Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಜನಪರವಾದ ಚಿಂತನೆಯಿತ್ತು:ಸಾಣೇಹಳ್ಳಿ ಶ್ರೀ
ತಾಜಾ ಸುದ್ದಿ

ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಜನಪರವಾದ ಚಿಂತನೆಯಿತ್ತು:ಸಾಣೇಹಳ್ಳಿ ಶ್ರೀ

Dinamaana Kannada News
Last updated: January 8, 2026 4:25 pm
Dinamaana Kannada News
Share
Sanehalli Sri
SHARE
ದಾವಣಗೆರೆ.ಜ.8: ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಸಾಮಾಜಿಕ ಕಳಕಳಿ, ಜನಪರವಾದ ಆಲೋಚನೆ ಇತ್ತು. ಏನಾದರೂ ಹೇಳುವುದಿದ್ದರೆ ನೇರವಾಗಿ ಹೇಳುತ್ತಿದ್ದರು. ಆದರೆ ಎಂದೂ ಕೂಡ ಆತ್ಮವಂಚನೆ ಮಾಡಿಕೊಂಡವರಲ್ಲ ಎಂದು seem1 dinamaana adsತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.
ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಾಮನೂರು ಶಿವಶಂಕರಪ್ಪ ಬೇರೆಯವರನ್ನು ತುಳಿಯುವ ಕಾರ್ಯವನ್ನು ಎಂದೂ ಮಾಡಲಿಲ್ಲ. ಅವರೂ ನಮ್ಮವರು, ಇವರೂ ನಮ್ಮವರು. ಎಲ್ಲರೂ ಮೇಲೆ ಬರಲಿ ಎನ್ನುವಂತಹ ಹೃದಯ ವೈಶಾಲ್ಯತೆ ಬೆಳೆಸಿಕೊಂಡಿದ್ದರು. ಎಂದೂ ಕೂಡ ಮತ್ತೊಬ್ಬರ ಬಗ್ಗೆ ಲೇವಡಿ ಮಾಡುವುದು, ಹಗುರವಾಗಿ ಮಾತನಾಡುವುದನ್ನು ಮಾಡಲಿಲ್ಲ. ನೇರವಾಗಿಯೇ ಹೇಳುತ್ತಿದ್ದರು. ಆದರೆ ಇಂದು ಅಂತಹ ಜನ ತುಂಬಾ ಕಡಿಮೆಯಾಗುತ್ತಿದ್ದಾರೆ. ಹೊತ್ತು ಬಂದ ಹಾಗೆ ಕೊಡೆ ಹಿಡಿಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ನಮ್ಮ ಎದುರು ನಮ್ಮ ಹಾಗೆ. ಬೇರೆಯವರ ಎದುರಿಗೆ ಅವರ ಹಾಗೆ ಮಾತನಾಡುವುದು. ಇದು ಒಂದು ರೀತಿಯಲ್ಲಿ ಆತ್ಮ ವಂಚನೆ. ಆದರೆ ಶಿವಶಂಕರಪ್ಪ ಆ ರೀತಿಯ ಆತ್ಮ ವಂಚನೆಯನ್ನು ಎಂದು ಕೂಡ ಮಾಡಿಕೊಂಡವರಲ್ಲ ಎಂದರು.
ಬಿಜೆಪಿ ಅವರ ಪಕ್ಷವಲ್ಲ. ಕಾಂಗ್ರೆಸ್ ನಿಷ್ಟರಾಗಿ ಯಾವಾಗಲು ಇದ್ದವರು. ಆದರೆ ಯಡಿಯೂರಪ್ಪ ಅವರ ಸಂದರ್ಭದಲ್ಲಿ ಅವರು ಗೆಲ್ಲಲಿ ಎಂದಿದ್ದರು. ಇದಕ್ಕೆ ಅವರ ಪಕ್ಷದವರೇ ಶಿವಶಂಕರಪ್ಪ ಹೀಗೆ ಹೇಳುತ್ತಾರಲ್ಲ ಎಂದು ಮನಸ್ಸಿನಲ್ಲಿ ಬೈದಿರುವುದು ಉಂಟು. ಆದರೆ ಶಿವಶಂಕರಪ್ಪ ಅವರು ಸಮಾಜದಲ್ಲಿ ಯಾವುದೇ ಪಕ್ಷದವರಾಗಲಿ ಒಳ್ಳೆಯ ವ್ಯಕ್ತಿಗಳು ಮೇಲೆ ಬರಲಿ ಎಂಬ ಹೃದಯವಂತಿಕೆ ಇಟ್ಟಿಕೊಂಡವರು. ಇಂದು ಅವರು ನಮ್ಮ ಕಣ್ಣ ಮುಂದಿಲ್ಲ ಎಂದರೆ ದೊಡ್ಡ ಸಂಪತ್ತು ಕಳೆದುಕೊಂಡಿದ್ದೇವೆ ಎಂಬ ಭಾವನೆ ಅವರ ಮನೆತನಕ್ಕಿಂತ ಸಮಾಜಕ್ಕೆ ಸೃಷ್ಟಿಯಾಗಿದೆ. ಹಾಗಾಗಿ ಶಿವಶಂಕರಪ್ಪರAತೆಯೆ ಸಾಮಾಜಿಕ ಅಭಿವೃದ್ಧಿ, ಜನರ ವಿಶ್ವಾಸ ಗಳಿಸಿಕೊಳ್ಳಬೇಕೆಂದು ಅವರ ಮನೆತನದ ಸದಸ್ಯರಿಗೆ ಕಿವಿ ಮಾತು ಹೇಳುತ್ತಿದ್ದೇವೆ ಎಂದರು.
ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಆರೋಗ್ಯ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಆವರ ಛಾಪು ಇದ್ದೇ ಇದೆ. ಮೇಲಾಗಿ ನಾನು ಇಷ್ಟೆಲ್ಲ ಮಾಡಿದ್ದೇನೆ ಎಂಬ ಅಹಂಕಾರ ಇರಲಿಲ್ಲ. ಅವರು ಸದ್ವಿನಯವೇ ಸದಾಶಿವನನ್ನು ಒಲಿಸುವ ದಾರಿ ಎಂದು ತಿಳಿದವರು. ಯಾರನ್ನೂ ಕೂಡ ಶಾಶ್ವತ ಶತ್ರು ಎಂದು ಭಾವಿಸಿರಲಿಲ್ಲ. ಯಾರನ್ನಾದರೂ ಟೀಕಿಸಿದರೆ ಮಾನವೀಯ ಸಂಬAಧಗಳಿಗೆ ಧಕ್ಕೆ ಬಾರದ ಹಾಗೆ ನಡೆದುಕೊಳ್ಳುತ್ತಿದ್ದರು ಎಂದರು.
Read also : ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಅಕ್ಕಪಡೆ ಬಲ:ಸಂಸದೆ ಪ್ರಭಾ ಮಲ್ಲಿಕಾರ್ಜುನ
ಬಾಪೂಜಿ ವಿದ್ಯಾಸಂಸ್ಥೆಯನ್ನು ಅವರು ಕೈಗೆ ತಗೆದುಕೊಂಡ ನಂತರ ಅದರ ಅಭಿವೃದ್ಧಿ ಎಷ್ಟು ವೇಗವಾಗಿ ನಡೆಯಿತು ಎನ್ನುವುದು ಹಿರಿಯರಿಗೆ- ಕಿರಿಯರಿಗೆ ಗೊತ್ತು. ಹಿರಿಯ ಜಗದ್ಗುರುಗಳ ಆಶೀರ್ವಾದ ಹಾಗೂ ಸಿದ್ದವೀರಪ್ಪ ಅವರ ನೆರವು. ಹೀಗೆ ಅನೇಕ ಜನರ ಸಹಕಾರದಿಂದ ಶಿವಶಂಕರಪ್ಪ ಅವರು ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಯಾದರು. ಇದಾದ ನಂತರ ದಾವಣಗೆರೆಗೆ ಹೊಸ ಮೆರಗು ಬಂತು. ಆಗ ಶಿಕ್ಷಣ ಕಾಶಿಯಾಗಿ ದಾವಣಗೆರೆ ರೂಪುಗೊಂಡಿತು ಎಂದು ಸ್ಮರಿಸಿದರು.
ಕೈಗಾರಿಕೋದ್ಯಮಿ ಎಸ್.ಎಸ್.ಗಣೇಶ್ ಮಾತನಾಡಿ, ತಂದೆಯವರ ಬಗ್ಗೆ ನಾನು ಮಾತನಾಡುವುದಕ್ಕಿಂತ ಅವರಿಂದ ಅನುಕೂಲ ಪಡೆದುಕೊಂಡಿರುವ ಜನರು ಮಾತನಾಡಬೇಕು. ನಾಗನೂರು ಎಸ್.ಎಸ್.ಬಕ್ಕೇಶ್ ಅವರು ದತ್ತು ಪಡೆದುಕೊಂಡಿದ್ದ ಗ್ರಾಮ. ಇದರಿಂದ ಅವರು ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಲು ಸಹಕಾರವಾಯಿತು. ಎಸ್.ಎಸ್.ರವೀಂದ್ರನಾಥ್ ಅವರು ಇದೀಗ ಆಶೀರ್ವಾದ ಮಾಡಿದಂತೆ ಮುಂದೆಯೂ ಹೀಗೆಯೇ ಆಶೀರ್ವಾದ ಮಾಡಲಿ ಎಂದರು.
ರೈತ ಮುಖಂಡ ಎನ್.ಜಿ.ಪುಟ್ಟಸ್ವಾಮಿ ಮಾತನಾಡಿ, ಮಹಾನ್ ಚೇತನ ಅಗಲಿರುವುದು ನಾಡಿಗೆ ತುಂಬಲಾರದ ನಷ್ಟವಾಗಿದೆ. ದಾವಣಗೆರೆ ಜಿಲ್ಲೆಯ ಬಹುತೇಕ ಮಕ್ಕಳು ವೈದ್ಯರು, ಇಂಜಿನಿಯರ್‌ಗಳು ಆಗಿದ್ದರೆ ಅದಕ್ಕೆ ಡಾ.ಶಾಮನೂರು ಶಿವಶಂಕರಪ್ಪ ಕಾರಣ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು. ಇಂದು ಜಿಲ್ಲೆಯಲ್ಲಿ ಜಾತ್ಯಾತೀತ ಮನೆತನಗಳು ಏನಾದರೂ ಇದ್ದರೆ ಶಾಮನೂರು ಹಾಗೂ ಜೆ.ಎಚ್.ಪಟೇಲ್ ಮನೆತನಗಳು ಮಾತ್ರ ಎಂದರು.
ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಲಿಂಗರಾಜ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಜನರಿಗೆ ಕೋಟ್ಯಾಂತರ ರೂ ವೆಚ್ಚ ಮಾಡಿ ವ್ಯಾಕ್ಸಿನ್ ನೀಡಿರುವುದನ್ನು ಯಾರೂ ಮರೆಯಬಾರದು. ದಕ್ಷಿಣದ ಉಪ ಚುನಾವಣೆಯಲ್ಲಿ ಶಾಮನೂರು ಕುಟುಂಬದ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಆಯ್ಕೆ ಮಾಡಬೇಕು ಎಂದರು.
ಗ್ರಾಮಸ್ಥರ ಪರವಾಗಿ ಗೌಡರ ಶಿವಣ್ಣ, ಕನ್ವೀನರ್ ಹನುಮಂತಪ್ಪ ಮಾತನಾಡಿ, ಗ್ರಾಮಕ್ಕೆ ಡಾ.ಶಾಮನೂರು ಶಿವಶಂಕರಪ್ಪ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಉಪಸ್ಥಿತರಿದ್ದರು. ಶಿಕ್ಷಕ ಹನುಮಂತ ನಾಯ್ಕ ಪ್ರಾರ್ಥಿಸಿದರು. ಎನ್.ಪಿ.ಮಹೇಶ್ ಸ್ವಾಗತಿಸಿದರು. ಶಶಿಕುಮಾರ್ ವಂದಿಸಿದರು.
job news dinamaana ads
TAGGED:Davanagere Newsdinamaana.comKannada NewsSanehalli Sriಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಸಾಣೇಹಳ್ಳಿ ಶ್ರೀ
Share This Article
Twitter Email Copy Link Print
Previous Article Akka Force ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಅಕ್ಕಪಡೆ ಬಲ:ಸಂಸದೆ ಪ್ರಭಾ ಮಲ್ಲಿಕಾರ್ಜುನ
Next Article Davanagere ಬಾಪೂಜಿ ವಿದ್ಯಾಸಂಸ್ಥೆಯ ಎವಿಕೆ ಗ್ರಂಥಪಾಲಕ ಹೆಚ್. ಸತೀಶ್ ಗೆ ಪಿಹೆಚ್ ಡಿ ಪ್ರದಾನ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere news | ಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ ಸೆ.30 (Davanagere) :   ಗ್ರಾಮಾಂತರ ಕೈಗಾರಿಕಾ ವಿಭಾಗದಿಂದ ಹೊಲಿಗೆಯಂತ್ರ ವಿತರಣೆ, ಕುಶಲಕರ್ಮಿಗಳಿಗೆ ಬ್ಯಾಂಕ್ ಸಾಲದ ಮೇಲೆ ವಿಧಿಸುವ ಬಡ್ತಿ…

By Dinamaana Kannada News

ದಿನಮಾನದ ಹೆಮ್ಮೆ : ಪ್ರೀತಿಯಿಂದ ಬಾಚಿಕೊಳ್ಳುವ ಬಾಚಿಗೊಂಡನಹಳ್ಳಿ ಹುರಕಡ್ಲಿ ಶಿವಕುಮಾರ 

Kannada News |Dinamaanada Hemme   | Dinamaana.com | 30-06-2024 ಕರ್ನಾಟಕದ ಪತ್ರಿಕೋದ್ಯಮದಲ್ಲಿ ಪ್ರಜಾವಾಣಿಗೆ ಅಗ್ರಸ್ಥಾನವಿದೆ.ಇದರ ವಾಚಕರ ವಾಣಿ…

By Dinamaana Kannada News

Harihara | ಗುರು ವಂದನಾ ಕಾರ್ಯಕ್ರಮ : 1998 ರ ಹಳೇ ವಿದ್ಯಾರ್ಥಿಗಳಿಂದ ಸಭೆ

ಹರಿಹರ  (Harihara)  : ಶ್ರೀ ನಂದೀಶ್ವರ ಗ್ರಾಮಾಂತರ ಪ್ರೌಢಶಾಲೆಯ 1997-98 ರ ಸಾಲಿನ ಹಳೆಯ ವಿದ್ಯಾರ್ಥಿಗಳು  ನಗರದ ಕ್ಷೇತ್ರನಾಥ ಹರಿಹರೇಶ್ವರ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಯುವಜನರಲ್ಲಿ ಆರೋಗ್ಯ ಅರಿವು, ಸಾಮಾಜಿಕ ಹೊಣೆಗಾರಿಕೆ ಅವಶ್ಯ : ಡಾ.ಬಿ.ಡಿ.ಮುರುಳಿಧರ

By Dinamaana Kannada News
Davanagere
ತಾಜಾ ಸುದ್ದಿ

ಹಜರತ್ ಮೌಲಾನಾ ಸಗೀರ್ ಅಹಮದ್ ಖಾನ್ ರಶಾದಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆೆ ತರಬೇತಿ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಫಾಸ್ಟ್ ಫುಡ್ ತಯಾರಿಕೆ ಉಚಿತ ತರಬೇತಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?