Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > poem | ಕಣ್ಣುಗಳು ಕಾಯುತ್ತಿವೆ : ಪಿಆರ್. ವೆಂಕಟೇಶ್
ತಾಜಾ ಸುದ್ದಿ

poem | ಕಣ್ಣುಗಳು ಕಾಯುತ್ತಿವೆ : ಪಿಆರ್. ವೆಂಕಟೇಶ್

Dinamaana Kannada News
Last updated: July 16, 2025 5:50 am
Dinamaana Kannada News
Share
Eyes are waiting PR. Venkatesh
SHARE
ಗುಡಿಸಲ ಬಾಗಿಲಲ್ಲಿ
ಹಸಿದ ಹೊಟ್ಟೆಯಲ್ಲಿ
ಭಾರ ಹೊತ್ತವಳ ಬರುವಿಕೆಗೆ
ಕರುಳಪ್ರೀತಿಯ ಕಣ್ಣುಗಳ ಸದಾ ಕಾಯುವಿಕೆ
ಗುಡಿಸಲೊಳಗೆ  ಕಗ್ಗತ್ತಲು
ಆಗಲೇ ಉರಿದು ತಣ್ಣಗಾದ
ತನ್ನಲ್ಲೇ ಹರಡಿಕೊಂಡ ಒಲೆಬೆಂಕಿಯ ಬೆತ್ತಲು
ಜಿಬ್ಲದೊಡಲಲ್ಲಿ ನಿಟ್ಟಾದ ರೊಟ್ಟಿಗಳು
ಹಸಿವನ್ನು ರೇಗಿಸುತ್ತಿವೆ.
ಗುಡಿಸಲ ಸುತ್ತ ಹಬ್ಬಿದ
ಬೀದಿ ದೀಪದ ಮಂದ ಬೆಳಕ ಬೇಧಿಸಿ
ಕಣ್ಣುಗಳು ಕಾಯುತ್ತಿವೆ.

ಸತ್ತ ಇರುಳು
ಗೋರಿ ಸೇರುವ ಮೊದಲೆ ಎದ್ದವಳ ನಡೆ
ಗುಡಿಸಲ ಮುಂದಿನ
ಮಂಜಿನ ಪರೆದೆ ಹೊದ್ದ ಗುಡ್ಡದ ಕಡೆಗೆ
ಮುಗಿಲ ಚುಕ್ಕೆಗಳು ಮಾಯವಾಗಿ
ಬಗ್ಗನೆಯ ಬೆಳಕು ಚಿಮ್ಮಲು ಹವಣಿಸುವಾಗ
ಕಾಡಾಡಿ, ಕಟ್ಟಿಗೆಯ ಹೆಣಭಾರ ಹೊತ್ತು
ಗುಡ್ಡದ ನೆತ್ತಿಯ ಇಳಿಜಾರಿನಿಂದ
ಇಳಿವಾಗವಳು ಕಿನ್ನರಲೋಕದ ಸುಂದರಿ
ಶ್ರಮದ ದೇವತೆ!

ಕಟ್ಟಿಗೆ ಮಾರಲು ಊರಾಡಿ,
ಧನಿಕರ ಹೊಲದಲ್ಲಿ ಕೂಲಿಮಾಡಿ
ದಿನ ಸತ್ತು ಕತ್ತಲಕಂಬಳಿ ಹಾಸುವಾಗ
ಗೇಣು ಹೊಟ್ಟೆ ತುಂಬಿಸಲು
ಚೋಟುಕೂಲಿ ಹಿಡುದು
ಕೊಕ್ಕರೆಯಂಥಹ ಕಾಲುಗಳಿಂದ ತೆವಳುತ್ತಾ
ತೆಳುದೇಹದ, ಕಪ್ಪು ಬಣ್ಣ ಅವಳು
ಬೇರೆಯಾರಲ್ಲ, ನನ್ನಮ್ಮ ಲಮಾಣಿ ಶಾಂತ.
ಅವಳಿಗಾಗಿ ಕಾಯುತ್ತಿವೆ ಕಣ್ಣುಗಳು.

ಗುಡ್ಡದಲ್ಲಿ ಒಣ ಮರದ ಹುಡುಕಾಟ ದಾಟುತ್ತದೆ
ಅವಳುಟ್ಟ ದಾವಣಿಯಲಿ ಇಣುಕುವ ಮೈ
ಪೋತಿಯಾ ಹಾದುಬಂದ ಮೊಲೆಗಳು
ಕಾಲ್ಡಾ ನಾದಗಳಿಗೆ,
ನೂರಾರು ಸೂರ್ಯರನ್ನು ಹಿಡಿದಿಟ್ಡ
ಪೆಟಿಯಾ ಮಿಂಚಿಗೆ
ಕಾಡು ಕಾಯುವನ ಮೀಸೆ, ಕಣ್ಣು ಕುಣಿಯುತ್ತವೆ
ಅನೇಕ ದಾಳಿಗಳ ಎದುರಿಸಿ,
ಅದೆಷ್ಟೋಸಲ
“ಜೀಣಾ ಕಜಕೊ ಲಡಾಯಿ ಛಯಿ”
ಎಂದು ನನ್ನ  ತಲೆ ಸವರುತ್ತಾಳೆ.
ಈದಿ ಏನಾಯ್ತ ಇನ್ನೂ ಬಂದಿಲ್ಲ
ನನ್ನ ಕಣ್ಣುಗಳು ಮಂದ ಬೆಳಕ ಬೇಧಿಸಿ
ಅಮ್ಮ ಬರು ದಾರಿಯನ್ನೇ ನಿಟ್ಟಿಸಿವೆ
ನನ್ನ ನೆರಳನ್ನು ನುಂಗುವಷ್ಟು ಕತ್ತಲು ದಪ್ಪವಾಗಿದೆ
ನಾಲ್ಕು ಜನ ಬಂದರು
ತೇಕುತ್ತ, ತೊದಲುತ್ತ, ಬಿಕ್ಕುತ್
ಅಮ್ಮನಿಗೆ ಕರಿನಾಗರ ಕಚ್ಚದೆ ಎಂದರು
Eyes are waiting PR. Venkatesh
ಆ ಕಗ್ಗತ್ತಲಲ್ಲಿ ನೆತ್ತರು ಸುರಿವ ಕಾಲ
ಎಳೆಯುತ್ತಾ ಬಂದಳು.
ಮಂತ್ರವಾದಿ ಬಂದ, ಕೋಲು ತಿರುವಿ
ಏನೇನೋ ಒದರಿದ
ಔಷಧಿಯವನೂ ಬಂದ
ರಾತ್ರಿ ಕಳೆದು ದಿನ ಕಣ್ಣುತೆರೆದಿತ್ತು
ಅಮ್ಮನ ಕಣ್ಣು ಮುಚ್ಚಿತ್ತು
ಒಲೆಯ ಬೆಂಕಿ ನಮ್ಮ ಬದುಕಂತೆ
ತಣ್ಣನೆಯ ಬೂದಿಯಾಗಿತ್ತು.
ನಾವೆಲ್ಲ ಸೂತ್ರ ಹರಿದ ಗಾಳಿಪಟ
ನಮ್ಮೆದೆಯಲ್ಲಿ ದುಃಖದ ಕಡಲು
ಬಿಸಿಲಲ್ಲಿ ಆವಿಯಾಯಿತು.
ನಾನೀಗ ಶಿಕ್ಷಕ
ನನ್ನೆದೆಯಲ್ಲಿ ಅಮ್ಮನ ಸಾವು ಹೆಪ್ಪುಗಟ್ಟಿದೆ
ಸಂಜೆಯಾಗುತ್ತಲೆ ನನ್ನ ಕಣ್ಣುಗಳು
ಬಾಗಿಲಲ್ಲಿ ಕಾಯುತ್ತವೆ
ಮನೆಯಲ್ಲಿ ಗ್ಯಾಸ್ ಇದೆ
ಕಟ್ಟಿಗೆ ಹೊತ್ತು ಯಾರೇ ಬರಲಿ
ಅವನ್ನೆಲ್ಲಾ ಕೊಂಡು ಭಾರ ಇಳಿಸುವೆ
ದೇಶದ ಹೃದಯಕ್ಕೆ
ಭಾರ ಇಳಿಸುವ  ಗುಣವಿದ್ದರೆ !
( ದಾವಣಿ-ಚೋಲಿ, ಬಂಗಡಿ ಬಳೆ, ಕಾಲ್ಡ-ಕಾಲ್ಗಡಗ,
ಪೇಟಿಯಾ- ಕನ್ನಡಿಯ ಚೂರು ತುಂಬಿದ ಬಟ್ಟೆ,
“ಜೀಣಾ ಕಜಕೊ ಲಡಾಯಿ ಛೆಯಿ – ಬದುಕೆಂಬುದು ಹೋರಾಟ ಕಣೆ)
Read also : ಭದ್ರಾ ಜಲಾಶಯದಲ್ಲಿ 176.9 ಅಡಿ ನೀರು : ತುಂಬಲು 9.1 ಅಡಿ ಮಾತ್ರ ಬಾಕಿ 

ಪಿಆರ್. ವೆಂಕಟೇಶ್

TAGGED:Dinamana.comKannada Newspr-venkateshದಾವಣಗೆರೆ ಜಿಲ್ಲೆ .ದಿನಮಾನ.ಕಾಂಪಿಆರ್. ವೆಂಕಟೇಶ್
Share This Article
Twitter Email Copy Link Print
Previous Article BHADRA DAM ಭದ್ರಾ ಜಲಾಶಯದಲ್ಲಿ 176.9 ಅಡಿ ನೀರು : ತುಂಬಲು 9.1 ಅಡಿ ಮಾತ್ರ ಬಾಕಿ
Next Article Davanagere ದಾವಣಗೆರೆ | ವಿಶೇಷ ಕೋಟಾದಡಿ ಅಗ್ನಿವೀರ್ ನೇಮಕಾತಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಈ ವಾರ ಭಾರೀ ಮಳೆ

ಕರ್ನಾಟಕದಾದ್ಯಂತ ಇನ್ನೊಂದು ವಾರ ಭಾರೀ ಮಳೆಯಾಗಲಿದೆ. ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ,…

By Dinamaana Kannada News

ಕ್ರೀಡಾ ಮನೋಭಾವದಿಂದ  ಪಂದ್ಯಗಳಲ್ಲಿ ಪಾಲ್ಗೊಳ್ಳಿ : ಸೇವಾಲಾಲ್ ಶ್ರೀ

ದಾವಣಗೆರೆ : ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಕ್ರೀಡಾ ಮನೋಭಾವದಿಂದ ಶಾಂತಿ ಮತ್ತು ಸೌಹಾರ್ದತೆಯಿಂದ ಪಂದ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸರ್ದಾರ್ ಸೇವಾಲಾಲ್…

By Dinamaana Kannada News

Davangere | ಆರೋಗ್ಯ ಭಾಗ್ಯವನ್ನು ಕೊಡುವವನು ಧನ್ವಂತರಿ : ವೇದಬ್ರಹ್ಮ ಗೋಪಾಲ ಆಚಾರ್ ಮಣ್ಣೂರ್

ದಾವಣಗೆರೆ  (Davangere) :  ‘ಧನ್ವಂ ತರತೀ ಇತೀ ಧನ್ವಂತರಿ’ – ಅಂದರೆ ಪಾಪವನ್ನು ಕಳೆಯುವವನು, ದೋಷವನ್ನು ದೂರ ಮಾಡುವವನು, ಅನಾರೋಗ್ಯವನ್ನು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ನಗರದೇವತೆ ಶ್ರೀ ದುರ್ಗಾಂಭಿಕಾ ದೇವಿ ಜಾತ್ರಾಮಹೋತ್ಸವ : ಸಚಿವರು- ಸಂಸದರಿಂದ ಹಂದರಕಂಬದ ಪೂಜೆ

By Dinamaana Kannada News
District Collector G.M. Gangadharaswamy
ತಾಜಾ ಸುದ್ದಿ

ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಸೂಚನೆ

By Dinamaana Kannada News
Applications invited
ತಾಜಾ ಸುದ್ದಿ

SC-ST ವಿದ್ಯಾರ್ಥಿಗಳಿಂದ ಶೈಕ್ಷಣಿಕ ಶುಲ್ಕ ಮರುಪಾವತಿಗಾಗಿ ಅರ್ಜಿ ಆಹ್ವಾನ

By Dinamaana Kannada News
ತಾಜಾ ಸುದ್ದಿ

ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಯಲ|ಚುಕ್ಕೆ ಜಿಂಕೆಗಳು ಮೃತ : ಅಧಿಕಾರಿಗಳಿಗೆ ಶಾಸಕ ಬಸವಂತಪ್ಪ ತರಾಟೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?