ದಾವಣಗೆರೆ (Davanagere) : ಪತಂಜಲಿ ಕಾಲೇಜ್ ಆಫ್ ಯೋಗ ಅಂಡ್ ರಿಸರ್ಚ್ ಸೆಂಟರ್ ತಮಿಳುನಾಡು, ನ್ಯಾಷನಲ್ ಯೋಗ ಅಸೋಸಿಯೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ಗೋವಾದ ಫಿಟ್ನೆಸ್ ಸ್ಟುಡಿಯೋ
ಓಪನ್ ಪಾರ್ಕ್ನಲ್ಲಿ ನಡೆದ ಆಲ್ ಇಂಡಿಯಾ ಯೋಗಾಸನ ಚಾಂಪಿಯನ್ ಶಿಪ್ ಸಮಾರಂಭದಲ್ಲಿ ಎಸ್ಎಎಸ್ಸೆಸ್ ಯೋಗ ಕೇಂದ್ರದ ಸಂಸ್ಥಾಪಕ, ಯೋಗಾಚಾರ್ಯ ಡಾ.ಎನ್.ಪರಶುರಾಮ್ ಅವರಿಗೆ
‘ಯುವಶ್ರೀ ಕಲಾಭೂಷಣ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿಗೆ ಭಾಜನರಾದ ಡಾ.ಎನ್.ಪರಶುರಾಮ್ ಅವರಿಗೆ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ್ ರಾಯ್ಕರ್, ದಾವಣಗೆರೆ ಎಸ್ಎಎಸ್ಎಸ್ ಯೋಗ ಫೆಡರೇಷನ್ ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ಗೋಪಾಲ್ರಾವ್, ಖಜಾಂಚಿ ಎಸ್.ರಾಜಶೇಖರ್, ನಿರ್ದೇಶಕರಾದ ಜೆ.ಎಸ್.ವೀರೇಶ್, ಎಂ.ವೈ.ಸತೀಶ್, ಅಜ್ಜಯ, ರಾಘವೇಂದ್ರ ಚೌಹಣ್, ರಂಗಪ್ಪ, ನಾಗರಾಜ್, ಸಾವಿತ್ರಮ್ಮ, ಪತ್ರಕರ್ತ ಎ.ಎನ್.ನಿಂಗಪ್ಪ ಹಾಗೂ ಯೋಗ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
Read also : ಇಂದಿನ ಮಕ್ಕಳಿಗೆ ತಮಟೆ ಮತ್ತು ಕಂಸಾಳೆ ತರಬೇತಿ ಶಿಬಿರ ಅವಶ್ಯ : ಎಲ್.ಹೆಚ್ ಅರುಣ್ ಕುಮಾರ್