Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಪರಾಧ ಸುದ್ದಿ > ದಾವಣಗೆರೆ:ಕೌಟುಂಬಿಕ ಮನಸ್ತಾಪ ಅಳಿಯ –ಮಾವ ಆತ್ಮಹತ್ಯೆ
ಅಪರಾಧ ಸುದ್ದಿ

ದಾವಣಗೆರೆ:ಕೌಟುಂಬಿಕ ಮನಸ್ತಾಪ ಅಳಿಯ –ಮಾವ ಆತ್ಮಹತ್ಯೆ

Dinamaana Kannada News
Last updated: January 27, 2026 4:49 pm
Dinamaana Kannada News
Share
Davanagere crime news
SHARE

ದಾವಣಗೆರೆ.ಜ.27: ಪತ್ನಿಯ ನಡವಳಿಕೆಯಿಂದ ಮನನೊಂದ ನವವಿವಾಹಿತ ಹಾಗೂ ಮದುವೆ ಮಾಡಿಸಿದ ಆಕೆಯ ಸೋದರಮಾವ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.

ಘಟನೆಯ ವಿವರ: ಗುಮ್ಮನೂರು ಗ್ರಾಮದ ನಿವಾಸಿ ಹರೀಶ್ (30) ಹಾಗೂ ಆನೆಕೊಂಡದ ನಿವಾಸಿ ರುದ್ರೇಶ್ ಮೃತಪಟ್ಟವರು.

ಸುಮಾರು ಒಂದೂವರೆ ತಿಂಗಳ ಹಿಂದೆಯಷ್ಟೇ ಹರೀಶ್ ಅವರಿಗೆ ಸರಸ್ವತಿ ಎಂಬ ಯುವತಿಯೊಂದಿಗೆ ವಿವಾಹವಾಗಿತ್ತು. ಈ ಸಂಬಂಧವನ್ನು ಸರಸ್ವತಿಯ ಸೋದರಮಾವ ರುದ್ರೇಶ್ ಅವರೇ ಮುಂದೆ ನಿಂತು ಕುದುರಿಸಿದ್ದರು.

ಪತ್ನಿ ಪಲಾಯನ, ಪತಿಗೆ ಕಿರುಕುಳ: ವರದಿಗಳ ಪ್ರಕಾರ, ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿ ಸರಸ್ವತಿಯ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಇತ್ತೀಚೆಗೆ ಆಕೆ ತನ್ನ ಪ್ರಿಯಕರ ಕುಮಾರ್ ಎಂಬಾತನ ಜೊತೆ ಓಡಿಹೋಗಿದ್ದಳು. ಈ ನಡುವೆ, ಪತ್ನಿ ಹಾಗೂ ಆಕೆಯ ಕಡೆಯವರು ಹರೀಶ್ ಮೇಲೆ ಸುಳ್ಳು ಆರೋಪಗಳನ್ನು ಮಾಡಿ, ಪ್ರಾಣ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ನೊಂದ ಹರೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎರಡು ಪುಟಗಳ ಡೆತ್ ನೋಟ್:  ಆತ್ಮಹತ್ಯೆಗೂ ಮುನ್ನ ಹರೀಶ್ ಬರೆದಿಟ್ಟಿರುವ ಎರಡು ಪುಟಗಳ ಡೆತ್ ನೋಟ್ ಲಭ್ಯವಾಗಿದೆ. “ನನ್ನ ಸಾವಿಗೆ ಪತ್ನಿ ಸರಸ್ವತಿ ಮತ್ತು ಆಕೆಯ ಮನೆಯವರೇ ಕಾರಣ. ಮದುವೆಯಾದಾಗಿನಿಂದ ನನಗೆ ನೆಮ್ಮದಿ ಇಲ್ಲದಂತೆ ಮಾಡಿದ್ದಾಳೆ. ಅವಳು ಬೇರೆಯವನ ಜೊತೆ ಓಡಿಹೋದರೂ ನನಗೇ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಪೋಷಕರಿಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ಮಾನ-ಮರ್ಯಾದೆಯೇ ಮುಖ್ಯ,” ಎಂದು ಹರೀಶ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Read also : ಕಣ್ಣಿನ ರಕ್ಷಣೆ ಎಲ್ಲರಿಗೂ ಅಗತ್ಯ : ವಾಸನ್ ಐಕೇರ್ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಪೂರ್ಣಿಮಾ

ಸೋದರಮಾವನ ಸಾವು: ಹರೀಶ್ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ, ಮದುವೆ ಮಾಡಿಸಿದ್ದ ಸೋದರ ಮಾವ ರುದ್ರೇಶ್ ತೀವ್ರ ಆಘಾತಕ್ಕೆ ಒಳಗಾಗಿದ್ದರು. “ನಾನು ಮಾಡಿಸಿದ ಮದುವೆಯಿಂದ ಒಬ್ಬ ಅಮಾಯಕನ ಪ್ರಾಣ ಹೋಯಿತಲ್ಲ” ಎಂಬ ನೈತಿಕ ಹೊಣೆಗಾರಿಕೆ ಮತ್ತು ಅಪರಾಧ ಪ್ರಜ್ಞೆಯಿಂದ ನೊಂದ ರುದ್ರೇಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗೆರೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಡೆತ್ ನೋಟ್ ಹಾಗೂ ಸಂಬಂಧಿಕರ ಹೇಳಿಕೆಗಳ ಆಧಾರದ ಮೇಲೆ ತನಿಖೆ ಮುಂದುವರಿಸಲಾಗಿದೆ. ಒಂದೇ ಕುಟುಂಬದ ನಂಟಿನ ಇಬ್ಬರು ಸಾವನ್ನಪ್ಪಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಕಣ್ಣಿನ ರಕ್ಷಣೆ ಎಲ್ಲರಿಗೂ ಅಗತ್ಯ : ವಾಸನ್ ಐಕೇರ್ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಪೂರ್ಣಿಮಾ
Next Article B.Srineevas davanagere ದಿನಮಾನ-ಪುಸ್ತಕ ವಿಮರ್ಶೆ|ಚಾರಿತ್ರಿಕ ಹೋರಾಟದ ಬೆಂಕಿಯ ಮಳೆ : ಬಿ.ಶ್ರೀನಿವಾಸ 

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere crime news | ಕಳ್ಳತನ ಪ್ರಕರಣದಲ್ಲಿ ಅರೋಪಿ ಬಂಧನ

ದಾವಣಗೆರೆ  (Davanagere):  ಮನೆಯಲ್ಲಿ ಬಂಗಾರ ಕಳ್ಳತನ ಮಾಡಿದ್ದ ಆರೋಪಿಯನ್ನು ಪಿ.ಜೆ.ಬಡಾವಣೆಯ ಪೊಲೀಸರು ಬಂಧಿಸಿ 1 ಲಕ್ಷ ಮೌಲ್ಯದ ಆಭರಣ ವಶಕ್ಕೆ…

By Dinamaana Kannada News

ಧಾರ್ಮಿಕ ಆಚರಣೆಗಳಿಂದ ಧರ್ಮದ ಉಳಿವು ಸಾಧ್ಯ: ಓಂಕಾರ ಶಿವಾಚಾರ್ಯ ಸ್ವಾಮೀಜಿ 

ದಾವಣಗೆರೆ: ಸನಾತನ ಧರ್ಮದಲ್ಲಿ ಪೂಜೆ ಪುನಸ್ಕಾರ ಎನ್ನುವುದು ಧರ್ಮದ ಸಾರಾಂಶವನ್ನು ಸಾರುವುದಕ್ಕಾಗಿ, ಇಂತಹ ಧಾರ್ಮಿಕ ಆಚರಣೆಗಳಿಂದ ಧರ್ಮದ ಉಳಿವು ಸಾಧ್ಯ…

By Dinamaana Kannada News

Davanagere | ಮೆಟ್ರಿಕ್ ನಂತರ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ  ಆ.19  (Davanagere ) : ಪ್ರಸಕ್ತ ಸಾಲಿನಲ್ಲಿ ವಿಕಲಚೇತನ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಪಡೆಯಲು ಪೋಸ್ಟ್‌ -ಮೆಟ್ರಿಕ್ ತರಗತಿಗಳಲ್ಲಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಶಿಕ್ಷಣದ ಜೊತೆಗೆ ವ್ಯವಸಾಯಕ್ಕೆ ಆದ್ಯತೆ ನೀಡಿ: ಶಾಸಕ ಬಿ.ದೇವೇಂದ್ರಪ್ಪ

By Dinamaana Kannada News
Davanagere lok raide
ತಾಜಾ ಸುದ್ದಿ

ಬೆಸ್ಕಾಂ ಎಇಇಗೆ ಲೋಕಾಯುಕ್ತ ಬಿಸಿ: ಶಿವಮೊಗ್ಗ, ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ

By Dinamaana Kannada News
Davanagere
ತಾಜಾ ಸುದ್ದಿ

ಕನ್ನಡ ಭಾಷೆಯಲ್ಲಿ ನಾಮಫಲಕ ಕಡ್ಡಾಯ : ಪಾಲಿಕೆ ಆಯುಕ್ತೆ ರೇಣುಕಾ

By Dinamaana Kannada News
Job fair
ತಾಜಾ ಸುದ್ದಿ

ಮಾಜಿ ಸೈನಿಕರಿಗೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?