ದಾವಣಗೆರೆ : ಶಿಕ್ಷಣ ತಜ್ಞ , ಜಾನಪದ ವಿದ್ವಾಂಸ ಹಾಗೂ ಬಾಪೂಜಿ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ. ಎಂ ಜಿ. ಈಶ್ವರಪ್ಪ (74) ಬೆಂಗಳೂರಿನ ಆಸ್ಪತ್ರೆಯಲ್ಲಿ ಶನಿವಾರ ವಿಧಿವಶರಾಗಿದ್ದಾರೆ.
ಅವರಿಗೆ ಪತ್ನಿ,ಪುತ್ರ ಹಾಗೂ ಪುತ್ರಿ ಇದ್ದಾರೆ. ಅಂತ್ಯಕ್ರಿಯೆಯು ಜೂನ್ 2 ರಂದು ಭಾನುವಾರ ನಡೆಯಲಿದೆ. ಕಳೆದ 15 ದಿನಗಳಿಂದ ನ್ಯುಮೋನಿಯದಿಂದ ಬಳಲುತ್ತಿದ್ದರು. ಶ್ವಾಸಕೋಸದ ಸಮಸ್ಯೆಯಿಂದಾಗಿ ನಿಧನರಾಗಿದ್ದಾರೆ.
ಶಿವಮೊಗ್ಗದ ತಾಲ್ಲೂಕಿನ ಹಾಡೋನಹಳ್ಳಿ ಜನಿಸಿದ ಇವರ ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ, ಪಡೆದು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ.ಪಿಎಚ್‍ಡಿ ಮಗಿಸಿದ್ದಾರೆ. ಇವರ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ರಾಜ್ಯ ಸರಕಾರ 2020 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.
ನಿಧನಕ್ಕೆ ಎಸ್ಸೆಸ್,ಎಸ್ಸೆಸ್ಸೆಂ ತೀವ್ರ ಸಂತಾಪ
ಹಿರಿಯ ಜಾನಪದ ತಜ್ಞ, ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ. ಎಂ.ಜಿ. ಈಶ್ವರಪ್ಪನವರ ನಿಧನಕ್ಕೆ ಬಾಪೂಜಿ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳು ಮತ್ತು ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು, ಜಿಲ್ಲಾ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಅವರು, ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಅಥಣಿ ವೀರಣ್ಣನವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
…
ತುಂಬಲಾರದ ನಷ್ಟ
ದಾವಣಗೆರೆಯಲ್ಲಿ ಪ್ರಗತಿಪರ ಚಿಂತಕರ ಹಿರಿಯರಲ್ಲಿ ಒಬ್ಬರಾದ ಡಾ.ಎಂ.ಜಿ.ಈಶ್ವರಪ್ಪ ಅವರ ನಿಧನರಾಗಿರುವುದು ಸಾಕಷ್ಟ ನೋವು ತಂದಿದೆ. ಸದಾ ಪ್ರಗತಿಪರವಾಗಿ ಚಿಂತನೆ ಮಾಡುತ್ತಿದ್ದ ಅವರ ಅಗಲಿಕೆ ನಮ್ಮಂತಹ ಪ್ರಗತಿಪರರಿಗೆ ನಷ್ಟವಾಗಿದೆ.
ಬಿ.ಎಂ.ಹನುಮಂತಪ್ಪ
ಪ್ರಗತಿಪರ ಚಿಂತಕ
ದಾವಣಗೆರೆ