ದಾವಣಗೆರೆ (Davanagere): ಭಗವಾನ್ ಶ್ರೀಸತ್ಯಸಾಯಿ ಬಾಬಾರ 99ನೇ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ನಗರದ ಪಿ.ಜೆ.ಬಡಾವಣೆಯ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನ.19ರಿಂದ 23ರವರೆಗೆ ಪಂಚ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ.
ನ.19ರಂದು ಬೆಳಿಗ್ಗೆ 11ಕ್ಕೆ ‘ಸೇವಾನಿಕೇತನ (ಬುದ್ಧಿಮಾಂಧ ಮಕ್ಕಳ ಶಾಲೆ) ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ, ಆಟೋಪ ಸಲಕರಣೆ ವಿತರಣೆ, ನ.20ರಂದು ಬುಧವಾರ ಬೆಳಗ್ಗೆ 11ಕ್ಕೆ ‘ಗೋ-ಶಾಲೆ’ ಗೊವುಗಳಿಗೆ ‘ಹುಲ್ಲು’ ಮತ್ತು ಪಶು ಆಹಾರ ವಿತರಣೆ, ನ.21 ಗುರುವಾರ ಬೆಳಗ್ಗೆ 11ಕ್ಕೆ ವಿರೇಶ್ವರ ಪುಣ್ಯಾಶ್ರಮದ ‘ಅಂಧ ಮಕ್ಕಳಿಗೆ’ ಆಹಾರ ಪದಾರ್ಥಗಳು ಮತ್ತು ಪ್ರಸಾದ ವಿತರಣೆ, ನ.22ರಂದು ಶುಕ್ರವಾರ ಬೆಳಗ್ಗೆ 11ಕ್ಕೆ ‘ಆಶ್ರಯ’-ಹಿರಿಯ ವನಿತೆಯರ ಆನಂದಧಾಮದಲ್ಲಿ ಆಹಾರ ಸಾಮಗ್ರಿ ವಸ್ತುಗಳು & ಪ್ರಸಾದ ವಿತರಣೆ ಹಾಗೂ ನ.23ರಂದು ಶನಿವಾರ, ಮಧ್ಯಾಹ್ನ 12ಕ್ಕೆ ‘ಪ್ರೇಮಾಲಯದ-ನಿರಾಶ್ರಿತ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣಗಳ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ನ.19ರಂದು ಯರಗುಂಟೆಯಲ್ಲಿರುವ ಸೇವಾನಿಕೇತನ ಶಾಲೆಯ (ಬುದ್ಧಿಮಾಂಧ್ಯ ಮಕ್ಕಳ ಶಾಲೆ) ವಿದ್ಯಾರ್ಥಿಗಳಿಗೆ ಕಲಿಕಾ, ಆಟೋಪ ಸಲಕರಣೆ ವಿತರಣಾ ಸೇವಾ ಕಾರ್ಯ ಹಮ್ಮಿಕೊಂಡಿದ್ದು, ಎ.ಆರ್.ಉಷಾರಂಗನಾಥ್, ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ನೇತೃತ್ವದಲ್ಲಿ ಶಾಲೆಯ 50 ವಿದ್ಯಾರ್ಥಿಗಳು ಹಾಗೂ 10 ಜನ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಕ್ಕಳಿಗೆ ಅವರ ಕಲಿಕಾ ಸಾಮಥ್ರ್ಯಕ್ಕೆ ಅನುಗುಣವಾದ ಆಟೋಪ- ಅನುಗುಣವಾಗುವಂತಹ ಉಪಯುಕ್ತ ಸ್ವಾಮಿಯ ಪ್ರಸಾದ ವಿತರಿಸಲಿದ್ದಾರೆ ಎಂದು ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.