ಹರಿಹರ (District Court Davanagere) : ಪ್ರತಿಭೆ ಪರಿಶ್ರಮ ಪಡುವವರ ಸ್ವತ್ತಾಗುತ್ತದೆ ಎಂದು ಇಲ್ಲಿನ ಡಿಆರ್ಎಂ ಸರ್ಕಾರಿ ಪ್ರೌಢಶಾಲೆ ಉಪ ಪ್ರಾಚಾರ್ಯ ಸಿದ್ಧರಾಮೇಶ್ವರ ಹೇಳಿದರು.
ನಗರದ ಡಿಆರ್ಎಂ ಸರ್ಕಾರಿ ಪ್ರೌಢಶಾಲೆ (DRM Govt High School Harihara) ಯಲ್ಲಿ ಸೋಮವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆ ಎಂದು ಕೀಳಿರಿಮೆ ತೋರದೆ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಇಲ್ಲಿರುವ ಶಿಕ್ಷಕರು ಪ್ರತಿಭಾವಂತರಿದ್ದು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಬಿಉಲ್ಲಾ ಮಾತನಾಡಿ, ಹಳೆ ಕಟ್ಟಡ ತೆರವು, ಶಾಲಾ ಕಾಂಪೌಂಡ್, ಕೊಠಡಿಗಳ ನಿರ್ಮಾಣಕ್ಕಾಗಿ ಶಿಕ್ಷಣ ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಿದ್ದು ಈವರೆಗೆ ಸ್ಪಂದನೆ ಸಿಕ್ಕಿಲ್ಲ. ಬಡ, ಮಧ್ಯಮ ವರ್ಗದ ಮಕ್ಕಳು ಓದುವ ಈ ಶಾಲೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದರು.
ವಿಜ್ಞಾನ ಶಿಕ್ಷಕಿ ಜಹಾನ್ ಆರಾ ಬೇಗಂ ಮಾತನಾಡಿ, 2017-18ನೇ ಸಾಲಿನ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರಿಗೆ ಸತ್ಕರಿಸುತ್ತಿರುವುದು ಶ್ಲಾಘನೀಯ ಎಂದರು.
ಕನ್ನಡ, ಉರ್ದು ಮತ್ತು ಆಂಗ್ಲ ಮಾಧ್ಯಮದ 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಐಶ್ವರ್ಯ ಮೆಹರವಾಡೆ, ಸಿಮ್ರಾನ್ ಬಾನು, ಜಯಶ್ರೀ, ಟಿ.ಐ.ಕೌಸರ್ ಜಬೀನ್, ಸುಮನ್, ಧನುಷ್, ಗುಲ್ಷನ್ ಬಾನು, ಜುವೇರಿಯಾ ಇವರಿಗೆ ಸ್ಮರಣಿ, ನಗದು ನೀಡಿ ಸತ್ಕರಿಸಲಾಯಿತು.
ಶಿಕ್ಷಕರಾದ ಅಸ್ಮತ್ ಜಬೀನ್, ಕಣವಿ, ಈಶಪ್ಪ ಬೂದಿಹಾಳ್, ಹೀನಾ ಕೌಸರ್, ಸೈಯದ್ ಅಹ್ಮದ್, ಇಮ್ತಿಯಾಜ್ ಅಹ್ಮದ್, ಆನಂದ್ ಕುಮಾರ್, ಮಹೇಶ್, ರಾಜಶೇಖರ್, ಬಸವರಾಜ್ ಖಿಲ್ಲೆದಾರ್, ಸುಮಾ ಅಂಗಡಿ, ರಾಜಲಕ್ಷ್ಮಿ, ಕವಿತಾ ಪಿ., ವಾಣಿ ಹೆಗಡೆ, ಲೋಕೇಶ್ ನಾಯಕ್, ಪ್ರಶಾಂತ್ ಡಿ., ಶಿವಮ್ಮ, ಕಿರಣ್ ಹಾಗೂ ಸಿಬ್ಬಂದಿ, ಪೋಷಕರಿದ್ದರು.