ದಾವಣಗೆರೆ : ಕುತಂತ್ರ, ತಂತ್ರಗಾರಿಕೆಗಳ ನಡುವೆ ನೈ ತಿಕತೆಗೆ ಸೋಲಾಗಿದ್ದು, ಇದರಿಂದ ನಾನು ಕಂಗಾಲಾಗಿಲ್ಲ, ಆತ್ಮವಿಶ್ವಾಸ ವೃದ್ಧಿಯಾಗಿದ್ದು, ಶಿಕ್ಷಕರ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ವಿಪ ಮಾಜಿ ಮುಖ್ಯ ಸಚೇತಕ ಡಾ.ವೈ.ಎ. ನಾರಾಯಣಸ್ವಾಮಿ ಹೇಳಿದರು.
ನಗರದ ಜಿ. ಎಂ.ಐ.ಟಿ ಗೆಸ್ಟ್ ಹೌಸ್ ನಲ್ಲಿ ಮಾತನಾಡಿದ ಅವರು, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಹಿನ್ನಡೆಯಾಗಿ ಸೋತಿರುತ್ತೇನೆ. ಆದರೆ, ಸೋಲಿನಿಂದ ನಾನು ಧೃತಿಗೆಟ್ಟಿಲ್ಲ, ಮೂರು ಅವಧಿ ವಿಧಾನಪರಿಷತ್ ಸದಸ್ಯನಾಗಿ ಒಂದು ಅವಧಿ ಶಾಸಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಾರಿಂದಲೂ ಲಂಚ ಪಡೆದಿಲ್ಲ. ಯಾರಿಗೂ ಮೋಸ ಮಾಡಿಲ್ಲ ಎಂದು ಆತ್ಮವಿಶ್ವಾಸ ದಿಂದ ಹೇಳುತ್ತೇನೆ, ಶಿಕ್ಷಕರ ಕೆಲಸ ಮಾಡಿದ್ದೇನೆ. ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಿಗೆ ಗೌರವ ತರುವಂತಹ ಕಾರ್ಯ ಮಾಡಿರುತ್ತೇನೆ ಎಂದರು.
ಖಾಸಗಿ ಅನುದಾನಿತ ಶಾಲೆಗಳಿಗೆ ವಾಟರ್‌ಫಿಲ್ಟರ್ ಕೊಡಿಸಿದ್ದೇನೆ, ಶಿಕ್ಷಕರ ಸಮಸ್ಯೆಗಳಿಗೆ ಸದಾ ನೆರವಾಗಿದ್ದೇನೆ ಎಂದು ತಿಳಿಸಿ, ನನ್ನ ಸೋಲಿನಿಂದ ನಿರಾಸೆಯಾಗಿಲ್ಲ. ಇನ್ನೂ ಆತ್ಮವಿಶ್ವಾಸ ಹೆಚ್ಚಿದೆ, ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಹೋರಾಡುವ ಶಕ್ತಿ, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸಿಕೊಡುವ ಶಕ್ತಿ ನನಗಿದೆ ಎಂದರು.
ನನ್ನ ಹದಿನೆಂಟು ವರ್ಷದ ಸೇವೆಯಲ್ಲಿ ಯಾರೊಬ್ಬರಿಗೂ ಮೋಸ ಮಾಡಿಲ್ಲ ಅದ್ರೂ ನನ್ನ ಸೋಲಿಗೆ ಕಾರಣ ತಿಳಿಯುತ್ತಿಲ್ಲ ನನ್ನ ಹದಿನೆಂಟು ವರ್ಷದ ಸುದೀರ್ಘ ಸೇವೆಯಲ್ಲಿ ಯಾವೊಬ್ಬ ಟೀಚರ್ ಗೂ ಮೋಸ ಮಾಡಿಲ್ಲ. ಯಾರನ್ನೂ ಕೆಟ್ಟದಾಗಿ ಮಾತನಾಡಿಲ್ಲ ನನಗೆ ಬಂದ ಸಂಬಳದಲ್ಲಿ ಒಂದೂ ನಯಾ ಪೈಸಾ ಮನೆಗೆ ತಗೊಂಡು ಹೋಗಿಲ್ಲ ಆದರು ನನ್ನ ಯಾಕೆ ಸೋಲಿಸಿದರು ಅನ್ನೊದು ಅರ್ಥವಾಗಿಲ್ಲ. ಮತದಾರರು ನೀಡಿದ ತೀರ್ಪಿಗೆ ತಲೆ ಬಾಗುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಭಿಮಾನಿ ಬಳಗದವರು ಹಾಗೂ ರಾಮ್ ರೆಡ್ಡಿ ಶಾಂಭ ಶಿವಯ್ಯ ಉಪಸ್ಥಿತರಿದ್ದರು