ದಾವಣಗೆರೆ (Davanagere) : ಕಲ್ಬುರ್ಗಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ೧೭ ವರ್ಷದೊಳಗಿನ ಬಾಲಕರ ಲಾನ್ ಟೆನಿಸ್ ಪಂದ್ಯಾವಳಿಯಲ್ಲಿ ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟದ ಲಾನ್ ಟೆನಿಸ್ ಪಂದ್ಯಾವಳಿಯಲ್ಲಿ ಹತ್ತನೇ ತರಗತಿಯ ಎಂ.ಶ್ರೇಯಾಂತ್, ಶ್ರೀವತ್ಸ ಇನಾಮದಾರ್, ಒಂಬತ್ತನೇ ತರಗತಿಯ ಎಚ್.ತರುಣ್ ಹಾಗೂ ಎಂಟನೇ ತರಗತಿಯ ಎಸ್.ಸೃಜನ್ ಭಾಗವಹಿಸಿದ್ದರು. ವಿಜೇತರಾದ ಎಂ.ಶ್ರೇಯಾಂತ್, ಎಚ್.ತರುಣ್, ಶ್ರೀವತ್ಸ ಇನಾಮದಾರ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಕ್ರೀಡೆಗಳಲ್ಲಿ ಭಾಗವಹಿಸಲು ಮಾರ್ಗದರ್ಶನ ಮಾಡಿದ ಶಾಲೆಯ ದೈಹಿಕ ಶಿಕ್ಷಣದ ಶಿಕ್ಷಕರಾದ ಕೆ.ರವಿ, ನಾಗರಾಜ ಉತ್ತಂಗಿ, ಎಂ.ಪ್ರಸನ್ನ ಅವರಿಗೆ ಈಶ್ವರಮ್ಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಆರ್. ಸುಜಾತಾ ಕೃಷ್ಣ, ಕಾರ್ಯದರ್ಶಿ ಎ.ಆರ್.ಉಷಾ ರಂಗನಾಥ್, ಖಜಾಂಚಿ ಎ.ಪಿ.ಸುಜಾತಾ ಮತ್ತು ಪದಾಧಿಕಾರಿಗಳು, ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
Read also : Davanagere | ಕಳ್ಳತನ ಪ್ರಕರಣ : ಸ್ವತ್ತು ಹಸ್ತಾಂತರ