವ ಸ್ಥಾನವನ್ನು ಪಡೆಯದೇ ತಿರಸ್ಕರಿಸಿರುವುದು ಆತ್ಮೀಯ ವಲಯದಲ್ಲಿ ಬೇಸರ ಮೂಡಿಸಿದೆ.